ಶಾಹಿ ಪನ್ನೀರ್ ಬಿರಿಯಾನಿ

ರುಚಿಕರವಾದ ಶಾಹಿ ಪನ್ನೀರ್ ಬಿರಿಯಾನಿ ಮಾಡುವ ವಿಧಾನ...
ಶಾಹಿ ಪನೀರ್ ಬಿರಿಯಾನಿ
ಶಾಹಿ ಪನೀರ್ ಬಿರಿಯಾನಿ

ಬೇಕಾಗುವ ಪದಾರ್ಥಗಳು...

  • ಬಾಸುಮತಿ ಅಕ್ಕಿ- 1 ಬಟ್ಟಲು

  • ತುಪ್ಪ-ಸ್ವಲ್ಪ

  • ಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪ

  • ಪೆಪ್ಪರ್- ಸ್ವಲ್ಪ

  • ಪಲಾವ್ ಎಲೆ- 4-6

  • ಈರುಳ್ಳಿ- 1

  • ಹಸಿಮೆಣಸಿನ ಕಾಯಿ- 6

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ

  • ಕ್ಯಾರೇಟ್, ಬೀನ್ಸ್, ಹಸಿಬಟಾಣಿ- ಸ್ವಲ್ಪ

  • ಪನ್ನೀರ್- 1 ಬಟ್ಟಲು

  • ಗರಂ ಮಸಾಲೆ- ಅರ್ಧ ಚಮಚ

  • ಚಾಟ್ ಮಸಾಲೆ- ಕಾಲು ಚಮಚ

  • ದನಿಯಾ ಪುಡಿ- ಅರ್ಧ ಚಮಚ

  • ಪೆಪ್ಪರ್ ಪುಡಿ- ಸ್ವಲ್ಪ

  • ಜೀರಿಗೆ ಪುಡಿ- ಸ್ವಲ್ಪ

  • ಉಪ್ಪು- ರುಚಿಗೆ ತಕ್ಕಷ್ಟು

  • ಬಿರಿಯಾನಿ ಮಸಾಲೆ ಪುಡಿ- 1 ಚಮಚ

  • ಬೆಣ್ಣೆ- ಸ್ವಲ್ಪ

  • ಗೋಡಂಬಿ, ದ್ರಾಕ್ಷಿ, ಪಿಸ್ತಾ- ಸ್ವಲ್ಪ

  • ಬಾದಾಮಿ- ಸ್ವಲ್ಪ (ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದದ್ದು)

  • ಕೇಸರಿ- ಹಾಲಿನಲ್ಲಿ ನೆನೆಸಿದ್ದು ಸ್ವಲ್ಪ

ಮಾಡುವ ವಿಧಾನ...

  • ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು, ಕೊಂಚ ನೆನೆಸಿ, ಉದುರು ಉದುರಾಗಿ ಬೇಯಿಸಿ ಅನ್ನ ತಯಾರಿಸಿಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ, ಬೆಣ್ಣೆ ಹಾಕಿ, ಗೊಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಪನೀರ್, ಈರುಳ್ಳಿಯನ್ನು ಹುರಿದಿಟ್ಟುಕೊಳ್ಳಬೇಕು.

  • ನಂತರ ಕುಕ್ಕರ್ ಬಿಸಿ ಮಾಡಿ, ತುಪ್ಪ ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಪಲಾವ್ ಎಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿಯಿರಿ. ಬಳಿಕ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಕ್ಯಾರೇಟ್, ಬಟಾಣಿ, ಬೀನ್ಸ್ ಹಾಕಿ ಹುರಿಯಿರಿ. ಈಗ ಗರಂ ಮಸಾಲೆ, ಚಾಟ್ ಮಸಾಲೆ, ದನಿಯಾ ಪುಡಿ, ಪೆಪ್ಪರ್ ಪುಡಿ, ಜೀರಿಗೆ ಪುಡಿ, ಉಪ್ಪು, ಬಿರಿಯಾನಿ ಮಸಾಲೆ, ಇವೆಲ್ಲವನ್ನೂ ಸೇರಿಸಿ. ಒಂದು ವಿಶಲ್ ಬರುವ ಹಾಗೆ ಬೇಯಿಸಿ. ಬಳಿಕ ಇದಕ್ಕೆ ಕೇಸರಿ ದಳ, ಅನ್ನ, ಹುರಿದಿಟ್ಟ ಪನೀರ್, ಈರುಳ್ಳಿ, ಡ್ರೈಫ್ರೂಟ್ಸ್ ಸೇರಿಸಿದರೆ, ಶಾಹಿ ಪನೀರ್ ಬಿರಿಯಾನಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com