ಪಾಲಕ್ ಖಿಚ್ಡಿ | Palak Khichdi recipe in Kannada

ದಿನನಿತ್ಯದ ಆಹಾರದಲ್ಲಿ ಆರೋಗ್ಯ ಮತ್ತು ರುಚಿ ಎರಡನ್ನೂ ಸಮತೋಲನಗೊಳಿಸಲು ಅತ್ಯುತ್ತಮ ಆಯ್ಕೆ ಪಾಲಕ್ ಖಿಚ್ಡಿ. ಅಕ್ಕಿ, ಹೆಸರಬೇಳೆ ಮತ್ತು ತಾಜಾ ಪಾಲಕ್ ಸೊಪ್ಪಿನ ಸಂಯೋಜನೆಯಿಂದ ತಯಾರಾಗುವ ಈ ಖಿಚ್ಡಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ.
Palak Khichdi
ಪಾಲಕ್ ಖಿಚ್ಡಿ
Updated on

ದಿನನಿತ್ಯದ ಆಹಾರದಲ್ಲಿ ಆರೋಗ್ಯ ಮತ್ತು ರುಚಿ ಎರಡನ್ನೂ ಸಮತೋಲನಗೊಳಿಸಲು ಅತ್ಯುತ್ತಮ ಆಯ್ಕೆ ಪಾಲಕ್ ಖಿಚ್ಡಿ. ಅಕ್ಕಿ, ಹೆಸರಬೇಳೆ ಮತ್ತು ತಾಜಾ ಪಾಲಕ್ ಸೊಪ್ಪಿನ ಸಂಯೋಜನೆಯಿಂದ ತಯಾರಾಗುವ ಈ ಖಿಚ್ಡಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಮಕ್ಕಳು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ಇಷ್ಟಪಡುವ ಈ ಖಿಚ್ಡಿ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಸೂಕ್ತವಾದ ಆರೋಗ್ಯಕರ ಆಹಾರವಾಗಿದೆ.

ಬೇಕಾಗುವ ಪದಾರ್ಥಗಳು...

  • ಅಕ್ಕಿ – 1 ಬಟ್ಟಲು

  • ಹೆಸರಬೇಳೆ (ಮೂಂಗ್ ದಾಲ್) – ½ ಬಟ್ಟಲು

  • ಪಾಲಕ್ ಸೊಪ್ಪು – 2 ಬಟ್ಟಲು (ಸಣ್ಣಗೆ ಕತ್ತರಿಸಿದ್ದು)

  • ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)

  • ಟೊಮೆಟೊ – 1 (ಸಣ್ಣದಾಗಿ ಕತ್ತರಿಸಿದ್ದು)

  • ಹಸಿಮೆಣಸಿನಕಾಯಿ – 2 (ಉದ್ದವಾಗಿ ಸೀಳಿದ್ದು)

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಅರಿಶಿನ – ¼ ಚಮಚ

  • ಜೀರಿಗೆ – 1 ಚಮಚ

  • ತುಪ್ಪ ಅಥವಾ ಎಣ್ಣೆ – 2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ನೀರು – 4 ರಿಂದ 5 ಬಟ್ಟಲು

  • ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

  • ಒಗ್ಗರಣೆಗೆ

  • ತುಪ್ಪ – 1 ಚಮಚ

  • ಜೀರಿಗೆ – ½ ಚಮಚ

  • ಕಾಳುಮೆಣಸಿನ ಪುಡಿ – ¼ ಚಮಚ(ಐಚ್ಛಿಕ)

  • ಇಂಗು- ಒಂದು ಚಿಟಿಕೆ

Palak Khichdi
ಕೀಮಾ ನಾನ್ | Keema Naan recipe in Kannada

ಮಾಡುವ ವಿಧಾನ...

  • ಅಕ್ಕಿ ಮತ್ತು ಹೆಸರಬೇಳೆಯನ್ನು ಚೆನ್ನಾಗಿ ತೊಳೆದು 15–20 ನಿಮಿಷ ನೆನೆಸಿಡಿ.

  • ಕುಕ್ಕರ್‌ನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ ನಂತರ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

  • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ.

  • ನಂತರ ಟೊಮೆಟೊ, ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.

  • ಕತ್ತರಿಸಿದ ಪಾಲಕ್ ಸೊಪ್ಪು ಸೇರಿಸಿ 2–3 ನಿಮಿಷ ಬೇಯಿಸಿ.

  • ಈಗ ನೆನೆಸಿದ ಅಕ್ಕಿ ಮತ್ತು ಹೆಸರಬೇಳೆ ಸೇರಿಸಿ ಚೆನ್ನಾಗಿ ಕಲಸಿ.

  • 4–5 ಕಪ್ ನೀರು ಮತ್ತು ಅಗತ್ಯ ಉಪ್ಪು ಸೇರಿಸಿ, ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ 3–4 ವಿಸಿಲ್ ಬರುವವರೆಗೆ ಬೇಯಿಸಿ. ನಂತರ ಪ್ರೆಷರ್ ತೆಗೆದು, ಚೆನ್ನಾಗಿ ಕಲಸಿ.

  • ನಂತರ ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಇಂಗು ಮತ್ತು ಕಾಳುಮೆಣಸಿನ ಪುಡಿ ಹಾಕಿ, ನಂತರ ಖಿಚ್ಡಿಗೆ ಹಾಕಿ ಕಲಸಿ.

ಬಡಿಸುವ ವಿಧಾನ...

ಬಿಸಿ ಬಿಸಿ ಪಾಲಕ್ ಖಿಚ್ಡಿಯನ್ನು ಮೊಸರು, ರೈತಾ, ಉಪ್ಪಿನಕಾಯಿ ಅಥವಾ ಪಾಪಡ್ ಜೊತೆಗೆ ಬಡಿಸಿದರೆ ತುಂಬಾ ರುಚಿಯಾಗಿರುತ್ತದೆ.

ಟಿಪ್ಸ್..

  • ಮಕ್ಕಳಿಗಾಗಿ ಮಾಡುತ್ತಿದ್ದರೆ ಹಸಿಮೆಣಸಿನಕಾಯಿಯ ಪ್ರಮಾಣವನ್ನು ಕಡಿಮೆ ಮಾಡಿ.

  • ಹೆಚ್ಚು ಪೌಷ್ಟಿಕಾಂಶಕ್ಕಾಗಿ ಕ್ಯಾರೆಟ್, ಬಟಾಣಿ ಅಥವಾ ಜೋಳವನ್ನು ಸೇರಿಸಬಹುದು.

  • ಮೃದುವಾದ ಖಿಚ್ಡಿ ಬೇಕಿದ್ದರೆ ಸ್ವಲ್ಪ ಹೆಚ್ಚು ನೀರು ಸೇರಿಸಿ ಬೇಯಿಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com