ಪ್ರಸವದ ನಂತರವೂ ಇರಲಿ ಕಾಳಜಿ: ಹೆರಿಗೆ ನಂತರ ಎದುರಾಗುವ ಚಳಿ ಅಥವಾ ನಡುಕ ನಿರ್ವಹಿಸುವುದು ಹೇಗೆ...?

ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯದ ಮೇಲೆ ಕಾಳಜಿ ತೋರಿ, ಪ್ರಸವದ ನಂತರ ನಾನು ಸುರಕ್ಷಿತ ಎಂದು ತಿಳಿಯದಿರಿ. ಪ್ರಸವದ ನಂತರವೂ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಪ್ರಸವದ ನಂತರವೂ ಇರಲಿ ಕಾಳಜಿ: ಹೆರಿಗೆ ನಂತರ ಎದುರಾಗುವ ಚಳಿ ಅಥವಾ ನಡುಕ ನಿರ್ವಹಿಸುವುದು ಹೇಗೆ...?

ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯದ ಮೇಲೆ ಕಾಳಜಿ ತೋರಿ, ಪ್ರಸವದ ನಂತರ ನಾನು ಸುರಕ್ಷಿತ ಎಂದು ತಿಳಿಯದಿರಿ. ಪ್ರಸವದ ನಂತರವೂ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮಹಿಳೆಯರಿಗೆ ಹೆರಿಗೆಯ ನಂತರ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗುವುದು ಸಹಜ. ಈ ಹಂತದಲ್ಲಿ ಆರೋಗ್ಯದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಕಂಡು ಬಂದರೂ ಕಾಳಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದರೆ, ಇದು ತಾಯಿಯಷ್ಟೇ ಅಲ್ಲ, ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿರುತ್ತೇವೆ.

ಎಲ್ಲಾ ಮಹಿಳೆಯರನ್ನೂ ಪ್ರಸವಾ ನಂತರದಲ್ಲಿ ಬಹಳಷ್ಟು ಕಾಳಜಿ ಮಾಡಬೇಕಾಗುತ್ತದೆ. ನವಜಾತ ಶಿಶುವಿನ ತಾಯಿಗೂ ಸಮರ್ಪಕವಾಗಿ ವೈದ್ಯಕೀಯ ಕಾಳಜಿಯೂ ಬೇಕಾಗುತ್ತದೆ. ನೀವು ಒಂದು ವೇಳೆ ಆರೋಗ್ಯಯುತವಾಗಿದ್ದರೂ ಕೂಡ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆ ಯನ್ನು ಕಾಲಕಾಲಕ್ಕೆ ಮಾಡಿಕೊಳ್ಳಲೇಬೇಕು.

ಈ ರೀತಿ ಕಾಲಕಾಲಕ್ಕೆ ತಪಾಸಣೆ ಮಾಡಿ ಕೊಳ್ಳುವುದರಿಂದ ನೀವು ಬೇಗನೇ ಗುಣಮುಖರಾಗುತ್ತೀರಿ. ಇದರಿಂದಾಗಿ ನಿಮಗೆ ಅಗತ್ಯ ಇದ್ದಾಗಲೆಲ್ಲಾ ನಿಮ್ಮ ತಪಾಸಕರು ನಿಮ್ಮ ಆರೋಗ್ಯವನ್ನು ಕಾಳಜಿ ಮಾಡಬಹುದು. ಪ್ರಸವಾ ನಂತರದಲ್ಲಿ ಆರೋಗ್ಯದ ಬಗೆಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಕೆಲವೊಮ್ಮೆ ಇದರಿಂದ ಜೀವ ಅಪಾಯ ಆಗುವ ಸಾಧ್ಯತೆಗಳೂ ಇರುತ್ತವೆ. ಇಷ್ಟೇ ಅಲ್ಲದೇ ಎಷ್ಟೋ ಬಾರಿ ಬಾಣಂತಿಯರು ಅನಾರೋಗ್ಯದಿಂದಾಗಿ ಮರಣವಪ್ಪಿದ ಉದಾಹರಣೆಗಳು ಇವೆ.

ಹೆರಿಗೆ ನಂತರ ವಿಪರೀತ ಚಳಿ ಅಥವಾ ನಡುಕ ಮಹಿಳೆಯರಲ್ಲಿ ಎದುರಾಗುತ್ತವೆ. ಇದಷ್ಟೇ ಅಲ್ಲ, ವಿಪರೀತ ಸೆಕೆ ಅಥವಾ ಬೆವರುವುದು, ಉಸಿರಾಟದಲ್ಲಿ ಏರಿಳಿತ, ವೇಗದ ಎದೆಬಡಿತ, ಗೊಂದಲ, ಜ್ವರ, ವಿಪರೀತ ನೋವು ಅಥವಾ ಅಸಹನೆ, ಇತರೆ ರೋಗಗಳ ಲಕ್ಷಣಗಳು ಕಂಡು ಬರುತ್ತವೆ.

