ಭಾರತಕ್ಕೆ ಬರ್ತಿದೆ Samsung Galaxy Z Flip 8; ಹೊಸ ಫ್ಲಿಪ್ ಫೋನ್‌ನಲ್ಲಿ ಏನಿದೆ ಹೊಸದು? ಇಲ್ಲಿದೆ ಬೆಲೆ, ಸ್ಟೋರೇಜ್ ಮತ್ತು ಲಾಂಚ್ ಡೇಟ್ ಡೀಟೈಲ್ಸ್

ಸ್ಮಾರ್ಟ್‌ಫೋನ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ಸ್ಯಾಮ್‌ಸಂಗ್‌ನ ಹೊಸ ಫ್ಲಿಪ್ ಫೋನ್, ಗ್ಯಾಲಕ್ಸಿ Z ಫ್ಲಿಪ್ 8 ಬಿಡುಗಡೆಗೆ ಇನ್ನೂ 1 ದಿನ ಬಾಕಿ ಇರುವಾಗಲೇ ಬೆಲೆ ಮತ್ತು ಪ್ರಮುಖ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.
Samsung Galaxy Z Flip 8
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 8Online Desk
Updated on

Samsung Galaxy Z Flip 8: ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸ್ಯಾಮ್‌ಸಂಗ್‌ನ ಹೊಸ ಫ್ಲಿಪ್ ಫೋನ್ ಗ್ಯಾಲಕ್ಸಿ Z ಫ್ಲಿಪ್ 8 ಬಿಡುಗಡೆಗೆ ಈಗ ದಿನಗಣನೆ ಆರಂಭವಾಗಿದೆ. ಸ್ಯಾಮ್‌ಸಂಗ್ ಕಂಪನಿಯು ಜುಲೈ 22 ರಂದು ನ್ಯೂಯಾರ್ಕ್‌ನಲ್ಲಿ ಆಯೋಜಿಸಿರುವ 'ಗ್ಯಾಲಕ್ಸಿ ಅನ್‌ಪ್ಯಾಕ್ಡ್' ಕಾರ್ಯಕ್ರಮದಲ್ಲಿ ಈ ಫೋನ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಿದೆ. ಆದ್ರೆ, ಬಿಡುಗಡೆಗೆ ಇನ್ನೂ 1 ದಿನ ಬಾಕಿ ಇರುವಾಗಲೇ Z ಫ್ಲಿಪ್ 8 ನ ಬೆಲೆ ಮತ್ತು ಪ್ರಮುಖ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಅದ್ರಂತೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 8 ಕುರಿತ ವರದಿ ಇಲ್ಲಿದೆ:

ಈ ಫೋನ್ ಫೀಚರ್ಸ್ ಏನೇನು?

  • ಡಿಸ್‌ಪ್ಲೇ: ಗ್ಯಾಲಕ್ಸಿ Z ಫ್ಲಿಪ್ 8 ನಲ್ಲಿ ಅತಿದೊಡ್ಡ ಬದಲಾವಣೆಯೆಂದರೆ ಅದರ ಹೊರಗಿನ ಕವರ್ ಡಿಸ್ಪ್ಲೇ. ಈ ಬಾರಿ 4 ಇಂಚಿನ ದೊಡ್ಡ AMOLED ಸ್ಕ್ರೀನ್ ನೀಡಲಾಗಿದೆ. ಇದರಿಂದ ಫೋನ್ ಮಡಿಸದೆಯೇ ರಿಪ್ಲೈ ಮಾಡುವುದು, ಮ್ಯಾಪ್ ನೋಡುವುದು ಮತ್ತು ಕ್ಯಾಮೆರಾ ಬಳಸುವುದು ಸುಲಭವಾಗಲಿದೆ. ಜೊತೆಗೆ ಒಳಗಿನ ಮುಖ್ಯ ಡಿಸ್‌ಪ್ಲೇ 6.9 ಇಂಚಿನ LTPO OLED ಪರದೆಯನ್ನು ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ.

