ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್

ರುಚಿಕರವಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ...
ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್
ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್

ಬೇಕಾಗುವ ಪದಾರ್ಥಗಳು...

  • ಅಂಜೂರ – 5
  • ಖರ್ಜೂರ – 2
  • ವಾಲ್ನಟ್ – 5
  • ಬಾದಾಮಿ – 5
  • ಗೋಡಂಬಿ – 10
  • ಒಣ ದ್ರಾಕ್ಷಿ – 10
  • ಪಿಸ್ತಾ – 10
  • ತಣ್ಣಗಿನ ಹಾಲು – 2 ಬಚ್ಚಲುಟ
  • ವೆನಿಲ್ಲಾ ಎಸೆನ್ಸ್– ಅರ್ಧ ಚಮಚ
  • ಸಕ್ಕರೆ ಅಥವಾ ಜೇನುತುಪ್ಪ - ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಒಂದು ಬಟ್ಟಲಿನಲ್ಲಿ 1-2 ಬಟ್ಟಲು ಬೆಚ್ಚಗಿನ ನೀರು ತೆಗೆದುಕೊಂಡು, ಅದರಲ್ಲಿ ಅಂಜೂರ, ಖರ್ಜೂರ, ವಾಲ್ನಟ್, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಹಾಗೂ ಪಿಸ್ತಾ ಹಾಕಿ 30 ನಿಮಿಷ ನೆನೆಸಿಡಿ.
  • ಡ್ರೈಫ್ರೂಟ್ಸ್ 30 ನಿಮಿಷ ಚೆನ್ನಾಗಿ ನೆನೆದ ಬಳಿಕ ಅವುಗಳನ್ನು ನೀರಿನಿಂದ ತೆಗೆದು ಬ್ಲೆಂಡರ್‌ಗೆ ವರ್ಗಾಯಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.
  • ಈಗ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ತಣ್ಣಗಿನ ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
  • ನಿಮ್ಮ ರುಚಿಗೆ ಅನುಸಾರ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಇದೀಗ ರುಚಿಕರವಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com