ಸಬ್ಬಕ್ಕಿ ದೋಸೆ

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಸಬ್ಬಕ್ಕಿ ದೋಸೆ ಮಾಡುವ ವಿಧಾನ...
ಸಬ್ಬಕ್ಕಿ ದೋಸೆ
ಸಬ್ಬಕ್ಕಿ ದೋಸೆ

ಬೇಕಾಗುವ ಪದಾರ್ಥಗಳು...

  • ಸಬ್ಬಕ್ಕಿ / ಸಾಬೂದಾನ- ಅರ್ಧ ಬಟ್ಟಲು
  • ಅಕ್ಕಿ- ಅರ್ಧ ಬಟ್ಟಲು
  • ಆಲೂಗಡ್ಡೆ- ಬೇಯಿಸಿದ್ದು 1
  • ಮೊಸರು- ಕಾಲು ಬಟ್ಟಲು
  • ಹಸಿಮೆಣಸಿನ ಕಾಯಿ - 2 (ಸಣ್ಣಗೆ ಕತ್ತರಿಸಿದ್ದು)
  • ಶುಂಠಿ- 1 ಇಂಚು (ಸಣ್ಣಗೆ ಕತ್ತರಿಸಿದ್ದು)
  • ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
  • ಜೀರಿಗೆ- 1 ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಕಡಲೆಕಾಯಿ- 2 ಚಮಚ (ಹುರಿದು ಪುಡಿಮಾಡಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲನೆಯದಾಗಿ ಬಾಣಲೆಯಲ್ಲಿ ಅರ್ಧ ಬಟ್ಟಲು ಸಬ್ಬಕ್ಕಿಯನ್ನು 4 ರಿಂದ 5 ನಿಮಿಷಗಳ ಕಾಲ ಸುವಾಸನೆಯುಕ್ತವಾಗುವವರೆಗೆ ಹುರಿದುಕೊಳ್ಳಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್'ಗೆ ಹಾಕಿಕೊಳ್ಳಿ, ಬಳಿಕ ಅರ್ಧ ಬಟ್ಟಲು ಅಕ್ಕಿಯನ್ನೂ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
  • ಬೇಯಿಸಿದ ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಇದನ್ನು ಪುಡಿಗೆ ಸೇರಿಸಿಕೊಳ್ಳಿ.
  • ಈ ಮಿಶ್ರಣಕ್ಕೆ ಮೊಸರು, ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕಾಳುಮೆಣಸಿನ ಪುಡಿ, ಕಡಲೆಕಾಯಿ, ಉಪ್ಪು ಸೇರಿಸಿ. ಹಿಟ್ಟಿನಲ್ಲಿ ಉಂಡೆಯಾಗದಂತೆ ಮಿಶ್ರಣ ಮಾಡಿಕೊಳ್ಳಿ.
  • 20 ನಿಮಿಷ ಹಿಟ್ಟನ್ನು ಹಾಗೆ ಬಿಡಿ. ಬಿಸಿಯಾದ ಕಾವಲಿ ಮೇಲೆ ಹಾಕಿ ಎರಡೂ ಬದಿಯಲ್ಲೂ ಕೆಂಪಗಾಗಿಸಿದರೆ ಸಬ್ಬಕ್ಕಿ ದೋಸೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com