Redmi K50i 5G ಸ್ಮಾರ್ಟ್ ಫೋನ್: ಜು. 20ಕ್ಕೆ ಭಾರತದಲ್ಲಿ ಬಿಡುಗಡೆ
K50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.
Published: 06th July 2022 11:45 PM | Last Updated: 06th July 2022 11:47 PM | A+A A-

Redmi K50i ಸ್ಮಾರ್ಟ್ ಫೋನ್
ನವದೆಹಲಿ: ಚೀನಾ ಮೂಲದ ಶಿಯೋಮಿ (Xiaomi) ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿ ಭಾರತದಲ್ಲಿ ರೆಡ್ ಮಿ ಕೆ50ಐ (Redmi K50i ) ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಚಿಂತಿಸಿದೆ ಎಂಬುದರ ಬಗ್ಗೆ ಕೆಲವು ದಿನಗಳಿಂದ ಕೇಳುತ್ತಿದ್ದೇವೆ. ಈ ಮಧ್ಯೆ K50i ಜುಲೈ 20ಕ್ಕೆ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯೊಂದು ಹೇಳಿದೆ.
K50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.
ಇದು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಹೊಂದಿದೆ ಮತ್ತು ನೀಲಿ ಬಣ್ಣವು ನೀವು ಆಯ್ಕೆ ಮಾಡುವ ಬಣ್ಣಗಳ ಆಯ್ಕೆಗಳಲ್ಲಿ ಒಂದಾಗಿದೆ.
ಇದು ಮೇ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆಯಾದ Redmi Note 11T Pro ಮತ್ತು Redmi Note 11T Pro+ ನ್ನು ಹೋಲುತ್ತದೆ.
ಅವು ಮೂಲತಃ ಒಂದೇ ಫೋನ್‌ಗಳು, ಆದರೆ ವಿಭಿನ್ನ ಬ್ಯಾಟರಿಗಳು ಮತ್ತು ಚಾರ್ಜಿಂಗ್ ವೇಗ ಬೇರೆ ಬೇರೆಯಾಗಿದೆ.
Time to #LiveExtreme with the Krazy fast