ಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗ

ದೇಶದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಶೇ.85 ಪ್ರತಿಶತಕ್ಕೂ ಹೆಚ್ಚಿನ ಮಂದಿ ಆಯುರ್ವೇದ ಔಷಧ ಪದ್ಧತಿಯನ್ನು ಪ್ರಿಫರ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಸ್ಪತ್ರೆಗಳಲ್ಲಿ ಆಧುನಿಕ ಔಷಧ ಪದ್ಧತಿಯ ಜೊತೆ ಜೊತೆಗೇ ಹೆಚ್ಚಿನ ಕ್ಯಾನ್ಸರ್ ರೋಗಿಗಳು ಆಯುರ್ವೇದ ಚಿಕಿತ್ಸೆಗೆ(Complementary and Alternative Medicine) ಮೊರೆ ಹೋಗುತ್ತಿರುವ ಬೆಳವಣಿಗೆಯನ್ನು ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಾಜೀವ್ ಗಾಂಧಿ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ ಅಂಡ್ ರೀಸರ್ಚ್ ಸೆಂಟರ್ ಈ ಸಮೀಕ್ಷೆಯನ್ನು ನಡೆಸಿದೆ. 

ಆಯುರ್ವೇದವನ್ನು ಹೆಚ್ಚುವರಿ ಔಷಧ ಪದ್ಧತಿಯನ್ನಾಗಿ ಆರಿಸಿಕೊಂಡಿರುವ ರೋಗಿಗಳಲ್ಲಿ ಮುಕ್ಕಾಲು ಪಾಲು ಬಡ ಮತ್ತು ಮಧ್ಯಮ ವರ್ಗದ ರೋಗಿಗಳಾಗಿದ್ದಾರೆ. 

ಇನ್ನೊಂದು ಅಚ್ಚರಿಯ ಸಂಗತಿ ಸಮೀಕ್ಷೆಯಿಂದ ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ರೋಗಿಗಳಿಗೆ ಒತ್ತಡ ಪರೀಕ್ಷೆಯನ್ನೂ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಆಯ್ದುಕೊಂಡವರಲ್ಲಿ ಅತಿ ಹೆಚ್ಚು ಮಂಡಿ ಒತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com