ನೋವಿಲ್ಲದ ಹೆರಿಗೆ ಹೇಗೆ? ಗರ್ಭಿಣಿ ಮಹಿಳೆ ಹೇಗೆ ತಯಾರಿ ನಡೆಸಬೇಕು? ಇಲ್ಲಿದೆ ಮಾಹಿತಿ...

ಪ್ರತೀಯೊಬ್ಬ ಮಹಿಳೆಯೂ ತಾಯ್ತನ ಎನ್ನುವುದು ಒಂದು ವರ ಎಂದೇ ಭಾವಿಸುತ್ತಾಳೆ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ, ಅಷ್ಟೇ ಸಂತೋಷವನ್ನೂ ನೀಡುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ರತೀಯೊಬ್ಬ ಮಹಿಳೆಯೂ ತಾಯ್ತನ ಎನ್ನುವುದು ಒಂದು ವರ ಎಂದೇ ಭಾವಿಸುತ್ತಾಳೆ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ, ಅಷ್ಟೇ ಸಂತೋಷವನ್ನೂ ನೀಡುತ್ತದೆ. 
ಕರುಳಿನ ಕುಡಿಯನ್ನು ಪಡೆಯಲು ಯಾವುದೇ ತಾಯಿ ಎಷ್ಟೇ ನೋವು ಬೇಕಾದರೂ ಅನುಭವಿಸಲು ಸಿದ್ಧಳಿರುತ್ತಾಳೆ. ಚೊಚ್ಚಲ ಹೆರಿಗೆಗೆ ತಯಾರಿ ನಡೆಸುತ್ತಿರುವ ಮಹಿಳೆಯರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿಯೇ ಮನೆ ಮಾಡಿರುತ್ತದೆ. ಹೆರಿಗೆ ಯಾವಾಗ ಕಾಣಿಸಿಕೊಳ್ಳುತ್ತದೆಯೋ? ನನಗೆ ಆ ನೋವನ್ನು ಭರಿಸಲು ಸಾಧ್ಯವಿದೆಯೋ, ಇಲ್ಲವೋ? ಎಂದು ಗರ್ಭ ಧರಿಸಿದ ದಿನದಿಂದ ಯೋಚಿಸಿ ಯೋಚಿಸಿ ಕೊನೆಗೆ ಹೆರಿಗೆಯ ಭಯಂಕರ ನೋವಿನಿಂದ ಪಾರಾಗಲು ಸಿಸೇರಿಯನ್ ಮೊರೆ ಹೋಗುತ್ತಾರೆ. 
ಸಿಸೇರಿಯನ್ ನಂತರ ನಿರ್ಧಾರ ಕೈಗೊಳ್ಳುವ ಗರ್ಭಿಣಿ ಮಹಿಳೆಯರು ನೋವಿಲ್ಲದ ಹೆರಿಗೆ ಹೇಗೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು, ಗರ್ಭ ಧರಿಸಿದ ಮೂರು ತಿಂಗಳ ನಂತರದಿಂದಲೇ ಗರ್ಭಿಣಿ ಮಹಿಳೆಯರು ಹೆರಿಗೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ, ಹೆರಿಗೆಗೆ ದೇಹವನ್ನು ಸಿದ್ಧಪಡಿಸಿಕೊಳ್ಳಬೇಕು. 
ನೋವಿಲ್ಲದ ಹೆರಿಗೆ ಮಾಡಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಅಕ್ಯೂಪಂಕ್ಚರ್, ಹಿಪ್ನೋಥೆರಪಿ ಹಾಗೂ ಎಪಿಡ್ಯುರಲ್ ನಂತಹ ವಿಧಾನಗಳಿವೆ. ಇವುಗಳ ಬಗ್ಗೆ ಗರ್ಭಿಣಿ ಸ್ತ್ರೀಯರು ತಿಳಿದುಕೊಳ್ಳಬೇಕು. 