Samsung Galaxy Z Flip 8
ಫೋನ್ ವಾಟರ್‌ಪ್ರೂಫ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು! ಯಾವುವು ಗೊತ್ತಾ?
Samsung Galaxy Z Flip 8
ಜುಲೈ 17ಕ್ಕೆ ಟೆಕ್ನೋ ಹೊಸ ಧಮಾಕಾ: 6500mAh ಬ್ಯಾಟರಿ, AI ಕ್ಯಾಮೆರಾದೊಂದಿಗೆ Tecno Camon 50 Ultra ಲಾಂಚ್! ಬೆಲೆ ಎಷ್ಟು ಗೊತ್ತಾ?
  • ಕ್ಯಾಮೆರಾ: ಬ್ಯಾಕ್ ಸೈಡ್ 50MP ಮುಖ್ಯ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಲೆನ್ಸ್ ಇರಲಿದೆ. ಇನ್ನು, ಸೆಲ್ಫಿಗಾಗಿ 10MP ಕ್ಯಾಮೆರಾ ಸಿಗಲಿದೆ. ಜೊತೆಗೆ AI ಫೀಚರ್‌ಗಳ ಮೂಲಕ ಫೋಟೋಗಳ ಗುಣಮಟ್ಟವನ್ನು ಮತಷ್ಟು ಹೆಚ್ಚಿಸಲಿದೆ.

  • ಪ್ರೊಸೆಸರ್ ಮತ್ತು ಬ್ಯಾಟರಿ: ಫೋನ್‌ನಲ್ಲಿ ಅತ್ಯಾಧುನಿಕ Snapdragon 8 Elite ಚಿಪ್‌ಸೆಟ್ ಇರಲಿದೆ. ಜೊತೆಗೆ 4300mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.

  • ಜೊತೆಗೆ ಈ ಫೋನ್ ಆಂಡ್ರಾಯ್ಡ್ 17 ಆಧಾರಿತ One UI 9 ಸಾಫ್ಟ್‌ವೇರ್ ಹೊಂದಿರಲಿದ್ದು, ಮುಂದಿನ 7 ವರ್ಷಗಳ ಕಾಲ ಓಎಸ್ ಅಪ್ಡೇಟ್ ಸಿಗಲಿದೆ.

Samsung Galaxy Z Flip 8
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ Z 8 ರ ರೂಪಾಂತರಗಳುOnline Desk

ಗ್ಯಾಲಕ್ಸಿ Z ಫ್ಲಿಪ್ 8 ಬೆಲೆ ಎಷ್ಟು?

ವರದಿಗಳ ಪ್ರಕಾರ, ಗ್ಯಾಲಕ್ಸಿ Z ಫ್ಲಿಪ್ 8 ನ ಬೇಸ್ ಮಾಡೆಲ್ ಅಂದರೆ 12GB RAM + 256GB ಸ್ಟೋರೇಜ್ ಇರುವ ಫೋನ್ ಭಾರತದಲ್ಲಿ ಸುಮಾರು ₹1,09,999 ದಿಂದ ಶುರುವಾಗುವ ಸಾಧ್ಯತೆ ಇದೆ. ಜೊತೆಗೆ 512GB ಮಾಡೆಲ್ ₹1,19,999 ವರೆಗೆ ಹೋಗಬಹುದು.

ಒಟ್ಟಾರೆಯಾಗಿ Z ಫ್ಲಿಪ್ 8 ಸ್ಟೈಲ್ ಮತ್ತು ಪರ್ಫಾರ್ಮೆನ್ಸ್ ಎರಡನ್ನೂ ಒಟ್ಟಿಗೆ ಬಯಸುವವರಿಗೆ ಸಖತ್ ಫೋನ್ ಆಗಿದೆ. ಬೆಲೆ ಸ್ವಲ್ಪ ಜಾಸ್ತಿ ಇದ್ದರೂ ದೊಡ್ಡ ಕವರ್ ಸ್ಕ್ರೀನ್, ಬೆಟರ್ ಬ್ಯಾಟರಿ ಮತ್ತು ಗುಡ್ ಪ್ರೊಸೆಸರ್‌ನಿಂದಾಗಿ ಇದು ಮಾರುಕಟ್ಟೆಯಲ್ಲಿ ಅಬ್ಬರಿಸೋದಂತೂ ಪಕ್ಕಾ.!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com