ಸ್ವೀಟ್ ಕಾರ್ನ್ ಪಕೋಡಾ

ರುಚಿಕರವಾದ ಸ್ವೀಟ್ ಕಾರ್ನ್ ಪಕೋಡಾ ಮಾಡುವ ವಿಧಾನ...
ಸ್ವೀಟ್ ಕಾರ್ನ್ ಪಕೋಡಾ
ಸ್ವೀಟ್ ಕಾರ್ನ್ ಪಕೋಡಾ

ಬೇಕಾಗುವ ಪದಾರ್ಥಗಳು...

  • ಸ್ವೀಟ್ ಕಾರ್ನ್- 1 ಬಟ್ಟಲು (ಬೇಯಿಸಿ ತರಿ ತರಿಯಾಗಿ ರುಬ್ಬಿದ್ದು)
  • ಈರುಳ್ಳಿ- 1  (ಸಣ್ಣಗೆ ಹೆಚ್ಚಿಕೊಂಡಿದ್ದು)
  • ಕಡಲೆಹಿಟ್ಟು- ಅರ್ಧ ಬಟ್ಟಲು
  • ಹಸಿಮೆಣಸಿನ ಕಾಯಿ- 2-3 (ಸಣ್ಣಗೆ ಹೆಚ್ಚಿಕೊಂಡಿದ್ದು)
  • ಅಕ್ಕಿ ಹಿಟ್ಟು-1 ಚಮಚ
  • ಅರಿಶಿನ - ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಚಾಟ್ ಮಸಾಲ- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಂಡಿದ್ದು)
  • ಕರಿಬೇವು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಂಡಿದ್ದು)
  • ಜೀರಿಗೆ ಪುಡಿ- ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಒಂದು ಬೌಲ್ ಗೆ ತರಿ ತರಿಯಾಗಿ ರುಬ್ಬಿದ ಕಾರ್ನ್ ಹಾಕಿ ನಂತರ ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಕೊತ್ತಂಬರಿ ಸೊಪ್ಪು,ಅರಿಶಿನ, ಚಾಟ್ ಮಸಾಲ, ಜೀರಿಗೆಪುಡಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಸ್ವಲ್ಪ ಸ್ವಲ್ಪ ಹಿಟ್ಟು ಕೈಯಲ್ಲಿ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರಗೆ ಕರಿಯಿರಿ. ಇದೀಗ ರುಚಿಕರವಾದ ಸ್ವೀಟ್ ಕಾರ್ನ್ ಪಕೋಡಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com