ದುಡಿತದ ಬಹುಪಾಲು ಆರೋಗ್ಯಕ್ಕೇ ಖರ್ಚು; ಭಾರತೀಯರ ಬಡತನಕ್ಕೆ ಪ್ರಬಲ ಕಾರಣ!

ವಿಶ್ವಾದ್ಯಂತ ಒಟ್ಟು 100 ಮಿಲಿಯನ್ ನಷ್ಟು ಜನರು ತಾವು ದುಡಿದ ಬಹುಪಾಲು ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡುತ್ತಿದ್ದು, ಈ ಪೈಕಿ ಭಾರತದವರು ಅರ್ಧದಷ್ಟು ಸಂಖ್ಯೆಯಲ್ಲಿದ್ದಾರೆ.
ದುಡಿತದ ಬಹುಪಾಲು ಆರೋಗ್ಯಕ್ಕೇ ಖರ್ಚು; ಭಾರತೀಯರ ಬಡತನಕ್ಕೆ ಪ್ರಬಲ ಕಾರಣ!
ದುಡಿತದ ಬಹುಪಾಲು ಆರೋಗ್ಯಕ್ಕೇ ಖರ್ಚು; ಭಾರತೀಯರ ಬಡತನಕ್ಕೆ ಪ್ರಬಲ ಕಾರಣ!
ನವದೆಹಲಿ: ವಿಶ್ವಾದ್ಯಂತ ಒಟ್ಟು 100 ಮಿಲಿಯನ್ ನಷ್ಟು ಜನರು ತಾವು ದುಡಿದ ಬಹುಪಾಲು ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡುತ್ತಿದ್ದು, ಈ ಪೈಕಿ ಭಾರತದವರು ಅರ್ಧದಷ್ಟು ಸಂಖ್ಯೆಯಲ್ಲಿದ್ದಾರೆ.
ಆರೋಗ್ಯಕ್ಕಾಗಿ ದುಡಿತದ ಬಹುಪಾಲು ಹಣವನ್ನು ಖರ್ಚು ಮಾಡುವುದರಿಂದ ವಿಶ್ವದ 100 ಮಿಲಿಯನ್ ಜನರಿಗೆ ಬಡತನ ಎದುರಾಗುತ್ತಿದ್ದು ಈ ಪೈಕಿ ಅರ್ಧದಷ್ಟು ಭಾರತೀಯರೇ ಇದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಹೇಳಿದೆ. 
ಅಚ್ಚರಿಯೆಂದರೆ ಭಾರತದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಾಳೆಯಾಗುತ್ತಿದ್ದು, ತಾವು ದುಡಿದ ಬಹುಪಾಲು ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ ಎಂದು ವಿವಿಧ ರೀತಿಯಲ್ಲಿ ಸಂಗ್ರಹಿಸಲಾಗಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದ್ದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಯೂನಿವರ್ಸಲ್ ಹೆಲ್ತ್ ಕವರೇಜ್: 2017 ಗ್ಲೋಬಲ್ ಮಾನಿಟರಿಂಗ್ ರಿಪೋರ್ಟ್ ನಲ್ಲಿರುವ ಅಂಕಿ ಅಂಶಗಳೂ ಸಹ ಭಾರತ ಸರ್ಕಾರದ ಅಂಕಿ-ಅಂಶಗಳಿಗೆ ಹೋಲಿಕೆಯಾಗುತ್ತಿವೆ.
97 ಮಿಲಿಯನ್ ಜನರು ದುಡಿದ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದು, ಈ ಪೈಕಿ 49 ಮಿಲಿಯನ್ ಜನರು ಭಾರತದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com