ಅಲ್ಲದೇ ಕೆಲವೊಮ್ಮೆ ಪ್ರಸವ ನಂತರ ರಕ್ತಸ್ರಾವ ಜಾಸ್ತಿ ಯಾಗಬಹುದು. ತಿಂಗಳ ಮುಟ್ಟಿನ ಸಂದರ್ಭದಲ್ಲಿ ಆಗುವಂತಹ ರಕ್ತಸ್ರಾವಕ್ಕಿಂತಲೂ ಜಾಸ್ತಿ ಆಗಬಹುದು. ಇದನ್ನು ಪ್ರಸವ ನಂತರದ ಅಧಿಕ ರಕ್ತಸ್ರಾವ ಎನ್ನುತ್ತಾರೆ. ಅಂದರೆ ಹೆರಿಗೆಯ ನಂತರ ಉಂಟಾಗುವ ರಕ್ತಸ್ರಾವ. ಇದು ಕೆಲವೊಮ್ಮೆ ಗಂಭೀರವಾಗುವ ಸಾಧ್ಯತೆಯೂ ಇದೆ. ಆದರೆ ತುಂಬಾ ಅಪರೂಪಕ್ಕೆ ಕೆಲವರಿಗೆ ಹೆರಿಗೆಯ ನಂತರ ಸುಮಾರು ಹನ್ನೆರಡು ವಾರಗಳ ಕಾಲ ರಕ್ತಸ್ರಾವ ಇರುತ್ತದೆ.

ಹೆರಿಗೆ ನಂತರ ದೇಹದಲ್ಲಿ ನಡುಕ ಶುರುವಾಗಲು ಕಾರಣವೇನು?
ಪ್ರಸವದ ಸಮಯದಲ್ಲಿ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿರುತ್ತದೆ. ರಕ್ತ ನಷ್ಟವಾದ ಹಿನ್ನೆಲೆಯಲ್ಲಿ ದೇಹದ ಉಷ್ಣತೆಯೂ ಕಡಿಮೆಯಾಗಿರುತ್ತದೆ. ಇದರಿಂದ ನಡುಕದ ಸಂವೇದನೆ ಶುರುವಾಗುತ್ತದೆ.

ಪ್ರಸವದ ನಂತರ ಪ್ರತಿಯೊಬ್ಬ ಮಹಿಳೆಯರಲ್ಲೂ ಈ ರೀತಿ ಅನುಭವವಾಗುತ್ತದೆ. ರಕ್ತಹೀನತೆ ಇರುವ ಮಹಿಳೆಯರಲ್ಲಿ ಪ್ರಸವದ ನಂತರ ಈ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತದೆ. ಈ ನಡುಕ ಹೆರಿಗೆಯ ನಂತರ ಸುಮಾರು 2-3 ಗಂಟೆಗಳ ಕಾಲ ಇರುತ್ತದೆ. ಇಷ್ಟು ಸಮಯಗಳು ಕಳೆದರೂ ನಡುಕ ಅತೀವ್ರವಾಗಿದ್ದರೆ, ಮೂಳೆಗಳಲ್ಲಿ ನೋವು, ಜ್ವರ ಕಂಡು ಬಂದಿದ್ದೇ ಆದರೆ, ದೇಹಕ್ಕೆ ಸೋಂಕು ತಗುಲಿರುವ ಸಾಧ್ಯತೆಗಳಿರುತ್ತವೆ. ಈ ಸಂದರ್ಭದಲ್ಲಿ ವೈದ್ಯರಿಂದ ಚಿಕಿತ್ಸೆ ಅಗತ್ಯವಿರುತ್ತದೆ.

ಚಳಿ ನಿರ್ವಹಿಸುವುದು ಹೇಗೆ?
ಈ ಸಂದರ್ಭದಲ್ಲಿ ದೇಹವನ್ನು ಬೆಚ್ಚಗಿಡುವ ಮೂಲಕ ಪ್ರಸವದ ನಂತರ ಎದುರಾಗುವ ನಡುಕವನ್ನು ನಿಭಾಯಿಸಬಹುದು. ಬಿಸಿ ಕಾಫಿ ಅಥವಾ ಬಿಸಿಯಾದ ದ್ರವ ಪದಾರ್ಥಗಳನ್ನು ಸೇವನೆ ಮಾಡಲು ನೀಡುವುದು, ಕೊಠಡಿಯು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಅತೀವ್ರ ಚಳಿ ನಿಭಾಯಿಸಲು ಸುರಕ್ಷಿತ ಔಷಧಿಗಳಿದ್ದು, ವೈದ್ಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com