ಅಕ್ಯೂಪಂಕ್ಚರ್
ನೋವಿಲ್ಲದ ಹೆರಿಗೆಗೆ ಅಕ್ಯೂಪಂಕ್ಚರ್ ಅತ್ಯುತ್ತಮ ವಿಧಾನವಾಗಿದೆ. ಇದು ಚೀನಿಯರ ಚಿಕಿತ್ಸಾ ವಿಧಾನವಾಗಿದೆ. ಆದರೆ, ಇದರ ಪ್ರಯೋಜನದಿಂದಾಗಿ ಇಂದು ಇದು ವಿಶ್ವದ ಹಲವು ದೇಶಗಳಲ್ಲಿ ಪ್ರಯೋಗಿಸಲಾಗುತ್ತಿದೆ. ಚೀನಾ ದೇಶದಲ್ಲಿ 8 ಸಾವಿನರ ವರ್ಷಕ್ಕೂ ಹಿಂದೆಯೇ ಇದರ ಬಳಕೆ ಆರಂಭವಾಗಿತ್ತು. 
ಜಗತ್ತಿನಾದ್ಯಂತ ಅತ್ಯಂತ ಸರಳ ಹಾಗೂ ಅಡ್ಡ ಪರಿಣಾಮವಿಲ್ಲದ ಚಿಕಿತ್ಸಾ ಪದ್ಧತಿಯಾಗಿ ಇದು ರೂಢಿಯಲಾಲಿದೆ. ಇಂದಿಗೂ ವೈದ್ಯರು ಹತ್ತು ಹಲವು ರೋಗಗಳಿಗೆ ಇದನ್ನು ಅನುಸರಿಸುತ್ತಿದ್ದಾರೆ. 
ಆರಂಭದಲ್ಲಿ ಮೀನಿನ ಮುಳ್ಳು ಇಲ್ಲವೇ ಬಿದಿರಿನ ಸಣ್ಣ ಮುಳ್ಳುಗಳನ್ನು ಬಳಕೆ ಮಾಡಲಾಗುತ್ತಿತ್ತು. ನಂತರ ಚಿನ್ನದ ಸೂಚಿ, ಬೆಳ್ಳಿ, ಹಾಗೂ ತಾರ್ಮದ ಸೂಚಿಗಳನ್ನು ಉಪಯೋಗಿಸಲಾಯಿತು. ಪ್ರಸ್ತುತ ಸ್ಟೇನ್'ಲೆಸ್ ಸ್ಟೀಲ್'ನ್ನು ವೈದ್ಯರು ಬಳಕೆ ಮಾಡುತ್ತಿದ್ದಾರೆ. ಆದರೆ, ಈ ಸೂಜಿಯ ಹೊರಕವಚ ಮಾತ್ರ ಚಿನ್ನ, ಬೆಳ್ಳಿ ಅಥವಾ ತಾಮ್ರದ್ದಾಗಿರುತ್ತದೆ. 
ದೇಹದ ಮುಖ್ಯ ಅಂಗಗಳಿಂದ ಉತ್ಪತ್ತಿಯಾಗುವ ಜೀವಶಕ್ತಿಯ ದೇಹದ ಎಲ್ಲಾ ಭಾಗಗಳಲ್ಲೂ ಸಂಚರಿಸುತ್ತಿರುತ್ತದೆ. ಈ ಶಕ್ತಿಯು ಸಂಚರಿಸುವ ಪಥದಲ್ಲಿ ತಡೆಯುಂಟಾದಾಗ ನೋವುಗಳು ಹೆಚ್ಚಾಗುತ್ತವೆ. ಈ ತಡೆಯನ್ನು ಅಕ್ಯುಪಂಕ್ಚರ್ ಮುಲಕ ತೆಗೆದು ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ಸಂಚಿಸುವ ಹಾಗೆ ಮಾಡಲಾಗುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ. 
