ಕ್ಯಾರೆಟ್ ಬರ್ಫಿ

ರುಚಿಕರವಾದ ಕ್ಯಾರೆಟ್ ಬರ್ಫಿ ಮಾಡುವ ವಿಧಾನ...
ಕ್ಯಾರೆಟ್ ಬರ್ಫಿ
ಕ್ಯಾರೆಟ್ ಬರ್ಫಿ

ಬೇಕಾಗುವ ಪದಾರ್ಥಗಳು...

  • ತುರಿದ ತೆಂಗಿನಕಾಯಿ – 1 ಬಟ್ಟಲು
  • ತುರಿದ ಕ್ಯಾರೆಟ್ – 1 ಬಟ್ಟಲು
  • ಸಕ್ಕರೆ – ಒಂದೂವರೆ ಬಟ್ಟಲು
  • ತುಪ್ಪ – 2-3 ಚಮಚ
  • ಏಲಕ್ಕಿ ಪುಡಿ – 1 ಚಮಚ
  • ದ್ರಾಕ್ಷಿ, ಗೋಡಂಬಿ- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಹಾಕಿ. ಬಿಸಿ ಮಾಡಿಕೊಳ್ಳಿ. ನಂತರ ತುರಿದ ಕ್ಯಾರೆಟ್ ಹಾಗೂ ತೆಂಗಿನ ತುರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಹುರಿಯಿರಿ. ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
  • ಸಕ್ಕರೆ ಕರಗಲು ಪ್ರಾರಂಭವಾದ ಬಳಿಕ ಉರಿಯನ್ನು ಮಧ್ಯಮದಲ್ಲಿಟ್ಟು, ಕೈಯಾಡಿಸುತ್ತಿರಿ.  ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಗುಳ್ಳೆಗಳು ಕಾಣಿಸಿಕೊಂಡು ದಪ್ಪವಾಗಲು ಪ್ರಾರಂಭವಾಗುತ್ತದೆ. ಈಗ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.
  • ಮಿಶ್ರಣ ಮುದ್ದೆಯಾಗಿ, ಪ್ಯಾನ್‌ನಿಂದ ಬೇರ್ಪಡಲು ಪ್ರಾರಂಭವಾಗುತ್ತಿದ್ದಂತೆ ತಕ್ಷಣ ಅದನ್ನು ಕೆಳಗಿಳಿಸಿ. ಈಗ ತುಪ್ಪ ಸವರಿದ ತಟ್ಟೆಯ ಮೇಲೆ ಮಿಶ್ರಣವನ್ನು ಸಮಾನವಾಗಿ ಹರಡಿ.
  • ಬಳಿಕ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ. ಬೆಚ್ಚಗಿರುವಾಗಲೇ ಚಾಕು ಸಹಾಯದಿಂದ ತುಂಡುಗಳಾಗಿ ಕತ್ತರಿಸಿ. ತಣ್ಣಗಾಗಲು ಬಿಡಿ. ಇದೀಗ ರುಚಿಕರವಾದ ಕ್ಯಾರೆಟ್ ಬರ್ಫಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com