ಈರುಳ್ಳಿ ಬೋಂಡಾ

ರುಚಿಕರವಾದ ಈರುಳ್ಳಿ ಬೋಂಡಾ ಮಾಡುವ ವಿಧಾನ...
ಈರುಳ್ಳಿ ಬೋಂಡಾ
ಈರುಳ್ಳಿ ಬೋಂಡಾ

ಬೇಕಾಗುವ ಪದಾರ್ಥಗಳು...

  • ಬೋಂಡಾ ಹಿಟ್ಟು: 500 ಗ್ರಾಂ
  • ಅಕ್ಕಿ ಹಿಟ್ಟು: 50 ಗ್ರಾಂ
  • ಉಪ್ಪು- ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ- ಸ್ವಲ್ಪ
  • ಅಡುಗೆ ಸೋಡಾ: 1/2 ಚಮಚ
  • ಕತ್ತರಿಸಿದ ಈರುಳ್ಳಿ: 1 ಬಟ್ಟಲು
  • ಕೊತ್ತಂಬರಿ ಸೊಪ್ಪು: ಕತ್ತರಿಸಿದ್ದು ಸ್ವಲ್ಪ
  • ಹಸಿ ಮೆಣಸಿನಕಾಯಿ: ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು

ಮಾಡುವ ವಿಧಾನ...

  • ಬೋಂಡದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಗೂ ಅಡುಗೆ ಸೋಡಾ, ಅರಿಶಿಣದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ.
  • ಸ್ವಲ್ಪ ನೀರು ಸೇರಿಸಿ ಒಂದು ನಿಮಿಷ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. 
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಬಿಸಿಯಾದ ಬಳಿಕ ಹಿಟ್ಟನ್ನು ಉಂಡೆಗಳ ರೀತಿಯಲ್ಲಿ ಮಾಡಿ ಎಣ್ಣೆಗೆ ಬಿಡಿ. ನಂತರ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಈರುಳ್ಳಿ ಬೋಂಡಾ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com