ನಿದ್ರಾಹೀನತೆಯಿಂದ ಹೃದಯಾಘಾತ, ಪಾರ್ಶ್ವವಾಯು ಸಾಧ್ಯತೆ ಹೆಚ್ಚು!

ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೀಜಿಂಗ್: ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಯೂರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿನ ವರದಿಯಂತೆ ದೀರ್ಘಕಾಲದ ನಿದ್ರಾಹೀನತೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ಹೇಳಲಾಗಿದೆ. ಅಂತೆಯೇ ಪುರುಷರಿಂಗಿಂತ  ಹೆಚ್ಚಾಗಿ ಮಹಿಳೆಯರಿಗೇ ನಿದ್ರಾ ಹೀನತೆಯಿಂದ ಎದುರಾಗುವ ದುಷ್ಪರಿಣಾಮಗಳ ಅಪಾಯ ಹೆಚ್ಚಿದ್ದು, ಪುರುಷರಿಗಿಂತ ಬೇಗನೇ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ವೈದ್ಯರು  ಅಭಿಪ್ರಾಯಪಟ್ಟಿದ್ದಾರೆ.

ಜೈವಿಕ ಚೇತರಿಕೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮಾನವನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು  ನಿದ್ರಾಹೀನತೆ ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ ಎಂದು ಚೈನಾ ಮೆಡಕಲ್ ಯೂನಿವರ್ಸಿಟಿಯ ಲೇಖಕಿ ಖಿಯೋಹೀ ಹೇಳಿದ್ದಾರೆ.

ಪದೇ ಪದೇ ಆನಾರೋಗ್ಯಕ್ಕೀಡಾಗುವವರಿಗಿಂತಲೂ ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲೇ ಹೆಚ್ಚಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಂಭವ ಹೆಚ್ಚಿರುತ್ತದೆ. ತೀರಾ ತಡವಾಗಿ ನಿದ್ರೆ ಬರುವುದು, ಅರೆ ನಿದ್ರೆಯಲ್ಲೇ  ಎಚ್ಚರವಾಗುವುದು, ಸಮಾಧಾನಕರವಲ್ಲದ ನಿದ್ರೆ ಮತ್ತು ಅಗತ್ಯಕ್ಕಿಂತ ಮೊದಲೇ ಅಂದರೆ ಮುಂಜಾನೆಯೇ ಎಚ್ಚರವಾಗುವುದು ಇವೆಲ್ಲವೂ ನಿದ್ರಾ ಹೀನತೆಯ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.

ಸುಮಾರು 160, 867 ಮಂದಿಯ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶೇ.27ರಷ್ಟು ಮಂದಿ ತಡವಾಗಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದು, ಶೇ.11ರಷ್ಟು ಮಂದಿಯಲ್ಲಿ ನಿದ್ರೆ ಮಧ್ಯೆ ಎಚ್ಚರವಾಗುವ  ಸಮಸ್ಯೆ ಕಂಡು ಬಂದಿದೆ. ಅಂತೆಯೇ ಶೇ.18ರಷ್ಟು ಮಂದಿಯಲ್ಲಿ ಅಗತ್ಯಕ್ಕೂ ಮೊದಲೇ ನಿದ್ರೆಯಿಂದ ಎಚ್ಚರವಾಗುವ ಸಮಸ್ಯೆ ಹೊಂದಿದ್ದಾರೆ. ಇಂತಹವರಲ್ಲಿ ಅತೀ ಬೇಗನೇ ಹೃದಯಾಘಾತವಾಗುವ ಅಪಾಯವಿದ್ದು, ಪಾರ್ಶ್ವವಾಯು  ಸಂಭವ ಕೂಡ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿದ್ರಾಹೀನತೆ ಹೃದಯಾಘಾತಕ್ಕೆ ಕಾರಣವಾಗಿ ಬಳಿಕ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದಾರೆ. ಅಂತೆಯೇ ಅತೀ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ  ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ನಿದ್ರಾ ಹೀನತೆಯಿಂದ ಬಳಲುತ್ತಿರುವವರು ಆದಷ್ಟು ಶೀಘ್ರ ವೈದ್ಯರನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com