Googleನಲ್ಲಿ ಮರೆತೂ ಈ ವಿಷಯಗಳನ್ನು ಸರ್ಚ್ ಮಾಡಿದ್ರೆ ಬ್ಯಾಂಕ್ ಅಕೌಂಟ್ ಖಾಲಿಯಾಗೋದು ಗ್ಯಾರಂಟಿ! ಯಾವ ವಿಷಯಗಳು ಗೊತ್ತಾ?

ಗೂಗಲ್‌ನಲ್ಲಿ ನಾವು ಮಾಡುವ ಸಣ್ಣ ಸರ್ಚ್ ಕೂಡ ನಮ್ಮ ಬ್ಯಾಂಕ್ ಅಕೌಂಟ್ ಅನ್ನೆ ಖಾಲಿ ಮಾಡಬಹುದು. ಹಾಗಾಗಿ, ನೀವು ಗೂಗಲ್‌ನಲ್ಲಿ ಹುಡುಕುವಾಗ ಅತ್ಯಂತ ಜಾಗರೂಕರಾಗಿರಬೇಕಾದ ಮತ್ತು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳದಂತೆ ತಡೆಯಲು ತಪ್ಪಿಯೂ ಸರ್ಚ್ ಮಾಡಬಾರದ ಪ್ರಮುಖ ವಿಷಯಗಳು ಇಲ್ಲಿವೆ:
Never Search These Things on Google: Avoid Losing Your Bank Balance to Cyber Scams
ಗೂಗಲ್ ಸರ್ಚ್AI Image
Updated on

ಏನೇ ಅನುಮಾನ ಬಂದರೂ ತಕ್ಷಣ ಗೂಗಲ್ ಸರ್ಚ್ ಮಾಡುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ. ಆದರೆ ನೀವು ಗೂಗಲ್‌ನಲ್ಲಿ ಟೈಪ್ ಮಾಡುವ ಒಂದೇ ಒಂದು ತಪ್ಪು ಹುಡುಕಾಟ ನಿಮ್ಮ ಜೀವಮಾನದ ಉಳಿತಾಯವನ್ನೇ ಕ್ಷಣಾರ್ಧದಲ್ಲಿ ಲೂಟಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಯಾಕಂದ್ರೆ, ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಲು ಗೂಗಲ್ ಸರ್ಚ್ ಇಂಜಿನ್ ಅನ್ನೇ ಬಲೆಯನ್ನಾಗಿ ಹೆಣೆದಿದ್ದಾರೆ. ನಿಮ್ಮ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರಬೇಕೆಂದರೆ ಗೂಗಲ್‌ನಲ್ಲಿ ಯಾವ ವಿಚಾರಗಳನ್ನು ಎಂದಿಗೂ ಹುಡುಕಬಾರದು ಎಂಬುದರ ಕುರಿತ ವರದಿ ಇಳಿದೆ:

  • ಕಸ್ಟಮರ್ ಕೇರ್ ಸಂಖ್ಯೆಗಳು

ಬ್ಯಾಂಕ್‌ಗಳು, ಇ-ಕಾಮರ್ಸ್ ಸಂಸ್ಥೆಗಳು ಅಥವಾ ಕೊರಿಯರ್ ಕಂಪನಿಗಳ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಬೇಡಿ. ಯಾಕಂದ್ರೆ, ಹ್ಯಾಕರ್‌ಗಳು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಅದರಲ್ಲಿ ತಮ್ಮದೇ ಆದ ಮೊಬೈಲ್ ಸಂಖ್ಯೆಗಳನ್ನು ಹಾಕಿರುತ್ತಾರೆ. ನೀವು ಅದನ್ನು ಅಸಲಿ ಎಂದು ನಂಬಿ ಕರೆ ಮಾಡಿದರೆ, ನಿಮ್ಮ ಬ್ಯಾಂಕ್ ವಿವರಗಳನ್ನು ಪಡೆದು ಹಣ ಲೂಟಿ ಮಾಡುತ್ತಾರೆ. ಹಾಗಾಗಿ, ಯಾವಾಗಲೂ ಆಯಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಭೇಟಿ ನೀಡಿ ಕಸ್ಟಮರ್ ಕೇರ್ ಸಂಖ್ಯೆ ಪಡೆಯಿರಿ.

