ರಾಗಿ ಮಾಲ್ಟ್

ರಾಗಿ ಮಾಲ್ಟ್ ಮಾಡುವ ವಿಧಾನ...
ರಾಗಿ ಮಾಲ್ಟ್
ರಾಗಿ ಮಾಲ್ಟ್

ಬೇಕಾಗುವ ಪದಾರ್ಥಗಳು

  • ರಾಗಿ- 1 ಕೆ.ಜಿ
  • ಗೋಧಿ-ಒಂದು ಬಟ್ಟಲು
  • ಅಕ್ಕಿ- ಒಂದು ಬಟ್ಟಲು
  • ಕಡಲೆಬೇಳೆ- ಸ್ವಲ್ಪ
  • ಉದ್ದಿನಬೇಳೆ- ಸ್ವಲ್ಪ
  • ಹೆಸರುಬೇಳೆ- ಸ್ವಲ್ಪ
  • ಮೆಂತ್ಯೆ- ಸ್ವಲ್ಪ
  • ಸೋಯಾಬೀನ್ - 2 ಚಮಚ
  • ಕಾಳು ಮೆಣಸು- 1 ಚಮಚ
  • ಲವಂಗ- ಒಂದು
  • ಜಾಯಿಕಾಯಿ- ಒಂದು ಇಂಚು
  • ಬಜೆ ಬೇರು- ಒಂದು ಇಂಚು

ಮಾಡುವ ವಿಧಾನ...

  • ರಾಗಿಯನ್ನು ಚೆನ್ನಾಗಿ ತೊಳೆದು, ಮೊಳಕೆ ಬರಿಸಿ ನೆರಳಲ್ಲಿ ಒಣಗಿಸಿ, ಸ್ವಲ್ಪ ಬಿಸಿ ಮಾಡಿಕೊಳ್ಳಿ.
  • ಉಳಿದ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿಮಾಡಿ, ತೆಳುವಾದ ಬಟ್ಟೆಯಿಂದ ಜರಡಿ ಹಿಡಿದಿಟ್ಟುಕೊಳ್ಳಬೇಕು. ಒಂದು ಚಮಚ ಪುಡಿಗೆ ನೀರು ಮಿಶ್ರಣ ಮಾಡಿ ಕುದಿಸಿಕೊಳ್ಳಬೇಕು.
  • ಮೊದಲ ಬಾರಿ ತಿನ್ನಿಸುವಾಗ ಗಂಜಿಯ ಹದಕ್ಕೆ ರಾಗಿ ಸರಿ ಮಾಡಿಕೊಳ್ಳಬೇಕು. ಇದನ್ನು ಸ್ವಲ್ಪ ಸ್ವಲ್ಪವೇ ಮಗುವಿಗೆ ತಿನ್ನಿಸಬೇಕು. ಇದು ಅಭ್ಯಾಸವಾದ ನಂತರ ಪ್ರತಿ ತಿಂಗಳೂ ಒಂದೊಂದು ಚಮಚ ಹೆಚ್ಚಿಸುತ್ತಾ ಗಟ್ಟಿ ಹದ ಬರುವಂತೆ ಮಾಡಿಕೊಳ್ಳಬಹುದು.
  • ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನಿಸಬಹುದು. ರುಚಿಗೆ ಕಲ್ಲು ಸಕ್ಕರೆ ಅಥವಾ ಬೆಲ್ಲ ಸೇರಿಸಬಹುದು. ಒಂದು ವರ್ಷದ ನಂತರ ಒಂದು ಚಮಚ ಡ್ರೈಫ್ರೂಟ್ಸ್ ಪುಡಿ ಸೇರಿಸಿ ಮಕ್ಕಳಿಗೆ ತಿನ್ನಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com