ಕಸ ಖಾಲಿ ಮಾಡಿದ್ರೂ ಬುಟ್ಟಿಯಿಂದ ಗಬ್ಬು ವಾಸನೆ ಬರ್ತಿದ್ಯಾ? ಹಾಗಾದ್ರೆ, 10 ನಿಮಿಷದಲ್ಲಿ ಈ ಕೆಲಸ ಮಾಡಿ, ಯಾವಾಗಲೂ ಫ್ರೆಶ್ ಆಗಿರುತ್ತೆ!

ಕಸದ ಬುಟ್ಟಿ ಖಾಲಿ ಮಾಡಿದರೂ ಮನೆ ತುಂಬಾ ಗಬ್ಬು ವಾಸನೆ ಬರ್ತಿದ್ಯಾ? ಎಷ್ಟೇ ತೊಳೆದರೂ ಆ ವಾಸನೆ ಹೋಗ್ತಿಲ್ಲ ಅಂದ್ರೆ ಸಮಸ್ಯೆ ಕಸದಲ್ಲಿಲ್ಲ, ಬುಟ್ಟಿಯಲ್ಲಿದೆ! ಹಾಗಾಗಿ, ಮಾರ್ಕೆಟ್​ನಲ್ಲಿ ದುಬಾರಿ ಸ್ಪ್ರೇ ತರೋ ಬದಲು ಮನೆಯಲ್ಲೇ ಇರೋ ವಸ್ತುಗಳಿಂದ ಹೀಗೆ ಮಾಡಿಸಾಕು.! ಏನ್ ಗೊತ್ತಾ?
Trash Bin Still Smells After Emptying
ಕಸ ಖಾಲಿ ಮಾಡಿದ್ರೂ ಬುಟ್ಟಿಯಿಂದ ಗಬ್ಬು ವಾಸನೆ ಬರ್ತಿದ್ಯಾ?AI Image
Updated on: 

Trash Bin Smell: ಮನೆ ಎಷ್ಟು ಸ್ವಚ್ಛವಾಗಿದ್ದರೂ ಕಸದ ಬುಟ್ಟಿಯ ಬಳಿ ಹೋದಾಗ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಅನೇಕ ಮನೆಗಳಲ್ಲಿ ಸಾಮಾನ್ಯ. ಬುಟ್ಟಿ ಖಾಲಿ ಮಾಡಿದರೂ ವಾಸನೆ ಹೋಗುವುದಿಲ್ಲ ಎಂದು ಅನೇಕರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಕಸವಲ್ಲ, ಬುಟ್ಟಿಯ ಒಳಗೆ ಉಳಿದುಕೊಳ್ಳುವ ಸೂಕ್ಷ್ಮ ಕೊಳೆ ಮತ್ತು ತೇವಾಂಶ. ದುಬಾರಿ ಸ್ಪ್ರೇ ಅಥವಾ ಕೆಮಿಕಲ್ ಇಲ್ಲದೆ ಮನೆಯಲ್ಲೇ ಇರುವ ಬೇಕಿಂಗ್ ಸೋಡಾ ಮತ್ತು ನಿಂಬೆಯಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.

ಮೊದಲು ಬುಟ್ಟಿಯನ್ನು ಹೀಗೆ ತೊಳೆಯಿರಿ

ಮೊದಲು ಬುಟ್ಟಿಯಲ್ಲಿರೋ ಕಸವನ್ನೆಲ್ಲಾ ತೆಗೆದು, ಹಳೇ ಪೇಪರ್, ಕವರ್ ತೆಗೆಯಿರಿ. ಬುಟ್ಟಿಯನ್ನು ಬಿಸಿಲಿಗೆ ತಿರುಗಿಸಿ ಹಾಕಿ, ಒಣಗಿದ ಕೊಳೆ ಬಿದ್ದು ಹೋಗುತ್ತದೆ. ನಂತರ ಒಂದು ಬಕೆಟ್ ಬಿಸಿ ನೀರಿಗೆ 2 ಚಮಚ ಡಿಶ್ ವಾಶ್ ಲಿಕ್ವಿಡ್ ಅಥವಾ ಸರ್ಫ್ ಪೌಡರ್ ಹಾಕಿ, ಬುಟ್ಟಿಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಒಳಗಡೆ, ಹೊರಗಡೆ, ಮುಚ್ಚಳದ ಸಂದಿಗಳನ್ನೂ ಬ್ರಷ್ ನಿಂದ ಉಜ್ಜಿ. ತೊಳೆದ ನಂತರ ಬಿಸಿಲಿನಲ್ಲಿ ಸಂಪೂರ್ಣ ಒಣಗಲು ಬಿಡಿ. ಒದ್ದೆ ಬುಟ್ಟಿಯನ್ನು ಮತ್ತೆ ಬಳಸಿದರೆ ವಾಸನೆ ಡಬಲ್ ಆಗುತ್ತದೆ.

