ಹದಿಹರೆಯದ ಯುವತಿಯನ್ನು ಸಾವಿನ ಬಾಗಿಲಿಗೆ ಕೊಂಡೊಯ್ದ ಅಪರೂಪದ ಕಾಯಿಲೆ!

ಬಹುತೇಕ ಮಕ್ಕಳು ಕೋವಿಡ್ ಲಕ್ಷಣ ರಹಿತ ಅಥವಾ ಸಾಧಾರಣ ಸೋಂಕಿಗೆ ತುತ್ತಾದರೂ ಬೆಂಗಳೂರಿನ 14 ವರ್ಷದ ಹದಿಹರೆಯದ ಯುವತಿಯೊಬ್ಬಳು ಅಪರೂಪದ ಕಾಯಿಲೆಯಿಂದಾಗಿ ಸಾವಿನ ಬಾಗಿಲು ಬಡಿದು, ಇದೀಗ ಚೇತರಿಸಿಕೊಂಡಿದ್ದಾಳೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುತೇಕ ಮಕ್ಕಳು ಕೋವಿಡ್ ಲಕ್ಷಣ ರಹಿತ ಅಥವಾ ಸಾಧಾರಣ ಸೋಂಕಿಗೆ ತುತ್ತಾದರೂ ಬೆಂಗಳೂರಿನ 14 ವರ್ಷದ ಹದಿಹರೆಯದ ಯುವತಿಯೊಬ್ಬಳು ಅಪರೂಪದ ಕಾಯಿಲೆಯಿಂದಾಗಿ ಸಾವಿನ ಬಾಗಿಲು ಬಡಿದು, ಇದೀಗ  ಚೇತರಿಸಿಕೊಂಡಿದ್ದಾಳೆ. 

ಅಕ್ಟೋಬರ್ 14 ರಂದು ಆಸ್ಪತ್ರೆಗೆ ದಾಖಲಾಗಿದ್ದ ಈ ಯುವತಿ,  ಸಾರ್ಸ್ -ಕೋವ್-2 ಜೊತೆಗೆ ತಾತ್ಕಾಲಿಕವಾಗಿ ಸಂಬಂಧ ಹೊಂದಿರುವ ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ (ಪಿಐಎಂಎಸ್- ಟಿಎಸ್) ಕಾರಣದಿಂದಾಗಿ   ಹೃದಯ, ಉಸಿರಾಟ ತೊಂದರೆ ಸೇರಿದಂತೆ ಬಹು ಅಂಗಾಂಗ ಸಮಸ್ಯೆಯಿಂದ ನರಳಿದ್ದಾರೆ. ವಿಶ್ವದಾದ್ಯಂತ ಈ ಕಾಯಿಲೆ ಕಂಡುಬರುತ್ತಿದೆ.

ಆಕೆ ಆಸ್ಪತ್ರೆಗೆ ದಾಖಲಾದಾಗ ಜ್ವರ, ಭೇದಿ,  ಆಯಾಸ ಮತ್ತು ಉಸಿರಾಟದ ತೊಂದರೆ, ಕಡಿಮೆ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳಿದ್ದವು.  ಆದಾಗ್ಯೂ, ಆರ್ ಪಿಟಿ- ಪಿಸಿಆರ್ ಟೆಸ್ಟ್ ನಲ್ಲಿ ಕೋವಿಡ್- ನೆಗೆಟಿವ್ ಬಂದಿದ್ದು, ಈ ಹಿಂದೆ ಆಕೆ ರೋಗಕ್ಕೆ ತುತ್ತಾಗಿದ್ದಾಗಿ ರೋಗ ನಿರೋಧಕ ಪರೀಕ್ಷೆಯಲ್ಲಿ ತಿಳಿಸಲಾಗಿದೆ.

ಪಿಐಎಂಸ್- ಟಿಸ್ ಕಾರಣದಿಂದ ಇದು ಕಂಡುಬಂದಿದೆ ಎಂದು ರೈನ್ ಬೋ ಮಕ್ಕಳ ಆಸ್ಪತ್ರೆ ವೈದ್ಯರು ಶಂಕಿಸಿದ್ದಾರೆ. ಸಾರ್ಸ್ -ಕೋವ್ 2ಗೆ ಒಡ್ಡಿಕೊಂಡ ನಂತರ ನಿರಂತರ ಜ್ವರ ಮತ್ತು ತೀವ್ರ ಉರಿಯೂತವನ್ನು ಒಳಗೊಂಡ ಅಪರೂಪದ ವ್ಯವಸ್ಥಿತ ಕಾಯಿಲೆಯಾಗಿದೆ. ಮಕ್ಕಳಿಗೆ ರೋಗ ನಿರೋಧಕವನ್ನು ನೀಡಲು ಆರಂಭಿಸಿರುವುದಾಗಿ  ಮಕ್ಕಳ ತೀವ್ರ ನಿಗಾ ಸಲಹೆಗಾರ ಡಾ. ಶ್ರೀಧರ್ ತಿಳಿಸಿದ್ದಾರೆ.

ಆದಾಗ್ಯೂ,  ಕಿಡ್ನಿ ಮತ್ತು ನರ ಸ್ನಾಯು ದೌರ್ಬಲ್ಯ ಸಮಸ್ಯೆಯಿಂದ ಆಕೆ ಚೇತರಿಸಿಕೊಂಡಿದ್ದು, ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ನಾಲ್ಕು ದಿನಗಳವರೆಗೂ ಯಾವುದೇ ಆಹಾರವನ್ನು ನೀಡಿಲ್ಲ, ನಂತರ ಆಹಾರ ನೀಡಲು ಶುರು ಮಾಡಲಾಯಿತು. ಸೂಕ್ತ ಚಿಕಿತ್ಸೆಯಿಂದಾಗಿ ಆಕೆಯ ರಕ್ತದೊತ್ತಡ ಪ್ರಮಾಣ ಸರಿಯಾಗಿ ಪ್ರಾಣವನ್ನು ಉಳಿಸಲಾಯಿತು ಎಂದು ಡಾ. ಶ್ರೀಧರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com