ಡೋನಟ್

 ರುಚಿಕರವಾದ ಡೋನಟ್ ಮಾಡುವ ವಿಧಾನ...
ಡೋನಟ್
ಡೋನಟ್

ಬೇಕಾಗುವ ಪದಾರ್ಥಗಳು...

  • ಬೆಣ್ಣೆ – ಕಾಲು ಬಟ್ಟಲು
  • ಮಾಗಿದ ಬಾಳೆಹಣ್ಣು – 3
  • ಕಂದು ಸಕ್ಕರೆ – ಅರ್ಧ ಬಟ್ಟಲು
  • ವೆನಿಲ್ಲಾ ಸಾರ – ಅರ್ಧ ಚಮಚ
  • ಮೈದಾ ಹಿಟ್ಟು – ಮುಕ್ಕಾಲು ಬಟ್ಟಲು
  • ಓಟ್ಸ್ ಹಿಟ್ಟು – ಕಾಲು ಬಟ್ಟಲು
  • ಬೇಕಿಂಗ್ ಪೌಡರ್ – ಒಂದೂವರೆ ಚಮಚ
  • ಉಪ್ಪು – ಕಾಲು ಚಮಚ
  • ನೀರು – ಕಾಲು ಬಟ್ಟಲು
  • ವಿನೆಗರ್ – ಅರ್ಧ ಚಮಚ
  • ಚಾಕೋಲೇಟ್- ಐಸಿಂಗ್‌ಗೆ
  • ಬೆಣ್ಣೆ – 2 ಚಮಚ
  • ಸಕ್ಕರೆ ಪುಡಿ – 1 ಬಟ್ಟಲು
  • ಕೋಕೋ ಪೌಡರ್ – ಕಾಲು ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
  • ಡೋನಟ್ ಪ್ಯಾನ್‌ಗೆ ಬೆಣ್ಣೆಯನ್ನು ಹಚ್ಚಿಕೊಳ್ಳಿ, ಸ್ವಲ್ಪ ಮೈದಾ ಹಿಟ್ಟನ್ನು ಡಸ್ಟ್ ಮಾಡಿ ಇಟ್ಟುಕೊಳ್ಳಿ.
  • ಈಗ ಒಂದು ಪಾತ್ರೆಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಹಾಕಿಕೊಳ್ಳಿ. ಅದಕ್ಕೆ ಕರಗಿಸಿದ ಬೆಣ್ಣೆ, ಸಕ್ಕರೆ, ವೆನಿಲ್ಲಾ ಸಾರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಅದಕ್ಕೆ ಮೈದಾ ಹಿಟ್ಟು, ಓಟ್ಸ್ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು, ಸ್ವಲ್ಪ ನೀರು ಹಾಗೂ ವಿನೆಗರ್ ಸೇರಿಸಿ, ನಯವಾದ ಹಿಟ್ಟಾಗುವವರೆಗೆ ಮಿಶ್ರಣ ಮಾಡಿ.
  • ಈಗ ಡೋನಟ್ ಪ್ಯಾನ್‌ಗೆ ಈ ಹಿಟ್ಟನ್ನು ಹಾಕಿಕೊಂಡು 15 ನಿಮಿಷಗಳ ಕಾಲ 350 ಡಿಗ್ರಿ ಬಿಸಿಯಲ್ಲಿ ಓವನ್‌ನಲ್ಲಿಟ್ಟು ಬೇಯಿಸಿಕೊಳ್ಳಿ.
  • ಬಳಿಕ ಅದನ್ನು ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಪ್ಯಾನ್ ಅನ್ನು ಮಗುಚಿ ಹಾಕಿ ಡೋನಟ್‌ಗಳನ್ನು ಪ್ಯಾನ್‌ಗಳಿಂದ ಬೇರ್ಪಡಿಸಿ.
  • ಈಗ ಐಸಿಂಗ್ ತಯಾರಿಸಲು ಒಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ ಹಾಕಿ, ಪುಡಿ ಮಾಡಿದ ಸಕ್ಕರೆ ಹಾಗೂ ಕೋಕೋ ಪೌಡರ್ ಸೇರಿಸಿ ಸ್ವಲ್ಪ ನೀರನ್ನು ಚಿಮುಕಿಸಿ ಮಿಶ್ರಣ ಮಾಡಿ.  ಸ್ಥಿರತೆ ನೋಡಿಕೊಂಡು ನೀವು ಬೇಕೆಂದರೆ ಇನ್ನಷ್ಟು ನೀರು ಸೇರಿಸಬಹುದು.
  • ಈಗ ತಣ್ಣದಾದ ಡೋನಟ್‌ಗಳನ್ನು ಅರ್ಧದಷ್ಟು ಕೋಕೋ ಪೌಡರ್ ಮಿಶ್ರಣದಲ್ಲಿ ಅದ್ದಿ, ತೆಗೆಯಿರಿ. ಐಸಿಂಗ್ ಡೋನಟ್ ಮೇಲೆ ಸೆಟ್ ಆಗಲು ಸ್ವಲ್ಪ ಸಮಯ ನೀಡಿ.
  • ಡೋನಟ್ ಐಸಿಂಗ್ ಗಟ್ಟಿಯಾದ ಬಳಿಕ ಬೇಕರಿಯಲ್ಲಿ ಸಿಗುವಂತಹ ಡೋನಟ್ ನಂತೆ ಸವಿಯಲು ಸಿದ್ಧವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com