ಬೇಕಿಂಗ್ ಸೋಡಾ + ನಿಂಬೆ ಮ್ಯಾಜಿಕ್

ಇದು ವಾಸನೆಗೆ ಬೆಸ್ಟ್ ಪರಿಹಾರ. ಒಣಗಿದ ಬುಟ್ಟಿಯ ಒಳಗೆ 3 ರಿಂದ 4 ಚಮಚ ಬೇಕಿಂಗ್ ಸೋಡಾವನ್ನು ಎಲ್ಲಾ ಕಡೆ ಹರಡಿ ಹಾಕಿ. ಅದರ ಮೇಲೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ಅದು ನೊರೆ ಬರುತ್ತದೆ, ಆ ನೊರೆಯೇ ಕೊಳೆಯನ್ನು ಕರಗಿಸುತ್ತದೆ. 15 ನಿಮಿಷ ಹಾಗೆ ಬಿಡಿ. ನಂತರ ನಿಂಬೆಯ ಸಿಪ್ಪೆಯಿಂದಲೇ ಬುಟ್ಟಿಯ ಒಳಗೆಲ್ಲಾ ಉಜ್ಜಿ. ಕೊನೆಗೆ ಶುದ್ಧ ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಬೇಕಿಂಗ್ ಸೋಡಾ ವಾಸನೆಯನ್ನು ಹೀರಿಕೊಳ್ಳುತ್ತದೆ, ನಿಂಬೆ ಬ್ಯಾಕ್ಟೀರಿಯಾವನ್ನು ಕೊಂದು ಫ್ರೆಶ್ ವಾಸನೆ ಕೊಡುತ್ತದೆ.

Trash Bin Still Smells After Emptying, Clean It With Baking Soda and Lemon in 10 Minutes
AI Image

ದಿನವೂ ವಾಸನೆ ಬಾರದಂತೆ ಮಾಡೋ ಟ್ರಿಕ್

ಬುಟ್ಟಿ ತೊಳೆದ ನಂತರ ಪ್ರತಿದಿನ ಒಂದು ಚಿಕ್ಕ ಟ್ರಿಕ್ ಮಾಡಿ ಸಾಕು.

  • ಬುಟ್ಟಿಯ ತಳಕ್ಕೆ ಒಂದು ಹಳೇ ಪೇಪರ್ ಅಥವಾ ನ್ಯೂಸ್ ಪೇಪರ್ ಹಾಕಿ, ಅದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಚಿಮುಕಿಸಿ. ನಂತರ ಕಸದ ಕವರ್ ಹಾಕಿ. ಇದರಿಂದ ಸೋರುವ ನೀರು ಪೇಪರ್ ಹೀರಿಕೊಳ್ಳುತ್ತದೆ, ವಾಸನೆ ಬರುವುದಿಲ್ಲ.

  • ಕಸ ಹಾಕುವ ಮೊದಲು ತೇವ ಕಸ, ಒಣ ಕಸವನ್ನು ಬೇರೆ ಬೇರೆ ಮಾಡಿ. ಹಾಲು, ಮೊಸರು, ಮಾಂಸದ ಕವರ್ ಗಳನ್ನು ನೀರಿನಲ್ಲಿ ತೊಳೆದು ಒಣಗಿಸಿ ನಂತರವೇ ಕಸಕ್ಕೆ ಹಾಕಿ. ಆಹಾರದ ಉಳಿಕೆಗಳನ್ನು ನೇರವಾಗಿ ಬುಟ್ಟಿಗೆ ಹಾಕಬೇಡಿ.

  • ವಾರಕ್ಕೆ ಒಮ್ಮೆ ಬುಟ್ಟಿಯ ಒಳಗೆ ವಿನೆಗರ್ ಸ್ಪ್ರೇ ಮಾಡಿ ಒರೆಸಿ. ವಿನೆಗರ್ ಇಲ್ಲದಿದ್ದರೆ ನಿಂಬೆ ರಸ, ಉಪ್ಪು ಮಿಶ್ರಣವನ್ನೂ ಬಳಸಬಹುದು.

Trash Bin Still Smells After Emptying
ರಾತ್ರಿ ಸೊಳ್ಳೆ ಕಾಟ ಜಾಸ್ತಿಯೇ? ಒಂದೇ ನಿಂಬೆಹಣ್ಣಿನಿಂದ ಸೊಳ್ಳೆಗಳಿಂದ ಮುಕ್ತಿ ಪಡೆಯಿರಿ; ಗಾಢ ನಿದ್ರೆ ಮಾಡಿ! ಹೇಗೆ ಗೊತ್ತಾ?

ಜಿರಳೆ, ಹುಳು ಬರುತ್ತಿದ್ದರೆ ಏನು ಮಾಡಬೇಕು?

ಬುಟ್ಟಿಯ ಸುತ್ತ ಜಿರಳೆ, ಸಣ್ಣ ಹುಳು ಬರುತ್ತಿದ್ದರೆ ಬುಟ್ಟಿಯ ಹೊರಗೆ, ಸುತ್ತಲೂ ಸ್ವಲ್ಪ ಬೇಕಿಂಗ್ ಸೋಡಾ + ಉಪ್ಪು ಮಿಶ್ರಣ ಹಾಕಿ. ಬುಟ್ಟಿಯನ್ನು ಯಾವಾಗಲೂ ಮುಚ್ಚಳ ಮುಚ್ಚಿಯೇ ಇಡಿ. ಬುಟ್ಟಿಯನ್ನು ಗೋಡೆಗೆ ಅಂಟಿಸಿಡದೆ, ಸ್ವಲ್ಪ ಗಾಳಿ ಆಡುವ ಹಾಗೆ ಇಡಿ. ರಾತ್ರಿ ಮಲಗುವ ಮುನ್ನ ಕಸವನ್ನು ತೆಗೆದು ಹೊರಗೆ ಹಾಕುವುದು ವಾಸನೆಗೆ ಬೆಸ್ಟ್ ಪರಿಹಾರ.

ಒಟ್ಟಾರೆಯಾಗಿ, ಈ ಸಣ್ಣ ಅಭ್ಯಾಸಗಳಿಂದ ಬುಟ್ಟಿಯಿಂದ ಗಬ್ಬು ವಾಸನೆ ಬರುವುದಿಲ್ಲ, ಮನೆಯೂ ಫ್ರೆಶ್ ಆಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X