ರಾಗಿ ಚಕ್ಕುಲಿ

ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ...
ರಾಗಿ ಚಕ್ಕುಲಿ
ರಾಗಿ ಚಕ್ಕುಲಿ

ಬೇಕಾಗುವ ಪದಾರ್ಥಗಳು...

  • ರಾಗಿ ಹಿಟ್ಟು- 2 ಲೋಟ
  • ನವಣೆ ಹಿಟ್ಟು-1/2 ಲೋಟ
  • ಹುರಿಗಡಲೆ ಪುಡಿ-1/2 ಬಟ್ಟಲು
  • ಇಂಗು- ಸ್ವಲ್ಪ
  • ಖಾರದ ಪುಡಿ- 2 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಜೀರಿಗೆ- 1/2 ಚಮಚ
  • ಬಿಳಿ ಎಳ್ಳು- 1 ಚಮಚ

ಮಾಡುವ ವಿಧಾನ...

  • ರಾಗಿ ಹಿಟ್ಟು ಹಾಗೂ ನವಣೆಹಿಟ್ಟು ಎರಡನ್ನೂ ಚೆನ್ನಾಗಿ ಬೆರಿಸಿ, ಒಂದು ಬಟ್ಟೆಯಲ್ಲಿ ಗಟ್ಟಿಯಾಗಿ ಗಂಟು ಕಟ್ಟಿಕೊಳ್ಳಿ. ಈ ಗಂಟನ್ನು ಒಂದು ಬಟ್ಟಲಿನಲ್ಲಿ ಇಟ್ಟು 15-20 ನಿಮಿಷಗಳ ಕಾಲ ಕುಕ್ಕರ್'ನ ಹಬೆಯಲ್ಲಿ ಬೇಯಿಸಿಕೊಳ್ಳಿ.
  • ಬಿಸಿ ಆರಿದ ಬಳಿಕ ಗಂಟಿನಲ್ಲಿನ ಹಿಟ್ಟಿಗೆ ಉಳಿದ ಪದಾರ್ಥಗಳನ್ನು ಸೇರಿ, ಚೆನ್ನಾಗಿ ನಾದಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 
  • ಚಕ್ಕುಲಿ ಒರಳಿನಲ್ಲಿ ಈ ಹಿಟ್ಟನ್ನು ಒತ್ತಿ, ಕಾದ ಎಣ್ಣೆಯಲ್ಲಿ ಹದವಾಗಿ ಕರಿದರೆ ಗರಿ ಗರಿಯಾದ, ರುಚಿಕರವಾಗ ಹಾಗೂ ಆರೋಗ್ಯಕವಾಹ ಚಕ್ಕುಲಿ ಸವಿಯಲು ಸಿದ್ಧ.
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com