ಬಾಳೆ ಹಣ್ಣಿನ ಹಲ್ವಾ

ರುಚಿಕರವಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ...
ಬಾಳೆ ಹಣ್ಣಿನ ಹಲ್ವಾ
ಬಾಳೆ ಹಣ್ಣಿನ ಹಲ್ವಾ

ಬೇಕಾಗುವ ಪದಾರ್ಥಗಳು...

  • ಗೋಧಿ ಹಿಟ್ಟು- 3 ಬಟ್ಟಲು

  • ಸಕ್ಕರೆ ಅಥವಾ ಬೆಲ್ಲ- 3 ಬಟ್ಟಲು

  • ಬಾಳೆ ಹಣ್ಣು- 5

  • ತುಪ್ಪ- ಎರಡೂವರೆ ಬಟ್ಟಲು

  • ಹಾಲು- 1 ಬಟ್ಟಲು

  • ದ್ರಾಕ್ಷಿ-ಗೋಡಂಬಿ-ಸ್ವಲ್ಪ

  • ಉಪ್ಪು- ಚಿಟಿಕೆಯಷ್ಟು

ಮಾಡುವ ವಿಧಾನ...

  • ಒಂದು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಸೇರಿಸಿ ಪರಿಮಳ ಬರುವಂತೆ ಹುರಿಯಿರಿ.

  • ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಮತ್ತೆ ಹುರಿಯಿರಿ. ನಂತರ ಎರಡು ಕಪ್ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

  • ನಂತರ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕೆದಕಿ ಬೇಯಿಸಿ. ಗಟ್ಟಿಯಾದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಅಂಟಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com