ಹಿಪ್ನೋಥರಪಿ
ಹಿಪ್ನೋಸಿಸ್ ಮೇಲ್ನೋಟಕ್ಕೆ ನಿದ್ರೆಯನ್ನು ಹೋಲವು ಕೆಲ ಶಾರೀರಿಕ ಲಕ್ಷಣಗಳಾಗಿದ್ದು ಒಂದು ವಿಶೇಷ ಮಾನಸಿಕ ಸ್ಥಿತಿ. ಸಾಮಾನ್ಯ ಜಾಗೃತ ಮನಸ್ಸಿಗಿಂತ ಹೆಚ್ಚು ಸೂಪ್ತ ಮನಸ್ಸಿನ/ ಒಳ ಮನಸ್ಸಿನ ಅರಿವಿನ ಮಟ್ಟವನ್ನು ಗುರುತಿಸುವಂತಹದ್ದು. ಇದು ಗರ್ಭಿಣಿ ಮಹಿಳೆಯಲು ತಮ್ಮೊಳಗೆ ತಾವು ಮಾತನಾಡಿಕೊಳ್ಳುವ ಮತ್ತು ತಮಗೆ ತಾವೇ ಭಾವನೆಗಳು ಬಾಹ್ಯ ವಾಸ್ತವ ಅಥವಾ ಬಾಹ್ಯ ಶಾರೀರಿಕ ಅಂಶಗಳಿಗಿಂತ ಅತ್ಯಂತ ಮುಖ್ಯವಾದದ್ದಾಗಿದೆ. ಆದ್ದರಿಂದ ಹಿಪ್ನೋಸಿಸ್ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡುತ್ತದೆ. 
ಈ ಚಿಕಿತ್ಸೆ ಪಡೆಯುವ ಮಹಿಳೆಯನ್ನು ಆರಾಮದಾಯಕವಾಗಿ ಕುರ್ಚಿಯಲ್ಲಿ ಕೂರಿಸಲಾಗುತ್ತದೆ. ಇಲ್ಲವೇ ನೆಲದ ಮೇಲೆ ಮಲಗಿಸಲಾಗುತ್ತದೆ. ಸಂಗೀತ ಮತ್ತು ಮೌಖಿಕ ಸೂಚನೆಗಳನ್ನು ನೀಡುವುದರ ಮೂಲಕ ವಿಶ್ರಾಂತಿ ನೀಡಿ, ಮೊದಲ ಹಂತದಲ್ಲಿ ಉಸಿರಾಟದ ಕೇವಲ ಉಸಿರೆಳೆದುಕೊಳ್ಳುವ ಮತ್ತು ಉಸಿರು ಹೊರಬಿಡುವುದನ್ನು ಮಾಡುವುದರ ಮೂಲಕ ಅಂದರೆ, ಲಯಬದ್ಧವಾದ ಉಸಿರಾಟವನ್ನು ಮೂರು ಎಣಿಕೆಗಳ ಮೂಲಕ ಉಸಿರೆಳೆದುಕೊಳ್ಳುವುದು ಮತ್ತು ಮೂರು ಎಣಿಕೆಗಲ ಮೂಲಕ ಉಸಿರು ಹೊರಬಿಡುವುದು ಈ ರೀತಿಯ ವಿಶ್ರಾಂತಿ ಪ್ರಕ್ರಿಯೆಯನ್ನು ಮಾಡಲಾಗುವುದು. 
ಇದು ಅಡಿಯಿಂದ ಮುಡಿಯವರೆಗೂ ಅಂದರೆ ದೇಹದ ತಲೆಯ ಭಾಗದಿಂದ ಕಾಲಿನವರೆಗೂ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ನಂತರ ಮಹಿಳೆಯರು ಕೆಲವು ಸಂಮೋಹನ ತಂತ್ರಗಳ ಮೂಲಕ ಅಜಾಗೃತ ಮನಸ್ಸನ್ನು ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಹಿಂದುಮುಂದಾಗಿ ಎಣಿಸುವ ಸಾಮಾನ್ಯ ಮತ್ತು ಜನಪ್ರಿಯ ತಂತ್ರದ ಮೂಲಕ ಮಹಿಳೆಯರ ಸಂಪೂರ್ಣ ಗಮನ ಸೆಳೆಯಲಾಗುತ್ತದೆ. ಇಲ್ಲಿ ಸ್ವಯಂ ಸಲಹೆಗಳನ್ನು ನೀಡುವುದರ ಮೂಲಕ ಮನಸ್ಸನ್ನು ಜಾಗೃತಗೊಳಿಸಲಾಗುತ್ತದೆ. 
