ಮಹಿಳೆಯರಿಗೆ: ಪ್ರತಿದಿನ ಒಂದು ನಿಮಿಷದ ಓಟ ಮೂಳೆಗಳನ್ನು ಸದೃಢಗೊಳಿಸುತ್ತದೆ!

ಪ್ರತಿ ದಿನ ಒಂದು ನಿಮಿಷದ ಓಟದಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ.
ಮೂಳೆ
ಮೂಳೆ
Updated on
ವಾಷಿಂಗ್ ಟನ್: ಪ್ರತಿ ದಿನ ಒಂದು ನಿಮಿಷದ ಓಟದಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ. 
ಲೀಸೆಸ್ಟರ್ ವಿಶ್ವವಿದ್ಯಾಲಯ ಹಾಗೂ ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಪ್ರತಿ ದಿನ 60-120 ಸೆಕೆಂಡ್ ಗಳಷ್ಟು ಕಠಿಣ ಚಟುವಟಿಕೆ ನಡೆಸುವುದರಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತವಂತೆ. ಓಡುವುದು ಸೇರಿದಂತೆ ಕಠಿಣ ಚಟುವಟಿಕೆಯಲ್ಲಿ ತೊಡಗುವುದರಿಂದ ವೃದ್ಧಾಪ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ. 
2,500 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಅವರ ಚಟುವಟಿಕೆಗಳ ಮಟ್ಟ ಹಾಗೂ ಮೂಳೆಗಳ ಆರೋಗ್ಯವನ್ನು ಗಮನಿಸಿದ್ದಾರೆ.  ಒಂದರಿಂದ ಎರಡು ನಿಮಿಷಗಳ ಕಠಿಣ ವ್ಯಾಯಾಮ ಮಾಡಿದ ಮಹಿಳೆಯರ ಮೂಳೆಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದು ಕಂಡುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com