  • ಆನ್‌ಲೈನ್ ಬ್ಯಾಂಕಿಂಗ್

ನಿಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಲಾಗಿನ್ ಪೇಜ್ ಅಥವಾ ಯುಪಿಐ ಆ್ಯಪ್‌ಗಳ ವೆಬ್‌ಸೈಟ್‌ಗಳನ್ನು ಗೂಗಲ್‌ನಲ್ಲಿ ಟೈಪ್ ಮಾಡಿ ಸರ್ಚ್ ಮಾಡಬೇಡಿ. ಯಾಕಂದ್ರೆ, ಸರ್ಚ್ ರಿಸಲ್ಟ್‌ನಲ್ಲಿ ಅಸಲಿ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ವೆಬ್‌ಸೈಟ್‌ಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ನೀವು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿದರೆ, ಆ ವಿವರಗಳು ಹ್ಯಾಕರ್‌ಗಳ ಕೈ ಸೇರುತ್ತವೆ. ಹಾಗಾಗಿ, ಬ್ಯಾಂಕಿನ ಅಧಿಕೃತ ಯೂಆರ್‌ಎಲ್ (URL - ಉದಾಹರಣೆಗೆ: https://onlinesbi.sbi) ಅನ್ನು ನೇರವಾಗಿ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ.

  • ಸರ್ಕಾರಿ ಯೋಜನೆಗಳ ಲಿಂಕ್‌ಗಳು

ಉಚಿತ ಯೋಜನೆಗಳು, ಗೃಹಲಕ್ಷ್ಮಿ, ಪಿಎಂ ಕಿಸಾನ್ ಅಥವಾ ಯಾವುದೇ ಸಬ್ಸಿಡಿ ಯೋಜನೆಗಳ ಅಪ್ಲಿಕೇಶನ್ ಲಿಂಕ್‌ಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಬೇಡಿ. ಯಾಕಂದ್ರೆ, "ಉಚಿತವಾಗಿ ಹಣ ಪಡೆಯಿರಿ" ಎಂಬ ಆಕರ್ಷಕ ಹೆಡ್‌ಲೈನ್‌ಗಳೊಂದಿಗೆ ನಕಲಿ ಸೈಟ್‌ಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ವಿವರ ನೀಡಿದಾಗ ನಿಮ್ಮ ಗುರುತು ದುರುಪಯೋಗವಾಗಬಹುದು. ಹಾಗಾಗಿ, ಯಾವಾಗಲೂ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ .gov.in ಅಥವಾ .nic.in ಹೊಂದಿರುವ ಲಿಂಕ್‌ಗಳನ್ನು ಮಾತ್ರ ನಂಬಿ.

Never Search These Things on Google: Avoid Losing Your Bank Balance to Cyber Scams
ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಲ್ಲೂ ಇರಬಹುದು ನಕಲಿ ಆ್ಯಪ್: ಬ್ಯಾಂಕ್ ಖಾತೆ ಖಾಲಿಯಾಗುವ ಮುನ್ನ ತಕ್ಷಣ ಹೀಗೆ ಡಿಲೀಟ್ ಮಾಡಿ!
  • ಮೊಬೈಲ್ ಆ್ಯಪ್‌ಗಳು

ಯಾವುದೇ ಆ್ಯಪ್ ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್ ಸರ್ಚ್ ಮೂಲಕ ಲಿಂಕ್ ಹುಡುಕಿ ಡೌನ್‌ಲೋಡ್ ಮಾಡಬೇಡಿ. ಯಾಕಂದ್ರೆ, ಈ ಲಿಂಕ್‌ಗಳ ಮೂಲಕ ನಿಮ್ಮ ಫೋನ್‌ಗೆ ಮಾಲ್‌ವೇರ್' ಅಥವಾ ವೈರಸ್‌ಗಳು ಡೌನ್‌ಲೋಡ್ ಆಗುತ್ತವೆ. ಇವುಗಳು ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್ ಆ್ಯಪ್‌ಗಳ ಪಾಸ್‌ವರ್ಡ್‌ಗಳು ಮತ್ತು ಒಟಿಪಿಗಳನ್ನು ವಂಚಕರಿಗೆ ರಹಸ್ಯವಾಗಿ ರವಾನಿಸುತ್ತವೆ. ಹಾಗಾಗಿ, ಆ್ಯಪ್‌ಗಳಿಗಾಗಿ ಕೇವಲ ಅಧಿಕೃತ Google Play Store ಅಥವಾ Apple App Store ಮಾತ್ರ ಬಳಸಿ.

ಹಾಗಾಗಿ, ಗೂಗಲ್‌ನಲ್ಲಿ ಬರುವ ಮೊದಲ 2-3 ಫಲಿತಾಂಶಗಳ ಮುಂದೆ Sponsored ಅಥವಾ Ad ಎಂದು ಬರೆದಿದ್ದರೆ ಅವುಗಳನ್ನು ಕ್ಲಿಕ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಅವು ಹಣ ನೀಡಿ ಪ್ರಚಾರ ಪಡೆಯುತ್ತಿರುವ ಲಿಂಕ್‌ಗಳಾಗಿರುತ್ತವೆ.

Never Search These Things on Google: Avoid Losing Your Bank Balance to Cyber Scams
Phone Storage ಫುಲ್ ಆಗಿದ್ಯಾ? ಯಾವುದೇ ಆ್ಯಪ್ ಡಿಲೀಟ್ ಮಾಡದೆ ಸ್ಟೋರೇಜ್ ಖಾಲಿ ಮಾಡುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com