ಯುಗಾದಿ ವಿಶೇಷ: ಹೋಳಿಗೆ

ರುಚಿಕರವಾದ ಹೋಳಿಗೆ ಮಾಡುವ ವಿಧಾನ...
ಹೋಳಿಗೆ
ಹೋಳಿಗೆ

ಬೇಕಾಗುವ ಪದಾರ್ಥಗಳು...

  • ಮೈದಾ ಹಿಟ್ಟು ಅಥವಾ ಚಿರೋಟಿ ರವೆ -1 ಬಟ್ಟಲು
  • ಅರಿಶಿಣದ ಪುಡಿ- ಸ್ವಲ್ಪ
  • ಉಪ್ಪು-ಚಿಟಿಕೆಯಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ತೊಗರಿ ಬೇಳೆ- 2 ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಕೊಬ್ಬರಿ ಪುಡಿ- ಮುಕ್ಕಾಲು ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಮೈದಾ ಹಿಟ್ಟು ಅಥವಾ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಚಿಟಿಕೆ ಉಪ್ಪು, ಅರಿಶಿಣ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ, ಸ್ವಲ್ಪವೇ ನೀರಿ ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ಜಿಗುಟಾದ ಮತ್ತು ನಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ಬಳಿಕ ಹಿಟ್ಟು ಎಣ್ಣೆಯಲ್ಲಿ ಮುಳುಗಿಸುವಷ್ಟು ಎಣ್ಣೆಯನ್ನು ಹಾಕಿ. ಬಳಿಕ ಹಿಟ್ಟನ್ನು 3 ಗಂಟೆ ಅಥವಾಗ ಅದಕ್ಕಿಂತಲೂ ಹೆಚ್ಚು ಮುಚ್ಚಿಟ್ಟು, ನೆನೆಯಲು ಬಿಡಿ.
  • ನಂತರ ಪ್ರೆಶರ್ ಕುಕ್ಕರ್ ನಲ್ಲಿ ಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ 2 ಕೂಗು ಕೂಗಿಸಿಕೊಳ್ಳಿ.
  • ನಂತರ ಪ್ರೆಶರ್ ಕುಕ್ಕರ್ ತಣ್ಣದಾದ ಬಳಿಕ ನೀರನ್ನು ಬಸಿದುಕೊಳ್ಳಿ. ಬಳಿಕ ಬೇಳೆಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು, ಮರಳಿ ಬೇಳೆಯನ್ನು ಒಲೆಯ ಮೇಲಿಟ್ಟು ಅದಕ್ಕೆ, 2 ಬಟ್ಟಲು ಬೆಲ್ಲ ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ದಪ್ಪಗಾಗುವವರೆ, ತಳ ಹತ್ತದಂತೆ ಕೈಯಾಡಿಸುತ್ತಾ ನೋಡಿಕೊಳ್ಳಿ.
  • ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಕೊಬ್ಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
  • ಇದು ತಣ್ಣಗಾದ ಬಳಿಕ ಅನುಕೂಲವಿದ್ದರೆ ಒರಳಿನಲ್ಲಿ ಹಾಕಿ ರುಬ್ಬಿಕೊಳ್ಳಿ. ಇಲ್ಲದಿದ್ದರೆ, ಮಿಕ್ಸಿ ಜಾರ್'ಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
  • ನಂತರ ಈಗಾಗಲೇ ಸಿದ್ಧಪಡಿಸಿಕೊಂಡಿದ್ದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಕೈಯಿಂದ ಚಪ್ಪಟೆ ಮಾಡಿ, ಮಧ್ಯೆ ಬೇಳೆಯ ಊರಣವನ್ನು ಇಟ್ಟು ಎಲ್ಲಾ ಬದಿಗಳನ್ನೂ ಹಿಟ್ಟಿನಿಂದ ಮುಚ್ಚಿ. ಬಳಿಕ ಈ ಉಂಡೆಯನ್ನು ತಪಾತಿಯಂತೆ ತಟ್ಟಿಕೊಳ್ಳಿ.
  • ಒಲೆಯ ಮೇಲೆ ತವಾ ಇಟ್ಟು, ಕಾದ ನಂತರ ಒಬ್ಬಟ್ಟನ್ನು ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿಕೊಂಡರೆ, ರುಚಿಕರವಾದ ಬೇಳೆ ಹೋಳಿಗೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com