ಆರೋಗ್ಯಕರ ತಾಯ್ತತನಕ್ಕೆ ಹನ್ನೆರಡು ಸಲಹೆಗಳು

ಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ...
ಆರೋಗ್ಯಕರ ತಾಯ್ತತನಕ್ಕೆ 12 ಸಲಹೆಗಳು
ಆರೋಗ್ಯಕರ ತಾಯ್ತತನಕ್ಕೆ 12 ಸಲಹೆಗಳು
ಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ತಮ್ಮ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. 
ಮೊದಲನೇ ಮಗುವಿಗೆ ಜನ್ಮ ನೀಡುವ ಗರ್ಭಿಣಿಯರಿಗೆ ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ. ಈ ಸಂದರ್ಭದಲ್ಲಿ 24*7 ಸಮಯದಲ್ಲಿ ಮಹಿಳೆಯರು ತಮ್ಮ ಮೇಲೆ ತಾವು ಹೆಚ್ಚಿನ ಕಾಳಿ ವಹಿಸಬೇಕಾಗುತ್ತದೆ. ಪ್ರಮುಖವಾಗಿ ಪ್ರಸವ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. 
ಆರೋಗ್ಯಗ ತಾಯ್ತತನಕ್ಕೆ ಫೋರ್ಟಿಸ್ ಆಸ್ಪತ್ರೆಯ ಡಾ.ಸುಷ್ಮಾ ತೋಮರ್ ಹಾಗೂ ಡಾ.ಫಬಿಯನ್ ಅಲ್ಮೇಡಾ ಅವರು ಕೆಲ ಸಲಹೆಗಳನ್ನು ನೀಡಿದ್ದು, ಆ ಸಲಹೆಗಳು ಈ ಕೆಳಗಿನಂತಿವೆ...
ಗರ್ಭಿಣಿ ಮಹಿಳೆಯರಿಗೆ ವಿಶ್ರಾಂತಿ, ಹೆಚ್ಚಿನ ನಿದ್ರೆ ಅವಶ್ಯಕ
ಅಗತ್ಯವೆನಿಸಿದಷ್ಟು ಗರ್ಭಿಣಿ ಮಹಿಳೆಯರು ನಿದ್ರೆ ಮಾಡಬೇಕು. ಏಕೆಂದರೆ, ನಿದ್ರೆ ಅಭಾವ ಎನಿಸಿದಾಗ ಸಮಸ್ಯೆಗಳು ಹೆಚ್ಚಾಗಿ ಕಾಣಿಸಲು ಆರಂಭವಾಗುತ್ತದೆ. ಕೆಲ ಗರ್ಭಿಣಿ ಮಹಿಳೆಯರಿಗೆ ರಾತ್ರಿ ವೇಳೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬೆಳಗಿನ ಸಂದರ್ಭದಲ್ಲಿಯೇ ನಿದ್ರಿಸಿ. ಒಂದು ವೇಳೆ ನಿದ್ರೆ ಮಾಡಲು ಸಾಧ್ಯವೇ ಆಗದಿದ್ದರೆ, ಕಣ್ಣು ಮುಚ್ಚಿ ಆಳವಾದ ಉಸಿರು ತೆಗೆದುಕೊಳ್ಳಿ ಇದರಿಂದ ನೀವು ವಿಶ್ರಾಂತಿ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ದೇಹದಲ್ಲಿರುವ ಅಂಗಾಂಗಗಳು ಸುಲಭವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ. 
ಆರೋಗ್ಯಕರ ಹಾಗೂ ಸಮತೋಲಿತ ಆಹಾರವನ್ನು ಸೇವಿಸಿ
ಪ್ರತಿನಿತ್ಯ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಕಾರ್ಬೋಹೈಡ್ರೋಟ್ಸ್ ಇರುವಂತಹ ಗೋಧಿ, ಪಾಸ್ತ ಮತ್ತು ಬ್ರೌನ್ ರೈಸ್ ಬಳಕೆ ಮಾಡಿ. ಇವುಗಳ ಸೇವನೆಯಿಂದ ನಿಮ್ಮ ಶಕ್ತಿ ದಿನಪೂರ್ತಿ ಕುಗ್ಗದಂತೆ ನೋಡಿಕೊಳ್ಳುತ್ತದೆ. ಬೆಣ್ಣೆ, ರೆಡಿ ಟು ಈಟ್ ಆಹಾರಗಳು, ಕೊಬ್ಬಿನ ಅಂಶವಿರುವ ಆಹಾರಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಿ. ಕೋಳಿ ಮಾಂಸ, ಮೀನು, ಮೊಟ್ಟೆ, ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಅದರ ಜೊತೆಗೆ ಹಣ್ಣುಗಳು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಇವುಗಳು ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಲ್ಲದೆ, ಪ್ರಸವಪೂರ್ವ ಮಲಬದ್ಧತೆಯನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ. 
