ಸ್ತನ್ಯಪಾನದಿಂದ ಪ್ರಸವಾನಂತರದ ಖಿನ್ನತೆ ದೂರ!

ನವಜಾತ ಶಿಶುವಿನ ಬೆಳವಣಿಗೆಯ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ಮಗು ತನ್ನ ತಾಯಿಯ ಎದೆಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ, ಜೊತೆಗೆ ಸ್ತನ್ಯಪಾನದಿಂದ ಹಲವಾರು ಆರೋಗ್ಯ ಪ್ರಯೋಜನಗಳು ತಾಯಿ ಮತ್ತು ಮಗು ಇಬ್ಬರಿಗೂ ಲಭಿಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವಜಾತ ಶಿಶುವಿನ ಬೆಳವಣಿಗೆಯ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ಮಗು ತನ್ನ ತಾಯಿಯ ಎದೆಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ, ಜೊತೆಗೆ ಸ್ತನ್ಯಪಾನದಿಂದ ಹಲವಾರು ಆರೋಗ್ಯ ಪ್ರಯೋಜನಗಳು ತಾಯಿ ಮತ್ತು ಮಗು ಇಬ್ಬರಿಗೂ ಲಭಿಸುತ್ತದೆ.ಆದ್ದರಿಂದಲೇ ತಾಯಿ ಎದೆಹಾಲು ಅಮೃತವಿದ್ದಂತೆ ಎಂದು ಹೇಳಲಾಗುತ್ತದೆ.

ತಾಯಿಯ ಎದೆಹಾಲಿಗೆ ಸಂಬಂಧಿಸಿದ ಈ ವಿಶೇಷತೆಗಳನ್ನು ಜಗತ್ತಿಗೆ ತಿಳಿಸಲು ಮತ್ತು ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ ಮೊದಲ ವಾರವನ್ನು ವಿಶ್ವಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ.

ಆಗಸ್ಟ್ 1 ರಿಂದ ಆಗಸ್ಟ್ 7ರ ವರೆಗೆ ನಡೆಯುವ ಈ ಸಪ್ತಾಹದಲ್ಲಿ ತಾಯಿಯ ಎದೆಹಾಲಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಮತ್ತು ಮಗುವಿನ ಆರೋಗ್ಯಕ್ಕೆ ತಾಯಿಯ ಹಾಲು ಎಷ್ಟೊಂದು ಪ್ರಾಮುಖ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ತಾಯಿಯ ಹಾಲು ಮದುವಿದೆ ಅಮೃತವಿದ್ದಂತೆ. ಇದು ಬಾಲ್ಯದಲ್ಲಿ ಬರುವ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಹೊಂದಿರುತ್ತದೆ. ಇದು ಮಗುವಿಗೆ ಹುಟ್ಟಿದ ಮೊದಲ ಕೆಲವು ತಿಂಗಳುಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎದೆಹಾಲು ಕುಡಿಯುವ ಮಕ್ಕಳು ಆರೊಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಕಡಿಮೆ. ಹಾಗೂ ವೈದ್ಯರ ಪ್ರಕಾರ ಸ್ತನ್ಯಪಾನ ಮಾಡುವ ಮಹಿಳೆಯರು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಹೀಗೆ ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿಗೆ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ. ಈ ಎಲ್ಲದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ.

ಪ್ರಸವದ ನಂತರ ತಾಯಿಯಂದಿರು ಮಾನಸಿಕ ಆರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುವುದು ಸಾಮಾನ್ಯ. ಆದರೆ, ಸ್ತನ್ಯಪಾನವು ಪ್ರಸವಾನಂತರ ಎದುರಾಗುವ ಖಿನ್ನತೆಗಳನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸ್ತನ್ಯಪಾನದ ವೇಳೆ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗಿದ್ದು, ಇದು ಮಗುವಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ವೃದ್ಧಿಸುತ್ತದೆ.

ಮಣಿಪಾಲ್ ಆಸ್ಪತ್ರೆಯ ಹಾಲುಣಿಸುವ ತಜ್ಞ (ಅಂತರರಾಷ್ಟ್ರೀಯ ಬೋರ್ಡ್ ಸರ್ಟಿಫೈಡ್ ಲ್ಯಾಕ್ಟೇಶನ್ ಕನ್ಸಲ್ಟೆಂಟ್) ಡಾ ರವನೀತ್ ಜೋಶಿ ಅವರು ಮಾತನಾಡಿ, “ತಾಯಂದಿರು ಗರ್ಭಧಾರಣೆಯ ಮೊದಲು ಮತ್ತು ನಂತರದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ತನ್ಯಪಾನವು ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಗುವಿಗೆ ಹಾಲುಣಿಸುವಾಗ ಮಹಿಳೆಯರನ್ನು ಅದು ಶಾಂತಗೊಳಿಸುತ್ತದೆ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಕೆಲಸ ಮಾಡುವ ಮಹಿಳೆಯರಿಗೆ ಸ್ತನ್ಯಪಾನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸುವುದು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ನೀಡುತ್ತದೆ. ಜೊತೆಗೆ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಹೆರಿಗೆ ನಂತರ ನೀಡಲಾಗುವ ರಜೆಯ ಅವಧಿಯು ಮಹಿಳೆಮಗುವಿನೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅನುವು ಮಾಡಿಕೊಡುತ್ತದೆ, ಆದಾಗ್ಯೂ, ಕೆಲಸಕ್ಕೆ ಹಿಂದಿರುಗುವಾಗ ತಾಯಿಯು ಬೇರ್ಪಡುವಿಕೆಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರು ಕೆಲಸದ ಸಮಯದಲ್ಲೂ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಸ್ಥಳವನ್ನು ಒದಗಿಸಬೇಕು. ಅದು ಅವರಿಗೆ ತೃಪ್ತಿಕರ ಭಾವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿಯೋನಾಟಾಲಜಿಸ್ಟ್ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ ಉಷಾ ಬಿಕೆ ಮಾತನಾಡಿ, “ಮಹಿಳೆಯರು ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಲು ಮುಜುಗರ ಪಡುತ್ತಾರೆ. ಸಾಮಾಜಿಕ ಕಳಂಕ ಅಥವಾ ಗೌಪ್ಯತೆಯ ಕೊರತೆಯಿಂದಾಗಿ ಮಹಿಳೆಯರಿಗೆ ಸ್ತನ್ಯಪಾನ ಮಾಡಲು ಸಾಧ್ಯವಾಗುವುದಿಲ್ಲ, ಮಗುವಿಗೆ ಪ್ರತಿ 2-3 ಗಂಟೆಗಳಿಗೊಮ್ಮೆ ಹಾಲುಣಿಸುವಂತೆ ಮಾಡಲು ಅವರಿಗಾಗಿ ಪ್ರತ್ಯೇಕ ಸ್ಥಳವನ್ನು ನೀಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com