ಇಲ್ಲಿ ತಾಯಿ ಮತ್ತು ಮಗುವಿನ ನಡುವೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದು ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಬೆಸೆಯಸಲು ಸಹಾಯ ಮಾಡುತ್ತದೆ. ಹೆಚ್ಚಿನ ಪೋಷಕರು ಈ ವಿಧಾನದಿಂದ ಬಹಳ ಶಾಂತಿಯುತ ಮನಸ್ಥಿತಿಯನ್ನು ಕಂಡುಕೊಳ್ಳುತ್ತಾರೆ. ಇದು ತಾಯಿಯಲ್ಲಿ ಆತ್ಮವಿಶ್ವಾಸವನ್ನು ಕಲ್ಪಿಸಿಕೊಡುವುದರ ಮೂಲಕ ಹುಟ್ಟುವ ಮಗುವಿಗೆ ಸುಲಭವಾಗಿ ಜನ್ಮ ನೀಡುವಂತೆ ಮಾನಸಿಕ ಆರೋಗ್ಯವನ್ನು ಒದಗಿಸುತ್ತದೆ. ಈ ಪ್ರಕ್ರಿಯೆ ನಂತರ ಸ್ವಯಂ ಸಲಹೆಗಳನ್ನು ತಾಯಿಗೆ ಪುನರಾವರ್ತಿಸಲು ಹೇಳಲಾಗುತ್ತದೆ. ನಂತರ ಆಕೆಯನ್ನು ಸಂಮೋಹನದಿಂದ ಹೊರತರಲಾಗುತ್ತದೆ. 
ಎಪಿಡ್ಯುರಲ್
ಹೆರಿಗೆ ನೋವು ತಾಳಲಾಗದೆ ಬಳಲುವ ಮಹಿಳೆಯರು ಮಾನಸಿಕ, ದೈಹಿಕ ನೋವಿನಿಂದ ಪಾರಾಗಲು ತಜ್ಞರು ಎಪಿಡ್ಯೂರಲ್ ಅನಸ್ತೇಶಿಯಾ ಕಂಡು ಹಿಡಿದಿದ್ದಾರೆ. 
ಈ ಪ್ರಕ್ರಿಯೆಯಲ್ಲಿ ಹೆರಿಗೆ ನೋವಿನಿಂದ ಮುಕ್ತಿ ಪಡೆಯಲು ಪ್ರಯೋಗಿಸುವ ಔಷಧಿಗಳು ಮೆದುಳಿನ ಮೇಲೆ ಪ್ರಭಾವ ಬೀರಿ ನೋವಿನ ಅನುಭವವಾಗದಂತೆ ಮಾಡುತ್ತದೆ. ಅಥವಾ ಬೆನ್ನುಹುರಿಯ ಮೂಲಕ ಮೆದುಳಿಗೆ ಹೆರಿದೆ ಸಂದೇಶವನ್ನು ತಡೆಯುತ್ತವೆ. ಇದರ ಪರಿಣಾಮವಾಗಿ ಹೆರಿಕೆಯ ಸಮಯದಲ್ಲಿ ನೋವಿನ ಅನುಭವವಾಗುವುದಿಲ್ಲ. ಎರಡೂ ವಿಧಾನಗಳಲ್ಲಿ ತಾಯಿ ಮತ್ತು ಮಗು ಇಬ್ಬರೂ ಪೂರ್ಣ ಸುರಕ್ಷಿತರಾಗಿರುತ್ತಾರೆ. 
