ಕೀಮಾ ನಾನ್ | Keema Naan recipe in Kannada

ಮನೆಯಲ್ಲೇ ಹೋಟೆಲ್‌ ಶೈಲಿಯ ರುಚಿಕರ ಕೀಮಾ ನಾನ್ ತಯಾರಿಸಬೇಕೆಂದಿದ್ದರೆ ಈ ರೆಸಿಪಿ ನಿಮಗಾಗಿ. ಮೃದುವಾದ ನಾನ್ ಒಳಗೆ ಖಾರದ, ಮಸಾಲೆಯುಕ್ತ ಕೀಮಾ ಸ್ಟಫಿಂಗ್ ತುಂಬಿ ತಯಾರಿಸುವ ಈ ಖಾದ್ಯ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.
Keema Naan
ಕೀಮಾ ನಾನ್
Updated on

ಮನೆಯಲ್ಲೇ ಹೋಟೆಲ್‌ ಶೈಲಿಯ ರುಚಿಕರ ಕೀಮಾ ನಾನ್ ತಯಾರಿಸಬೇಕೆಂದಿದ್ದರೆ ಈ ರೆಸಿಪಿ ನಿಮಗಾಗಿ. ಮೃದುವಾದ ನಾನ್ ಒಳಗೆ ಖಾರದ, ಮಸಾಲೆಯುಕ್ತ ಕೀಮಾ ಸ್ಟಫಿಂಗ್ ತುಂಬಿ ತಯಾರಿಸುವ ಈ ಖಾದ್ಯ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಚಿಕನ್ ಅಥವಾ ಮಟನ್ ಕೀಮಾದಿಂದ ಸುಲಭವಾಗಿ ತಯಾರಿಸಬಹುದಾದ ಈ ನಾನ್ ಅನ್ನು ಮೊಸರು ಬಜ್ಜಿ, ಮೊಸರು ಅಥವಾ ಗ್ರೇವಿ ಜೊತೆ ಸವಿದರೆ ಅದರ ರುಚಿಯೇ ಬೇರೆ.

ಬೇಕಾಗುವ ಪದಾರ್ಥಗಳು...

  • ಮೈದಾ – 2 ಬಟ್ಟಲು

  • ಮೊಸರು – ¼ ಬಟ್ಟಲು

  • ಸಕ್ಕರೆ – 1 ಚಮಚ

  • ಉಪ್ಪು – 1 ಚಮಚ

  • ಬೇಕಿಂಗ್ ಪೌಡರ್ – 1 ಚಮಚ

  • ಬೇಕಿಂಗ್ ಸೋಡಾ – ¼ ಚಮಚ

  • ಎಣ್ಣೆ – 2 ಟೇಬಲ್ ಚಮಚ

  • ಉಗುರು ಬೆಚ್ಚಗಿನ ನೀರು – ಅಗತ್ಯಕ್ಕೆ ತಕ್ಕಷ್ಟು

ಕೀಮಾ ಸ್ಟಫಿಂಗ್‌ಗೆ

  • ಚಿಕನ್ ಅಥವಾ ಮಟನ್ ಕೀಮಾ – 250 ಗ್ರಾಂ

  • ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ಜು)

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಹಸಿಮೆಣಸಿನಕಾಯಿ – 2 (ಸಣ್ಣಗೆ ಕತ್ತರಿಸಿದ್ದು)

  • ಅರಿಶಿನ – ¼ ಚಮಚ

  • ಖಾರದ ಪುಡಿ – 1 ಚಮಚ

  • ಧನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲಾ – ½ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು – 2 ಚಮಚ

  • ಎಣ್ಣೆ – 2 ಚಮಚ

ಕೀಮಾ ನಾನ್ ಮೇಲೆ ಸವರಲು

  • ಬೆಣ್ಣೆ ಅಥವಾ ತುಪ್ಪ – 2 ಚಮಚ

  • ಬೆಳ್ಳುಳ್ಳಿ (ಐಚ್ಛಿಕ) – ಸಣ್ಣಗೆ ಕತ್ತರಿಸಿದ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

Keema Naan
ಫಿಶ್ ಪಕೋಡಾ | Fish Pakora recipe in Kannada

ಮಾಡುವ ವಿಧಾನ...

  • ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್ ಹಾಗೂ ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊಸರು ಮತ್ತು ಎಣ್ಣೆ ಸೇರಿಸಿ ಅಗತ್ಯವಿರುವಷ್ಟು ಉಗುರುಬೆಚ್ಚಗಿನ ನೀರನ್ನು ಹಾಕಿ ಮೃದುವಾದ ಹಿಟ್ಟನ್ನು ಕಲಸಿ. ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಸವರಿ ಮುಚ್ಚಿ 1–2 ಗಂಟೆಗಳ ಕಾಲ ನೆನೆಯಲು ಬಿಡಿ.

  • ಈಗ ಸ್ಟಫಿಂಗ್ ತಯಾರಿಸಲು ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಿ. ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.

  • ನಂತರ ಕೀಮಾವನ್ನು ಸೇರಿಸಿ 8–10 ನಿಮಿಷ ಚೆನ್ನಾಗಿ ಬೇಯಿಸಿ. ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಹಾಗೂ ಉಪ್ಪು ಸೇರಿಸಿ ಕಲಸಿ. ನೀರು ಸಂಪೂರ್ಣ ಆವಿಯಾಗುವವರೆಗೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ತಣ್ಣಗಾಗಲು ಬಿಡಿ.

  • ಹಿಟ್ಟನ್ನು ಸಮಾನ ಉಂಡೆಗಳಾಗಿ ಮಾಡಿಕೊಂಡು ಸಣ್ಣ ಪೂರಿಯಂತೆ ಲಟ್ಟಿಸಿ. ಮಧ್ಯದಲ್ಲಿ 2–3 ಚಮಚ ಕೀಮಾ ಮಿಶ್ರಣ ಇಟ್ಟು ಅಂಚುಗಳನ್ನು ಮುಚ್ಚಿ ಮತ್ತೆ ನಿಧಾನವಾಗಿ ನಾನ್ ಆಕಾರದಲ್ಲಿ ಲಟ್ಟಿಸಿ.

  • ತವಾ ಅಥವಾ ಓವನ್ ಅನ್ನು ಚೆನ್ನಾಗಿ ಬಿಸಿ ಮಾಡಿ. ನಾನ್ ಅನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ. ಕೊನೆಯಲ್ಲಿ ಬೆಣ್ಣೆ ಅಥವಾ ತುಪ್ಪ ಸವರಿ. ಬೇಕಿದ್ದರೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ, ಬಿಸಿ ಬಿಸಿಯಾಗಿ ಬಡಿಸಿ.

ಟಿಪ್ಸ್...

  • ಸ್ಟಫಿಂಗ್ ಸಂಪೂರ್ಣ ತಣ್ಣಗಾದ ನಂತರವೇ ನಾನ್‌ನಲ್ಲಿ ತುಂಬಿ.

  • ಕೀಮಾದಲ್ಲಿರುವ ನೀರು ಸಂಪೂರ್ಣ ಆವಿಯಾಗಿರಬೇಕು. ಇಲ್ಲವಾದರೆ ನಾನ್ ಹರಿದು ಹೋಗಬಹುದು.

  • ಮಟನ್ ಕೀಮಾ ಬಳಸಿದರೆ ಮೊದಲು ಚೆನ್ನಾಗಿ ಬೇಯಿಸಿ ನಂತರ ಸ್ಟಫಿಂಗ್ ಮಾಡಿ.

  • ತವಾ, ತಂದುರ್ ಅಥವಾ ಓವನ್ – ಯಾವುದರಲ್ಲಾದರೂ ಈ ನಾನ್ ತಯಾರಿಸಬಹುದು.

  • ಮೊಸರು ಬಜ್ಜಿ (ರೈತಾ), ಪುದೀನಾ ಚಟ್ನಿ, ದಾಲ್ ಮಖಾನಿ ಅಥವಾ ಬಟರ್ ಚಿಕನ್ ಜೊತೆ ಸವಿದರೆ ಅತ್ಯುತ್ತಮ ರುಚಿ ಸಿಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com