ನಿಮಗಾಗಿ ಸಮಯವನ್ನು ಮೀಸಲಿಡಿ
ಭಾವನಾತ್ಮಕ ಯೋಗಕ್ಷೇಮಕ್ಕೆ ಸಮಯ ಕೊಡುವುದೂ ಕೂಡ ಅತ್ಯಗತ್ಯ. ಸಂಜೆ ಸಮಯದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ದಿನದಲ್ಲಿ 1 ಸಮಯವಾದರೂ ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರ ಮಧ್ಯೆ ಉತ್ತಮ ಸಿನಿಮಾಗಳನ್ನು ನೋಡಿ. ಇದಾವುದೂ ಇಷ್ಟವಿಲ್ಲದಿದ್ದರೆ, ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿ. ಯಾವುದನ್ನು ಮಾಡಬೇಕೆಂದು ನೀವು ಅಂದುಕೊಂಡಿರುವಿರೋ ಅಂತಹ ಕಾರ್ಯಗಳನ್ನು ಪಟ್ಟಿ. ನಿಮ್ಮನ್ನು ನೀವು ಸಂತೋಷದಿಂದ ಇಟ್ಟುಕೊಳ್ಳಲು ಪ್ರಯತ್ನಿಸಿ. 
ಅನಿರೀಕ್ಷಿತತೆಗಳಿಗೆ ಸಿದ್ಧರಾಗಿರಿ
ಮಗುವಿಗೆ ಆರೈಕೆ ಮಾಡುವುದು ಬಿಟ್ಟರೆ ಬೇರಾವುದೇ ಕೆಲಸವನ್ನೂ ಮಾಡಲಿಲ್ಲ ಎಂಬ ಭಾವನೆಗಳು ಮೂಡುವುದು ಸಹಜ. ಕೆಲವರು ಇದರಿಂದ ದಿನಚರಿಗಳನ್ನು ಸಿದ್ಧಪಡಿಸಿಕೊಳ್ಳಲು ಸಮಯ ದೊರಕದು ಎಂದುಕೊಳ್ಳುತ್ತಾರೆ. ಯಾವುದೇ ಸಮಯ ಎದುರಾದರೂ ಅದನ್ನು ಎದುರಿಸಲು ಸದಾಕಾಲ ಸಿದ್ಧರಿರಬೇಕು. 
ನಿಮ್ಮ ಆರೈಕೆಗೆ ಸಹಾಯ ಕೇಳಿ
ಮೊದಲ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಇತರರ ಸಹಾಯ ಅತ್ಯಗತ್ಯವಿರುತ್ತದೆ. ಕೆಲವು ಮಗುವನ್ನು ನೋಡಿಕೊಳ್ಳಲು ಕುಟುಂಬಸ್ಥರ ಸಹಾಯ ಕೇಳುವುದುಂಟು. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಗೆಳೆಯರ ಬಳಿ ಸಹಾಯ ಕೇಳಲು ಹಿಂಜರಿಯಬೇಡಿ. ಹಣ ನೀಡುವ ಪರಿಸ್ಥಿತಿಯಲ್ಲಿದ್ದರೆ, ಮಗುವನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ನೇಮಿಸಿಕೊಳ್ಳಿ. ಸಂಬಂಧಿಕರು ಹತ್ತಿರವಿದ್ದರೆ ಸಹಾಯಕವಾಗುತ್ತದೆ ಎಂದೆನಿಸಿದರೆ, ಹತ್ತಿರದಲ್ಲೇ ಇರಿ. 
