ಈ ವರ್ಷದೊಳಗೆ ಭಾರತ TB ಮುಕ್ತವಾಗಲಿದೆ: ಕೇಂದ್ರ ಆರೋಗ್ಯ ಸಚಿವ ನಡ್ಡಾ

ಹೆಚ್ಚಿನ ಕ್ಷಯರೋಗ ಪ್ರಕರಣಗಳನ್ನು ಹೊಂದಿರುವ 30 ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು 2015 ರಿಂದ 2023 ರವರೆಗೆ ಕ್ಷಯರೋಗ ಪ್ರಕರಣಗಳಲ್ಲಿ ಶೇ. 17.7 ರಷ್ಟು ಗಮನಾರ್ಹ ಇಳಿಕೆ ಕಂಡಿದೆ.
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ
Updated on

ನವದೆಹಲಿ: ಜಾಗತಿಕ ಟಾರ್ಗೆಟ್ ಗಿಂತ ಐದು ವರ್ಷ ಮೊದಲೇ ಭಾರತ ಈ ವರ್ಷದ ಅಂತ್ಯದ ವೇಳೆಗೆ ಕ್ಷಯರೋಗ ಮುಕ್ತವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಶುಕ್ರವಾರ ಹೇಳಿದ್ದಾರೆ.

ಹೆಚ್ಚಿನ ಕ್ಷಯರೋಗ ಪ್ರಕರಣಗಳನ್ನು ಹೊಂದಿರುವ 30 ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು 2015 ರಿಂದ 2023 ರವರೆಗೆ ಕ್ಷಯರೋಗ ಪ್ರಕರಣಗಳಲ್ಲಿ ಶೇ. 17.7 ರಷ್ಟು ಗಮನಾರ್ಹ ಇಳಿಕೆ ಕಂಡಿದೆ ಎಂದು ಅವರು ಹೇಳಿದರು. ಇದು ಜಾಗತಿಕ ಸರಾಸರಿ ಕುಸಿತವಾದ ಶೇ. 8.3 ಗಿಂತ ಎರಡು ಪಟ್ಟು ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಜಾಗತಿಕ ಕ್ಷಯರೋಗ ವರದಿ 2024 ಅನ್ನು ಉಲ್ಲೇಖಿಸಿ, ಭಾರತದ ಕ್ಷಯರೋಗ ಪ್ರಕರಣಗಳು 2015 ರಲ್ಲಿ 1,00,000 ಜನಸಂಖ್ಯೆಗೆ 237 ರಿಂದ 2023 ರಲ್ಲಿ 195 ಕ್ಕೆ ಇಳಿದಿವೆ ಮತ್ತು ಅದೇ ಅವಧಿಯಲ್ಲಿ ಕ್ಷಯರೋಗ ಮರಣ ಪ್ರಮಾಣವು 28 ರಿಂದ 22 ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಜೆ.ಪಿ. ನಡ್ಡಾ
ಕ್ಷಯರೋಗ ವಿರುದ್ಧ ಹೋರಾಟದಲ್ಲಿ ಇನ್ನೂ ದೂರ ಸಾಗಬೇಕಾಗಿದ್ದು, ಔಷಧ ಪೂರೈಕೆ ಮುಂದುವರಿಯಬೇಕು: ದಿನೇಶ್ ಗುಂಡೂರಾವ್

COVID-19 ಹಿನ್ನಡೆಯ ಹೊರತಾಗಿಯೂ, ಭಾರತವು ತನ್ನ ಕ್ಷಯರೋಗ ನಿರ್ಮೂಲನೆ ಗುರಿಯನ್ನು ದುರ್ಬಲಗೊಳಿಸಿಲ್ಲ ಎಂದಿದ್ದಾರೆ.

"ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರಕಾರ, ಭಾರತವು 2030 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಬೇಕು. ಆದರೆ, 2025 ರ ವೇಳೆಗೆ ನಾವು ಅದನ್ನು ಸಾಧಿಸಲು ಸಿದ್ಧರಿದ್ದೇವೆ" ಎಂದು ಒಡಿಶಾದ ಪುರಿಯಲ್ಲಿ ಜೆಪಿ ನಡ್ಡಾ ಹೇಳಿದ್ದಾರೆ.

33 ರಾಜ್ಯಗಳ 455 ಜಿಲ್ಲೆಗಳಲ್ಲಿ ನಡೆಯುತ್ತಿರುವ 100 ದಿನಗಳ ಕ್ಷಯರೋಗ ನಿರ್ಮೂಲನಾ ಅಭಿಯಾನವನ್ನು ನಡ್ಡಾ ಎತ್ತಿ ತೋರಿಸಿದರು.

ಡಿಸೆಂಬರ್ 7, 2024 ರಂದು ಪ್ರಾರಂಭಿಸಲಾದ ಈ ಅಭಿಯಾನವು ಇಲ್ಲಿಯವರೆಗೆ 5 ಲಕ್ಷ ಕ್ಷಯರೋಗಿಗಳನ್ನು ಪತ್ತೆಹಚ್ಚಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com