ಬೆಣ್ಣೆ ಮುರುಕ್ಕು

ರುಚಿಕರವಾದ ಬೆಣ್ಣೆ ಮುರುಕ್ಕು ಮಾಡುವ ವಿಧಾನ...
ಬೆಣ್ಣೆ ಮುರುಕ್ಕು
ಬೆಣ್ಣೆ ಮುರುಕ್ಕು

ಬೇಕಾಗುವ ಪದಾರ್ಥಗಳು...

  • ಹುರಿಗಡಲೆ- ಒಂದು ಬಟ್ಟಲು
  • ಅಕ್ಕಿ ಹಿಟ್ಟು- ನಾಲ್ಕು ಬಟ್ಟಲು
  • ಇಂಗು- ಸ್ವಲ್ಪ
  • ಬಿಳಿ ಎಳ್ಳು- 2 ಚಮಚ
  • ಉಪ್ಪು- ರುಚಗೆ ತಕ್ಕಷ್ಟು
  • ಅಚ್ಚ ಖಾರದ ಪುಡಿ- 1 ಚಮಚ
  • ಬೆಣ್ಣೆ- ನಾಲ್ಕು ಚಮಚ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಹುರಿಗಡಲೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
  • ನಂತರ ಹುರಿಗಡಲೆ ಹಾಗೂ ಅಕ್ಕಿ ಹಿಟ್ಟು ಉಪ್ಪು, ಖಾರದ ಪುಡಿ, ಇಂಗು, ಬಿಳಿ ಎಳ್ಳು ಹಾಕಿ ಚೆನ್ನಾಗಿ ಮುಶ್ರಣ ಮಾಡಿ. ನಂತರ ಕಾಯಿಸಿದ ಬೆಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.
  • ಅಗತ್ಯವಿದ್ದಷ್ಟು ನೀರು ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಅಂಚಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು ತುಂಬಿಸಿ. ಕಾದಿರುವ ಎಣ್ಣೆಯಲ್ಲಿ ಚಕ್ಕುಲಿಯನ್ನು ಒತ್ತಿ.
  • ಎರಡೂ ಬದಿ ಕಂದು ಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೂ ಕರಿಯಿರಿ. ಬೇಕಾದರೆ ಪೇಪರ್ ಮೇಲೆ ಚಿಕ್ಕ ಚಿಕ್ಕ ಚಕ್ಕುಲಿ ಒತ್ತಿಟ್ಟುಕೊಂಡು ನಂತರ  ಬಿಸಿಯಾದ ಎಣ್ಣೆಯಲ್ಲಿ ಕರಿದು ತೆಗೆಯಬಹುದು. ಇದು ತಣ್ಣಗಾದ ಮೇಲೆ ಡಬ್ಬದಲ್ಲಿ ತೆಗೆದಿಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com