ವ್ಯಾಯಾಮ ಅತ್ಯಗತ್ಯ
ಗರ್ಭಿಣಿ ಮಹಿಳೆಯರು ತಮ್ಮ ಮನಸ್ಥಿತಿಯನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾದರೆ, ವ್ಯಾಯಾಮ ಅತ್ಯಗತ್ಯ. ಇದು ಮನಸ್ಸನ್ನು ಶಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ, ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ, ನಾನು ಮಾಡುತ್ತೇನೆಂದು ಮುಂದಕ್ಕೆ ಸಾಗಿ. 
ಮಿದುಳಿಗೂ ಬೇಕು ವ್ಯಾಯಾಮ
ಗರ್ಭಿಣಿ ಮಹಿಳೆಯರ ಮಿದುಳಿಗೆ ವ್ಯಾಯಾಮದ ಅಗತ್ಯವಿರುತ್ತದೆ. ವ್ಯಾಯಾಮ ಎಂದರೆ, ಜಿಮ್'ಗೆ ಕಸರತ್ತು ಮಾಡುವುದಲ್ಲ. ಪದಬಂಧ, ಸುಡೊಕು, ಚೆಸ್ ಆಡಬೇಕು. 
ಪ್ಲೇ ಥೆರಪಿ
ಮಕ್ಕಳೊಂದಿಗೆ ಆಟವಾಡುವುದೂ ಕೂಡ ದೊಡ್ಡ ವ್ಯಾಯಾಮವೇ. ಇದರಿಂದ ನಮ್ಮಲ್ಲಿರುವ ಶಕ್ತಿ ಕೂಡ ವೃದ್ಧಿಯಾಗುತ್ತದೆ. 
ಸಂಗೀತ ಕೇಳಿ
ಗರ್ಭಿಣಿ ಮಹಿಳೆಯರು ಉತ್ತಮವಾದ ಸಂಗೀತ ಕೇಳುವುದು ಮುಖ್ಯವಾಗುತ್ತದೆ. ಇದರಿಂದ ದೇಹದ ಒತ್ತಡ ಕೂಡ ದೂರಾಗುತ್ತದೆ. 
ಅಗತ್ಯ ಮಾಹಿತಿ ಪಡೆಯಲು ಯೂಟ್ಯೂಬ್ ಗಳನ್ನು ನೋಡಿ
ಯೂಟ್ಯೂಬ್ ವಿಡಿಯೋಗಳ ವೀಕ್ಷಣೆಗಳಿಂದರೂ ಒತ್ತಡಗಳು ನಿವಾರಣೆಯಾಗುತ್ತವೆ. ಗರ್ಭಿಣಿ ಮಹಿಳೆಯರ ತಲೆಯಲ್ಲಿ ಸಾಕಷ್ಟು ಗೊಂದಲ ಹಾಗೂ ಪ್ರಶ್ನೆಗಳಿರುತ್ತವೆ. ಇಂತಹ ಪ್ರಶ್ನೆ ಹಾಗೂ ಗೊಂದಲಗಳಿಗೆ ಇಂಟರ್ನೆಟ್ ಗಳ ಮೂಲಕ ಉತ್ತರಗಳನ್ನು ತಿಳಿದುಕೊಳ್ಳಬಹುದು. ಹಾಸ್ಯಕರ ವಿಡಿಯೋಗಳನ್ನು ನೋಡಿ, ಸದಾಕಾಲ ಸಂತೋಷದಿಂದ ಇರಲು ಪ್ರಯತ್ನಿಸಿ. 
ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ
ಗರ್ಭಿಣಿ ಮಹಿಳೆಯರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಚಿತ್ರಕಲೆ, ಕರಕುಶಲ ಕೆಲಸ, ಅಡುಗೆ ಮಾಡುವಂತಹ ಕೆಲಸಗಳಲ್ಲಿ ತೊಡಗುವುದರಿಂತ ಒತ್ತಡಗಳು ನಿವಾರಣೆಯಾಗುತ್ತವೆ. 
ನವೀನತೆಯ ದೃಷ್ಟಿಕೋನ
ನಿಮ್ಮ ಆಲೋಚನೆಗಳು ನವೀನತೆಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ಹೊಸತನ್ನು ಪ್ರಯತ್ನಿಸಲು ಯತ್ನಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com