ಸಿಹಿ ದೋಸೆ

ರುಚಿಕರವಾದ ಸಿಹಿ ದೋಸೆ ಮಾಡುವ ವಿಧಾನ...

Published: 11th May 2021 02:01 PM  |   Last Updated: 11th May 2021 02:01 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

  • ಅಕ್ಕಿ - ಕಾಲು ಕೆಜಿ
  • ಬೆಲ್ಲ- 1 ಅಚ್ಚು
  • ಕೊಬ್ಬರಿ ಪುಡಿ- 1 ಬಟ್ಟಲು
  • ಏಲಕ್ಕಿ ಪುಡಿ - ಚಿಟಿಕೆಯಷ್ಟು
  • ತುಪ್ಪು- ಸ್ವಲ್ಪ
  • ಉಪ್ಪು- ಸ್ವಲ್ಪ

ಮಾಡುವ ವಿಧಾನ...

  • ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ರಾತ್ರಿಯೇ ನೀರಿನಲ್ಲಿ ನೆನೆ ಹಾಕಿ. ಮಾರನೆಯ ದಿನ ಬೆಲ್ಲವನ್ನು ಚಿಕ್ಕ ಚಿಕ್ಕದಾಗಿ ಪುಡಿ ಮಾಡಿಕೊಳ್ಳಿ.
  • ನಂತರ ಅಕ್ಕಿಯಲ್ಲಿನ ನೀರನ್ನು ಬಸಿದು, ಮಿಕ್ಸಿ ಜಾರಿಗೆ ಹಾಕಿ ಅಕ್ಕಿಯ ಜೊತೆಗೆ ಪುಡಿ ಮಾಡಿಕೊಂಡ ಬೆಲ್ಲ, ಕೊಬ್ಬರಿ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಉಪ್ಪು ಹಾಗೂ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ನೆನೆಯಲು ಬಿಡಿ.
  • ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು, ಕಾವಲಿ ಕಾದ ನಂತರ ತೆಳುವಾಗಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ ರುಚಿಕರವಾದ ಸಿಹಿ ದೋಸೆ ಸವಿಯಲು ಸಿದ್ಧ. 

Stay up to date on all the latest ಆಹಾರ-ವಿಹಾರ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp