ಸೌಂಡ್ ಬಾರ್ ಖರೀದಿ ಮಾಡ್ಬೇಕಾ... ಸರಿಯಾದ ಆಯ್ಕೆಗೆ ಈ ಸುದ್ದಿ ಓದಿ..
ನಿಮ್ಮ ಬಳಿ ಸರಿಯಾದ ಸೌಂಡ್‌ಬಾರ್‌ಗಳು ಇದೆಯಾ?, ನಿಮ್ಮ ಮನೆಯಲ್ಲಿರುವ ಸೌಂಡ್ ಬಾರ್ ಸರಿಯಾದ ಆಯ್ಕೆಯೇ..? ನಿಮ್ಮ ಮನೆಯ ಸೌಂಡ್ ಬಾರ್ ಹೇಗಿರಬೇಕು..? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Published: 23rd September 2023 04:56 PM | Last Updated: 23rd September 2023 05:29 PM | A+A A-

ಸೌಂಡ್ ಬಾರ್ ಆಯ್ಕೆ ಮಾಡುವುದು ಹೇಗೆ
ನಿಮ್ಮ ಬಳಿ ಸರಿಯಾದ ಸೌಂಡ್‌ಬಾರ್‌ಗಳು ಇದೆಯಾ?, ನಿಮ್ಮ ಮನೆಯಲ್ಲಿರುವ ಸೌಂಡ್ ಬಾರ್ ಸರಿಯಾದ ಆಯ್ಕೆಯೇ..? ನಿಮ್ಮ ಮನೆಯ ಸೌಂಡ್ ಬಾರ್ ಹೇಗಿರಬೇಕು..? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸ್ಲಿಮ್ ಮತ್ತು ಕಾಂಪ್ಯಾಕ್ಟ್ ಸೌಂಡ್‌ಬಾರ್‌ಗಳನ್ನು ಖರೀದಿಸುವುದರಿಂದ ನಿಮ್ಮ ಸಂಗೀತ, ಸಿನಿಮಾ ವೀಕ್ಷಣೆಯ ಅನುಭವ ಮತ್ತು ಲಿವಿಂಗ್ ರೂಮ್‌ನ ಸೌಂದರ್ಯವನ್ನು ಹೆಚ್ಚಿಸಬಹುದು. ಆದರೆ ಯಾವುದನ್ನು ಖರೀದಿಸಬೇಕು ಎಂಬುದು ನಿಮಗೆ ತಿಳಿದಿಲ್ಲದಿದ್ದಾಗ ಲಭ್ಯವಿರುವ ಉತ್ಪನ್ನಗಳನ್ನು ಹುಡುಕಲು, ವಿಭಿನ್ನ ವೈಶಿಷ್ಟ್ಯಗಳು, ಬೆಲೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳಾದ್ಯಂತ ಆಫರ್ ಗಳನ್ನು ಹೋಲಿಸುವುದು ಬೇಸರದ ಪ್ರಕ್ರಿಯೆಯಾಗಿರುತ್ತದೆ.
ಸೌಂಡ್‌ಬಾರ್‌ಗಳನ್ನು ಖರೀದಿಸುವಾಗ ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಏನನ್ನು ಹುಡುಕಬೇಕು?
ಆಡಿಯೋ ಔಟ್‌ಪುಟ್, ಕನೆಕ್ಟಿವಿಟಿ ಆಯ್ಕೆಗಳು, ಗಾತ್ರ ಮತ್ತು ವಿನ್ಯಾಸ, ಬೆಲೆಗಳು ಮತ್ತು ಆಫರ್ ಗಳು, ಬ್ರ್ಯಾಂಡ್ ಇವು ಸೌಂಡ್‌ಬಾರ್ ಅನ್ನು ಆರ್ಡರ್ ಮಾಡುವಾಗ ಅನ್ವಯಿಸಬೇಕಾದ ಕೆಲವು ಫಿಲ್ಟರ್‌ಗಳಾಗಿವೆ. ಹೋಮ್ ಟೆಲಿವಿಷನ್‌ನೊಂದಿಗೆ ಸಂಪರ್ಕಿಸುವುದು ಅಥವಾ ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್‌ನೊಂದಿಗೆ ಅದನ್ನು ಬಳಸುವಂತಹ ಬಳಕೆಯ ಸಂದರ್ಭ ಸಂಗೀತ ಮತ್ತು ಮನರಂಜನೆ ಅಥವಾ ಗೇಮಿಂಗ್‌ಗಾಗಿ, ಗೇಮ್ ಕನ್ಸೋಲ್‌ಗಳೊಂದಿಗೆ ಸಂಪರ್ಕಿಸುವುದನ್ನು ಸಹ ಪರಿಗಣಿಸಬೇಕು. ಗೋಡೆಯ ಮೇಲೆ, ಪೀಠೋಪಕರಣಗಳ ಅಡಿಯಲ್ಲಿ, ಅಥವಾ ನೆಲದ ಮೇಲೆ ಅಥವಾ ಕಪಾಟಿನಲ್ಲಿ ಇಡುವಂತಹ ಸ್ಥಳವನ್ನು ಖರೀದಿಗೂ ಮೊದಲು ಪರಿಗಣಿಸಬೇಕು. ಡಾಲ್ಬಿ ಅಟ್ಮಾಸ್ ಕೋಣೆಯೊಳಗೆ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ, ಇದು ಗುಣಮಟ್ಟದ ಸೌಂಡ್ ಆಲಿಸುವ ಅನುಭವವನ್ನು ನೀಡುತ್ತದೆ.
ಬೆಲೆ
ಸೌಂಡ್‌ಬಾರ್‌ಗಳು ಸಾಮಾನ್ಯವಾಗಿ ರೂ. 8,000 ರಿಂದ ರೂ. 1.10 ಲಕ್ಷ ರೂಗಳ ಬೆಲೆ ವರೆಗೂ ಸಿಗುತ್ತವೆ. ಇನ್ನು ಕೆಲ ದುಬಾರಿ ಸೌಂಡ್ ಬಾರ್ ಗಳು ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದ್ದರೂ, ಅದು ನಮ್ಮ ಬಜೆಟ್ ಮತ್ತು ಬಳಕೆಯ ಮಿತಿಯಲ್ಲಿ ಬರುತ್ತವೆಯೇ ಎಂಬುದನ್ನು ಗಮನಿಸಬೇಕು. ಹೋಲಿಸುವ ಮೊದಲು ಕೈಗೆಟುಕುವಿಕೆ ಅಂದರೆ ಅದರ ದರ ಮತ್ತು ನಮ್ಮ ಬಜೆಟ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಒಬ್ಬರು ಆಯ್ಕೆ ಮಾಡಬಹುದಾದ 15,000 ರೂಪಾಯಿ ಬೆಲೆಯೊಳಗಿನ ಸಾಕಷ್ಟು ಯೋಗ್ಯ ಸೌಂಡ್‌ಬಾರ್‌ಗಳು ಲಭ್ಯವಿರುತ್ತವೆ. ಹೆಚ್ಚು ಅತ್ಯಾಧುನಿಕ ಮಾದರಿಗಳು 30,000 ರಿಂದ 80,00 ರ ನಡುವೆ ಮತ್ತು ಪ್ರೀಮಿಯಂ ಸೌಂಡ್‌ಬಾರ್‌ಗಳು 1 ಲಕ್ಷ ರೂಗಿಂತ ಹೆಚ್ಚಿನ ದರ ಹೊಂದಿವೆ. ನಿಮಗೆ ಬಜೆಟ್ ಬಗ್ಗೆ ಅರಿವಿದ್ದರೆ ಇ-ಕಾಮರ್ಸ್ ಸೈಟ್‌ಗಳು ಮತ್ತು ಸ್ಟೋರ್‌ಗಳಲ್ಲಿನ ಆಫರ್ ಗಳನ್ನು ಪರಿಶೀಲಿಸಬಹುದು.
ಇದನ್ನೂ ಓದಿ: ವಾಟ್ಸಪ್ ಚಾನೆಲ್: ಮತ್ತೊಂದು ಅದ್ಭುತ ಫೀಚರ್ ಬಿಡುಗಡೆ! ಇದರ ಉಪಯೋಗ ಏನು?
ಕನೆಕ್ಟಿವಿಟಿ
ಇತ್ತೀಚಿನ ದಿನಗಳಲ್ಲಿ ಸೌಂಡ್ ಬಾರ್ ಗಳಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡಲಾಗುತ್ತಿದ್ದು, ಮಲ್ಟಿಮೀಡಿಯಾ ಆಪ್ಶನ್ ಗಳೊಂದಿಗೆ ಸೌಂಡ್ ಬಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರಮುಖವಾಗಿ USB ಪೋರ್ಟ್, ಬ್ಲೂಟೂತ್, HDMI, Wi-Fi, ಆಪ್ಟಿಕಲ್, AUX ಮತ್ತು NFC ನಂತಹ ವಿಭಿನ್ನ ಆಯ್ಕೆಗಳೊಂದಿಗೆ ಬರುತ್ತವೆ. ಬ್ಲೂಟೂತ್ ಸಂಪರ್ಕವು ಬಳಕೆದಾರರಿಗೆ ಟೆಲಿವಿಷನ್ ಮತ್ತು ಸ್ಮಾರ್ಟ್‌ಫೋನ್‌ಗಳೊಂದಿಗೆ ವೈರ್ಲೆಸ್ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಕೆಲವು ಸ್ಪೀಕರ್‌ಗಳು ರಿಮೋಟ್ ಅಥವಾ ವಾಯ್ಸ್ ಕಮಾಂಡಿಂಗ್ ಮೋಡ್ ನೊಂದಿಗೆ ಬರುತ್ತವೆ. ವಿಶೇಷ ವೈಶಿಷ್ಟ್ಯವಾಗಿ ನಿಯಂತ್ರಿಸಲು ಸ್ಮಾರ್ಟ್ ಸ್ಪೀಕರ್‌ಗಳ ಮೂಲಕ ಕಮ್ಯಾಂಡ್ ನೀಡುವ ಆಯ್ಕೆಗಳನ್ನು ಹೊಂದಿರುತ್ತವೆ. ಬ್ರ್ಯಾಂಡ್ ಸೌಂಡ್ ಬಾರ್ ನಲ್ಲಿ ಎಲ್ಲ ಆಯ್ಕೆಗಳು ಅಲ್ಲದಿದ್ದರೂ ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಒದಗಿಸುತ್ತವೆ. ಆದ್ದರಿಂದ ಅಲ್ಲಿಗೆ ಸೂಕ್ತವಾದ ಕನೆಕ್ಟಿವಿಟಿ ಆಯ್ಕೆ ಮಾಡುವುದು ಸೂಕ್ತವಾಗಿರುತ್ತದೆ.
ವ್ಯಾಟೇಜ್ ಮತ್ತು ವೂಫರ್ಸ್
ಸ್ಪೀಕರ್ ಮತ್ತು ಸಬ್ ವೂಫರ್ ಔಟ್ಪುಟ್ ಪವರ್ ತಯಾರಕರು ತೋರಿಸಿದ ಪ್ರಾಥಮಿಕ ವೈಶಿಷ್ಟ್ಯಗಳಲ್ಲಿ ಒಂದಾಗಿರುತ್ತದೆ. ವ್ಯಾಟೇಜ್ ಎನ್ನುವುದು ಆಂಪ್ಲಿಫೈಯರ್‌ನಿಂದ ಹೊರಬರುವ ಶಕ್ತಿಯಾಗಿದೆ. ಹೆಚ್ಚಿನ ವ್ಯಾಟೇಜ್ ಎಂದರೆ ಜೋರಾಗಿ ಧ್ವನಿ ಮತ್ತು ಹೆಚ್ಚಿದ ಧ್ವನಿ ಕ್ಷೇತ್ರವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಆದರೆ ಇದೇ ಉತ್ತಮ ಸೌಂಡ್ ಬಾರ್ ಗಳ ಫೀಚರ್ ಅಲ್ಲ. ಸಬ್ ವೂಫರ್ ವ್ಯಾಟೇಜ್‌ಗೂ ಗುಣಮಟ್ಟದೊಂದಿಗೆ ಹೆಚ್ಚಿನ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ಈ ವೈಶಿಷ್ಟ್ಯಕ್ಕೇ ಹೆಚ್ಚು ಒತ್ತು ನೀಡಬಾರದು. ಆದಾಗ್ಯೂ, ಸ್ಪೀಕರ್ ಸೂಕ್ಷ್ಮತೆಯನ್ನು ಪರಿಶೀಲಿಸಿ, ಅಥವಾ ಸ್ಪೀಕರ್ ಎಷ್ಟು ಪರಿಣಾಮಕಾರಿಯಾಗಿ ಪವರ್ ಅನ್ನು ವಾಲ್ಯೂಮ್‌ಗೆ ಪರಿವರ್ತಿಸುತ್ತದೆ ಎಂಬುದನ್ನು ಗಮನಿಸಬೇಕು. ಇದನ್ನು dB (ಡೆಸಿಬಲ್‌ಗಳು) ನಲ್ಲಿ ಸೂಚಿಸಲಾಗುತ್ತದೆ ಮತ್ತು ಧ್ವನಿ ಒತ್ತಡ (ಪ್ರೆಷರ್)ದ ಮಟ್ಟಗಳು (SPL) ಎಂದೂ ಕರೆಯುತ್ತಾರೆ. ಆದರೆ ಬ್ರ್ಯಾಂಡ್‌ಗಳು ಈ ವೈಶಿಷ್ಟ್ಯವನ್ನು ಅಪರೂಪವಾಗಿ ಪಟ್ಟಿಮಾಡುತ್ತವೆ.
ಸೌಂಡ್‌ಬಾರ್‌ಗಳು ವಿಭಿನ್ನ ಚಾನಲ್ ಕಾನ್ಫಿಗರೇಶನ್‌ಗಳೊಂದಿಗೆ ಬರುತ್ತವೆ. ಅವು ಸಾಮಾನ್ಯವಾಗಿ 2,3, 5 ಚಾನಲ್‌ಗಳೊಂದಿಗೆ ಬರುತ್ತವೆ ಮತ್ತು 2.1 ಅಥವಾ 5.1 ನಂತಹ ಬಿಂದುವಿನ ಸಂಖ್ಯೆಯು ಸಿಸ್ಟಮ್ ಸಬ್ ವೂಫರ್ ಅನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುತ್ತದೆ. ನಿಮ್ಮ ಸೌಂಡ್ ಕಾಂಬಿನೇಷನ್ ನಲ್ಲಿ ಬೇಸ್ ಅನ್ನು ಸೇರಿಸಲು ನೀವು ಬಯಸಿದರೆ, ನಂತರ ಸಬ್ ವೂಫರ್‌ಗಳ ಆಯ್ಕೆಯನ್ನು ಮರೆಯಬೇಡಿ. ಸೋನಿ, ಜೆಬಿಎಲ್, ಫಿಲಿಪ್ಸ್ ಮತ್ತು ಎಲ್ಜಿಯಂತಹ ಸ್ಥಾಪಿತ ಬ್ರ್ಯಾಂಡ್‌ಗಳ ಹೊರತಾಗಿ, ಬೋಟ್, ಜೆಬ್ರೋನಿಕ್, ಗೋವೋ ಗೋ ಸರೌಂಡ್, ಅನೇಕ ಉದಯೋನ್ಮುಖ ಕಂಪನಿಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಸೌಂಡ್ ಬಾರ್ ಗಳನ್ನು ಮಾರಾಟ ಮಾಡುತ್ತಿವೆ.
ಅತ್ಯುತ್ತಮ ಸೌಂಡ್‌ಬಾರ್ ಖರೀದಿ ಹೇಗೆ?
ಸೌಂಡ್‌ಬಾರ್ ಅನ್ನು ಖರೀದಿಸಲು ಬಳಕೆದಾರರು ತಮ್ಮ ಅವಶ್ಯಕತೆಗಳು ಮತ್ತು ಸಾಧನದಿಂದ ನಿರೀಕ್ಷೆಗಳ ಬಗ್ಗೆ ತಿಳಿದಿರಬೇಕು. ನೀವು ಏನನ್ನು ಹುಡುಕುತ್ತಿದ್ದೀರಿ..? ನಿಮ್ಮ ಬಳಕೆ ಮತ್ತು ನಿಮ್ಮ ನಿರೀಕ್ಷೆಗಳ ನಡುವೆ ಸಮನ್ವಯತೆ ಇರಬೇಕು. ಈ ಅಂಶಗಳ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಅತ್ಯುತ್ತಮ ಸೌಂಡ್‌ಬಾರ್ ಅನ್ನು ಖರೀದಿಸುವುದು ಸುಲಭ.
ಇದನ್ನೂ ಓದಿ: ಟ್ವಿಟರ್ ನಲ್ಲಿ ಶೀಘ್ರ ವಿಡಿಯೊ-ಆಡಿಯೊ ಕರೆ ಸೇವೆ: ಎಲಾನ್ ಮಸ್ಕ್ ಘೋಷಣೆ
ಸಂಶೋಧನೆ ಮತ್ತು ಹೋಲಿಕೆ
ಚಾನಲ್‌ಗಳ ಸಂಖ್ಯೆ, ಔಟ್‌ಪುಟ್ ವ್ಯಾಟೇಜ್, ಬಳಸಿದ ತಂತ್ರಜ್ಞಾನ, ಇತ್ಯಾದಿಗಳಂತಹ ವಿಭಿನ್ನ ಸೌಂಡ್‌ಬಾರ್‌ಗಳ ವಿವಿಧ ವೈಶಿಷ್ಟ್ಯಗಳನ್ನು ಸಂಶೋಧಿಸುವುದು ಬುದ್ಧಿವಂತಿಕೆಯಾಗಿದೆ. ನೀವು ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಹೋಲಿಸಬೇಕು ಮತ್ತು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ತಮವಾದದನ್ನು ಆರಿಸಿಕೊಳ್ಳಬೇಕು.
ಸೌಂಡ್‌ಬಾರ್ ಪ್ರಕಾರಗಳನ್ನು ತಿಳಿಯಿರಿ
ಧ್ವನಿ ಬಾರ್‌ಗಳಲ್ಲಿನ ಮೂಲಭೂತ ವ್ಯತ್ಯಾಸವೆಂದರೆ ಸ್ಪೀಕರ್‌ಗಳು/ಚಾನಲ್‌ಗಳ ಸಂಖ್ಯೆ. ಅತ್ಯಂತ ಮೂಲಭೂತ ಸೌಂಡ್ ಬಾರ್‌ಗಳು 2 ಸ್ಟೀರಿಯೋ ಎಡ ಮತ್ತು ಬಲ ಸ್ಪೀಕರ್‌ಗಳೊಂದಿಗೆ ಬರುತ್ತವೆ. ಇದನ್ನು ಚಾನಲ್‌ಗಳು ಎಂದೂ ಕರೆಯುತ್ತಾರೆ. ನೀವು 3,5, ಅಥವಾ 7 ಚಾನಲ್‌ಗಳೊಂದಿಗೆ ಸೌಂಡ್‌ಬಾರ್‌ಗಳಿಂದ ಆಯ್ಕೆ ಮಾಡಬಹುದು.
ವಿಮರ್ಶೆಗಳು ಮತ್ತು ರೇಟಿಂಗ್‌ಗಳು
ಈಗಂತೂ ಇ-ಕಾಮರ್ಸ್ ಉನ್ನತ ಮಟ್ಟದಲ್ಲಿದ್ದು ಬಹುತೇಕ ಎಲೆಕ್ಟ್ರಾನಿಕ್ ಡಿವೈಸ್ ಗಳು ಆನ್ ಲೈನ್ ನಲ್ಲೇ ಸಿಗುತ್ತಿವೆ. ಹೀಗಾಗಿ ಅಂತರ್ಜಾಲದಲ್ಲಿ ಉತ್ಪನ್ನಗಳ ರೇಟಿಂಗ್‌ಗಳ ಬಗ್ಗೆ ಮತ್ತು ಕಮೆಂಟ್ ಮತ್ತು ರೀವ್ಯೂಗಳ ಬಗ್ಗೆ ಗಮನ ಹರಿಸಿ. ಸೌಂಡ್‌ಬಾರ್‌ನ ಸಾಧಕ-ಬಾಧಕಗಳನ್ನು ತಿಳಿಯಲು ಬಳಕೆದಾರರು ಒದಗಿಸಿದ ವಿಮರ್ಶೆಗಳನ್ನು ಓದಿ.
ಮಳಿಗೆಗಳಿಗೆ ಭೇಟಿ ನೀಡಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸೌಂಡ್‌ಬಾರ್‌ಗಳನ್ನು ನೋಡಲು ಸ್ಟೋರ್‌ಗಳಿಗೆ ಭೇಟಿ ನೀಡುವುದನ್ನು ಪರಿಗಣಿಸಿ. ಔಟ್‌ಪುಟ್ ಧ್ವನಿ ಮತ್ತು ಗಾತ್ರ, ನೋಟ ಇತ್ಯಾದಿಗಳಂತಹ ಇತರ ವೈಶಿಷ್ಟ್ಯಗಳನ್ನು ಮೌಲ್ಯಮಾಪನ ಮಾಡಲು ಇದು ನಿಮಗೆ ಅವಕಾಶವನ್ನು ನೀಡುತ್ತದೆ.