ಸಬ್ಬಕ್ಕಿ ಇಡ್ಲಿ

ರುಚಿಕರವಾದ ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ...
ಸಬ್ಬಕ್ಕಿ ಇಡ್ಲಿ
ಸಬ್ಬಕ್ಕಿ ಇಡ್ಲಿ

ಬೇಕಾಗುವ ಪದಾರ್ಥಗಳು...

  • ಸಬ್ಬಕ್ಕಿ- ಒಂದು ಬಟ್ಟಲು
  • ಇಡ್ಲಿ ರವೆ- ಒಂದು ಬಟ್ಟಲು
  • ಮೊಸರು- 2 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಗೋಡಂಬಿ- ಸ್ವಲ್ಪ
  • ಎಣ್ಣೆ- ಸ್ವಲ್ಪ

ಮಾಡುವ ವಿಧಾನ...

  • ಸಬ್ಬಕ್ಕಿ ಹಾಗೂ ರವೆಯನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ತಾಜಾ ಹುಳಿ ಬಂದ ಮೊಸರು ಸೇರಿಸಿ ಒಂದು ರಾತ್ರಿ ನೆನೆಯಲು ಬಿಡಿ.
  • ಮರು ದಿನ ಇಡ್ಲಿ ಹಿಟ್ಟು ದಪ್ಪಗಾಗಿದ್ದ ಮಾತ್ರ ನೀರು ಸೇರಿಸಿ. ನಂತರ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೊಸರಿನಲ್ಲಿ ನೆನೆದ ಸಬ್ಬಕ್ಕಿಯನ್ನು ಕರಗುವವರೆಗೆ ತಿರುಗಿಸಿ.
  • ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.. ಇಡ್ಲಿ ಅಚ್ಚಿಗೆ ಎಣ್ಣೆ ಸವರಿ ಅದಕ್ಕೆ ಹಿಟ್ಟು ಹಾಕಿ ಅದರ ಮೇಲೆ ಗೋಡಂಬಿ ಸೇರಿಸಿ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com