ಗರ್ಭ ನಿರೋಧಕ ಐಯುಡಿ ಉಪಕರಣ
ಗರ್ಭ ನಿರೋಧಕ ಐಯುಡಿ ಉಪಕರಣ

ಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳು

ಸೆಕ್ಸ್, ಅಬಾರ್ಷನ್ ಮತ್ತು ಗರ್ಭ ನಿರೋಧ, ಈ ಮೂರು ವಿಷಯಗಳು ಇಂದಿಗೂ ವಿವಾದಾತ್ಮಕ. ಗರ್ಭ ನಿರೋಧಕಗಳು ಗರ್ಭಧಾರಣೆಯನ್ನು ತಡೆಯಲು ಬಳಸಲ್ಪಡುತ್ತವೆ ಎನ್ನುವುದು ನಿಜ. ಆದರೆ ಅವುಗಳ ಬಳಕೆ ಅದೊಂದೇ ಉದ್ದೇಶಕ್ಕೆ ಸೀಮಿತವಲ್ಲ. 
Published on

ಸೆಕ್ಸ್, ಅಬಾರ್ಷನ್ ಮತ್ತು ಗರ್ಭ ನಿರೋಧ, ಈ ಮೂರು ವಿಷಯಗಳು ಇಂದಿಗೂ ವಿವಾದಾತ್ಮಕ. ಗರ್ಭ ನಿರೋಧಕಗಳು ಗರ್ಭಧಾರಣೆಯನ್ನು ತಡೆಯಲು ಬಳಸಲ್ಪಡುತ್ತವೆ ಎನ್ನುವುದು ನಿಜ. ಆದರೆ ಅವುಗಳ ಬಳಕೆ ಅದೊಂದೇ ಉದ್ದೇಶಕ್ಕೆ ಸೀಮಿತವಲ್ಲ. 

ತಮ್ಮ ತಮ್ಮ ಜೀವನಶಲಿಗೆ ತಕ್ಕಂತೆ ಯಾವ ಮಾರ್ಗ ಅನುಸರಿಸುವುದು ಸೂಕ್ತ? ಸೆಕ್ಸ್ ಮೂಲಕ ಹರಡುವ ಸೋಂಕನ್ನು ತಡೆಗಟ್ಟುವ ಬಗೆ ಹೇಗೆ? ಅವುಗಳನ್ನು ಬಳಸುವುದರಿಂದ ಅಡ್ಡಪರಿಣಾಮಗಳಿವೆಯೇ? ಅವು ಎಷ್ಟರಮಟ್ಟಿಗೆ ಪರಿಣಾಮಕಾರಿ?

ಸುರಕ್ಷಿತ ಲೈಂಗಿಕ ಸಂಬಂಧ ಹೊಂದಲು ಹಾಗೂ ಗರ್ಭ ನಿರೋಧಕ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಹಲವು ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. 

ಎಕ್ಸ್ ಟರ್ನಲ್ ಕಾಂಡೋಂ

ಕಾಂಡೋಂ ಎಂದರೆ ಸಾಮಾನ್ಯವಾಗಿ ಎಕ್ಸ್ ಟರ್ನಲ್ ಕಾಂಡೋಂ ಎಂದೇ ಅರ್ಥ. ಪುರುಷರ ಗುಪ್ತಾಂಗದ ಮೇಲ್ಗಡೆ ಇದನ್ನು ಅಳವಡಿಸಲಾಗುತ್ತದೆ. ರಬ್ಬರ್ ನಿಂದ ರೂಪಿತಗೊಂಡಿರುತ್ತದೆ ಈ ಕಾಂಡೋಂ. ಇವುಗಳಿಂದ ಎರಡು ಪ್ರಯೋಜನಗಳಿವೆ. ಗರ್ಭಧಾರಣೆ ತಡೆಯುವುದಲ್ಲದೆ, ಲೈಂಗಿಕ ರೋಗಗಳು ಹರಡುವುದನ್ನೂ ಇವು ತಡೆಯುತ್ತವೆ. ಇವುಗಳಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತವೆ.

