ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಆಯುಷ್ ನೀಡುತ್ತಿರುವ ಈ ಉಚಿತ ಕಷಾಯ!

ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ವಕ್ಕಲಿಸಿದ್ದು, ಈ ವರೆಗೂ ಈ ಹೆಮ್ಮಾರಿಗೆ ಯಾವುದೇ ಲಸಿಕೆಗಳು ಲಭ್ಯವಾಗಿಲ್ಲ. ಆದರೆ, ಇದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಅಲ್ಲದೆ, ರೋಗವನ್ನು ಎದುರಿಸಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಗತ್ಯವೂ ಇದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ವಕ್ಕಲಿಸಿದ್ದು, ಈ ವರೆಗೂ ಈ ಹೆಮ್ಮಾರಿಗೆ ಯಾವುದೇ ಲಸಿಕೆಗಳು ಲಭ್ಯವಾಗಿಲ್ಲ. ಆದರೆ, ಇದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಅಲ್ಲದೆ, ರೋಗವನ್ನು ಎದುರಿಸಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಗತ್ಯವೂ ಇದೆ. 

ಈ ನಡುವೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ರಾಜ್ಯ ಆಯುಷ್ ಇಲಾಖೆ, ಕಷಾಯವನ್ನು ಉಚಿತವಾಗಿ ಪ್ರತೀಯೊಬ್ಬರಿಗೂ ನೀಡಲು ಆರಂಭಿಸಿದೆ. 

ಕೇಂದ್ರ ಮಾರ್ಗಸೂಚಿ ಅನುಸಾರ ಈ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಉಚಿತವಾಗಿ ನೀಡಲಾಗುತ್ತದೆ. ಕ್ವಾರಂಟಾನ್ ನಲ್ಲಿರುವವರಿಗೆ ಹಾಗೂ ಕಂಟೈನ್ಮೆಂಟ್ ಝೋನ್ ನಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯದ ಆಯುಷ್ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿಯವರು ಹೇಳಿದ್ದಾರೆ. 

ಜೋಶಾಂದ ಎಂಬ ಹೆಸರಿನ ಈ ಕಷಾಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಕಷಾಯದ ಜೊತೆಗೆ ಇಲಾಖೆ ಅಕ್ರ್ ಎ ಅಜೀಬ್ ಎಂಬ ಪದಾರ್ಥವನ್ನೂ ಸಿದ್ಧಪಡಿಸಿದ್ದು, ಈ ದ್ರಾವಣವನ್ನು ಟಿಶ್ಯೂ ಪೇಪರ್ ಅಥವಾ ಕರವಸ್ತ್ರದ ಮೇಲೆ ಹಾಕಿಕೊಂಡು ಸುವಾಸನೆ ತೆಗೆದುಕೊಳ್ಳಬೇಕು. ಅಲ್ಲದೆ, ಈ ದ್ರಾವಣವನ್ನು ಬಿಸಿನೀರಿಗೆ ಹಾಕಿ ಅದರ ಹಭೆಯನ್ನು ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. 

ಇನ್ನು ಕಷಾಯವನ್ನು ಸಿದ್ಧಪಡಿಸುವ ವಿಧಾನವೆಂದರೆ...
ನಾಲ್ಕು ಭಾಗದಷ್ಟು ಒಣಗಿದ ತುಳಸಿ ಎಲೆ, 2 ಭಾಗ ದಾಲ್ಚಿನ್ನಿ (ಚಕ್ಕೆ), 2 ಭಾಗದಷ್ಟು ಒಣಗಿದ ಶುಂಠಿ ಹಾಗೂ 1 ಭಾಗದಷ್ಟು ಕಾಳುಮೆಣಸು ತೆಗೆದುಕೊಂಡು ಪುಡಿ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು. 

1/4 ಚಮಚದಷ್ಟು ಈ ಕಷಾಯದ ಪುಡಿಯನ್ನು 150 ಮಿಲಿ ನೀರಿನಲ್ಲಿ 5 ರಿಂದ 10 ನಿಮಿ| ಕುದಿಸಿ ಸೋಸಿ ದಿನಕ್ಕೆ 1 ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಗತ್ಯ ಎನಿಸಿದರೆ, ಇದರ ಜೊತೆಗೆ ಬೆಲ್ಲ, ನಿಂಬೆರಸ ಅಥವಾ ಒಣದ್ರಾಕ್ಷಿ ಬೆರೆಸಿಕೊಳ್ಳಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com