ಸೊಂಟದ ಕೆಳಭಾಗದಲ್ಲಿನ ತೆಳ್ಳನೆ ಪ್ಲಾಸ್ಟಿಕ್ ನಾಳದ ಮೂಲಕ ಔಷಧಿಯನ್ನು ಎಪಿಡ್ಯುರಲ್ ಜಾಗಕ್ಕೆ ತಲುಪಿಸಲಾಗುತ್ತದೆ. ಇದಾದಜ ನಂತರ ಇನ್ಫ್ಯೂಶನ್ ಪಂಪ್ ಮೂಲಕ ನೋವು ಕಡಿಮೆ ಮಾಡುವ ಔಷಧಿಯನ್ನು ನಿರ್ಧಾರಿತ ಪ್ರಮಾಣದಲ್ಲಿ ನಿರಂತರವಾಗಿ ಮಗು ಹೊರಬರುವ ತನಕ ನೀಡಲಾಗುತ್ತದೆ. ಇದರಿಂದ ನೋವಿನ ಸಂವೇದನೆಯು ಇಲ್ಲವಾಗಿ ಮೋಟರ್ಫೈಬರ್ಸ್ (ಮಾಂಸಖಂಡ)ಗಳ ಚಲಿಸುವ ಸಾಮರ್ಥ್ಯ ಹಾಗೇ ಇರುತ್ತದೆ. ಆದ್ದರಿಂದ ತಾಯಿ ಪೂರ್ಣ ರೀತಿಯಲ್ಲಿ ಒತ್ತಡ ಹಾಕಿ ಸಾಮಾನ್ಯ ಹೆರಿಗೆಗೆ ತನ್ನ ಸಹಕಾರ ನೀಡಬಹುದು. 
ಬೆನ್ನು ಹುರಿ ಚಿಕ್ಕ ಚಿಕ್ಕ ಮೂಳೆಗಳಿಂದ ರಚಿತವಾದಂಥದ್ದು. ಇದರ ಮಧ್ಯದ ಭಾಗದಲ್ಲಿ ಅಂದರೆ ಸ್ಪೈನಲ್ ಕಾರ್ಡ್ನ ಎರಡು ಪದರ ಆಚೆ ಇರುವ ಎಪಿಡ್ಯುರಲ್ ಸ್ಪೇಷ್ನಲ್ಲಿ ಇಂಜೆಕ್ಷನ್ ಕೊಡಲಾಗುತ್ತದೆ. ಇದು ಸಾಮಾನ್ಯ ಇಂಜೆಕ್ಷನಿಂದಾಗುವಷ್ಟೇ ನೋವನ್ನುಂಟು ಮಾಡುತ್ತದೆ. ಈ ವಿಧಾನದಲ್ಲಿ ಸಹಜ ಹೆರಿಗೆ ಬಲು ಸುಲಭ ಮತ್ತು ಮಗುವಿಗೆ ಯಾವುದೇ ತೊಂದರೆಯಾಗದಂತೆ ಪ್ರತಿ 15 ನಿಮಿಷಕ್ಕೆ ರಕ್ತದೊತ್ತಡ ಮತ್ತು ನಾಡಿಯ ಮಾನಿಟರ್ ಮಾಡಲಾಗುತ್ತದೆ. ಮಗುವಿನ ಹೃದಯ ಬಡಿತವನ್ನೂ ಕಾರ್ಡಿಯೋಟೋಕೋಗ್ರಾಫ್ ಮೂಲಕ ಹೆರಿಗೆ ಮುಗಿಯುವವರೆಗೂ ನಿರ್ವಹಿಸಲಾಗುತ್ತದೆ. ಇದರ ಖರ್ಚು 4ರಿಂದ 6 ಸಾವಿರ ರು. ಮಾತ್ರ. ಹೆಚ್ಚು ರಕ್ತದೊತ್ತಡ ಇರುವ ಮಹಿಳೆಯರಿಗೆ ಈ ವಿಧಾನದಿಂದ ಹೆಚ್ಚು ಲಾಭವಾಗುತ್ತದೆ ಮತ್ತು ರಕ್ತದೊತ್ತಡದ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com