ಇಂಟರ್ನಲ್ ಕಾಂಡೋಂ

ಇವನ್ನು ಸ್ತ್ರೀಯರಿಗಾಗಿ ತಯಾರಿಸಲಾಗಿರುತ್ತದೆ. ಬಹುತೇಕ ಎಕ್ಸ್ ಟರ್ನಲ್ ಕಾಂಡೋಂಗಳು ಲೇಟೆಕ್ಸ್ ನಿಂದ ಮಾಡಲ್ಪಟ್ಟಿರುತ್ತದೆ. ಇಂಟರ್ನಲ್ ಕಾಂಡೋಂ ನಲ್ಲಿ ಲೇಟೆಕ್ಸ್ ಅಂಶ ಇರುವುದಿಲ್ಲ. ಇವನ್ನು ಸ್ತ್ರೀಯರು ತಮ್ಮ ಗುಪ್ತಾಂಗದ ಒಳಕ್ಕೆ ಧರಿಸಲಾಗುತ್ತದೆ. ಮೂರು

ಕಾಪರ್ ಉಪಕರಣ (ಐಯುಡಿ)

ಐಯುಡಿ ಎನ್ನುವುದು ಶುದ್ಧ ತಾಮ್ರ ಲೋಹದಿಂದ ಮಾಡಲ್ಪಟ್ಟ ಸಾಧನವಾಗಿದೆ. ಅದಕ್ಕೆ ಪ್ಲಾಸ್ಟಿಕ್ ಲೇಪನವಿರುತ್ತದೆ. ಇದನ್ನು ಗರ್ಭಕೋಶದ ಒಳಗೆ ಇಂಪ್ಲಾಂಟ್ ಮಾಡಲಾಗುತ್ತದೆ. ಈ ಉಪಕರಣದಲ್ಲಿ ನೈಲಾನ್ ದಾರದ ಎಳೆಯಿರುತ್ತದೆ. ಒಮ್ಮೆ ಅಳವಡಿಸಿದಲ್ಲಿ 10 ವರ್ಷಗಳ ತನಕ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಗರ್ಭಧಾರಣೆಯನ್ನು ಇವು ಶೇ.99 ಪ್ರತಿಶತ ತಡೆಗಟ್ಟುತ್ತವೆ.

ಗರ್ಭನಿರೋಧಕ ಗುಳಿಗೆ

ಗರ್ಭ ತಡೆಯುವ ಮಾರ್ಗಗಳಲ್ಲಿ ಜನಪ್ರಿಯ ಮಾರ್ಗವೆಂದರೆ ಇದುವೆ. ಇದೊಂದು ಚಿಕ್ಕ ಗುಳಿಗೆಯಾಗಿದ್ದು, ದಿನಕ್ಕೊಂದು ಬಾರಿಯಂತೆ ಸೇವಿಸಬೇಕಾಗುತ್ತದೆ. ಈ ಗುಳಿಗೆಯಿಂದ ಹಲವು ಪ್ರಯೋಜನಗಳಿವೆ. ಆದರೆ, ಸಮಯಕ್ಕೆ ಸರಿಯಾಗಿ ಮರೆಯದೇ ಈ ಗುಳಿಗೆ ಸೇವಿಸಿವುದು ಅತ್ಯವಶ್ಯ. ಸೆಕ್ಸ್ ಕ್ರಿಯೆಗೆ ಯಾವುದೇ ತೊಡಕು ಉಂಟು ಮಾಡದಿರುವುದು ಬಹು ಮುಖ್ಯವಾದ ಉಪಯೋಗ. 
ಈ ಗುಳಿಗೆಯನ್ನು ವೈದ್ಯರ ಪ್ರಿಸ್ಕ್ರೀಪ್ಷನ್ ಆಧಾರದಲ್ಲಿಯೇ ಸ್ವೀಕರಿಸಬೇಕು. ಹೀಗಾಗಿ ವೈದ್ಯರನ್ನು ಕಾಣಬೇಕಾದುದು ಅತ್ಯವಶ್ಯ. 
ಇವು ಸುರಕ್ಷಿತವಾದರೂ ಅಡ್ಡಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com