ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಏಕೆಂದರೆ, ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ.
ಮನುಷ್ಯನಿಗೆ ಸರಾಸರಿ ಎಂದರೂ 7-8 ಗಂಟೆಗಳ ನಿದ್ರೆ ಬೇಕೇಬೇಕು. ಸಾಮಾನ್ಯ ಮಕ್ಕಳು ಹೆಚ್ಚು ನಿದ್ರೆ ಮಾಡುತ್ತಾರೆ. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಶಿಶುವಿನ ಆರೋಗ್ಯವು ಅದು ನಿದ್ರಿಸುವ ಅವಧಿಯಿಂದ ನಿರ್ಧಾರವಾಗುತ್ತದೆ ಎಂದೂ ಕೂಡ ಹೇಳಲಾಗುತ್ತದೆ.
ಸಣ್ಣ ಮಕ್ಕಳು ಯಾವ ಹಂತದಲ್ಲಿ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ?
ಸಾಮಾನ್ಯವಾಗಿ ನವಜಾತ ಶಿಶುಗಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದು ಕಡಿಮೆಯಾಗಿರುತ್ತದೆ. ಇದರಿಂದ ಪೋಷಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಮಕ್ಕಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡದಿರಲು ಕೆಲವು ಕಾರಣಗಳಿವೆ. ಅವುಗಳನ್ನು ಸರಿಪಡಿಸಿದರೆ ಮಕ್ಕಳು ಸುಖವಾಗಿ ನಿದ್ರೆ ಮಾಡುತ್ತಾರೆ.
ಹಸಿವು
ಎದೆಹಾಲು ಬೇಡಿಕೆಯ ಮೇರೆಗೆ ಅಥವಾ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಆಹಾರವನ್ನು ನೀಡದಿದ್ದರೆ, ಮಗುವಿಗೆ ರಾತ್ರಿಯಲ್ಲಿ ಹಸಿವು ಉಂಟಾಗುತ್ತದೆ.
ಬದಲಾದ ಮಲಗುವ ಸಮಯ
ಮಗುವಿಗೆ ನಿದ್ರೆಯ ದಿನಚರಿಯಲ್ಲಿ ಆಗುವ ಬದಲಾವಣೆಗಳು ಅವುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಇದರಿಂದ ಮಗುವಿಗೆ ಉತ್ತಮ ನಿದ್ರೆಯನ್ನು ಆನಂದಿಸಲು ಕಷ್ಟವಾಗುತ್ತದೆ.
ಹೆಚ್ಚಿದ ಒತ್ತಡ
ಮಕ್ಕಳು ತುಂಬಾ ದಣಿದಿರುವಾಗ ಉತ್ತಮವಾಗಿ ನಿದ್ರಿಸುವುದಿಲ್ಲ. ಅತಿಯಾದ ಆಯಾಸಗೊಂಡಾಗ ಕಡಿಮೆ ನಿದ್ರೆ ಮಾಡುತ್ತಾರೆ ಹಾಗೂ ಆಗಾಗ ಎಚ್ಚರಗೊಳ್ಳುತ್ತಿರುತ್ತಾರೆ.
ಅನಾರೋಗ್ಯ
ಹೊಟ್ಟೆ ನೋವು, ಗ್ಯಾಸ್, ಆ್ಯಸಿಡ್ ರಿಫ್ಲಕ್ಸ್, ನೆಗಡಿ ಮತ್ತು ಕೆಮ್ಮು, ಹಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ನಿದ್ರೆಯ ಸಮಸ್ಯೆಗಳು ಉಂಟಾಗುತ್ತವೆ.
ಪೋಷಕರು ಹತ್ತಿರವಿರುವಂತೆ ಬಯಸುತ್ತಾರೆ
ಮಗು ಎಚ್ಚರವಾದಾಗ ಪೋಷಕರನ್ನು ಹುಡುಕುತ್ತದೆ. ಸಿಗದೇ ಇದ್ದಾಗ ಭಯಪಡುತ್ತದೆ.
ಅಹಿತಕರ ಪರಿಸರ
ಶಿಶುಗಳು ಮಲಗಿದ ಸ್ಥಳಕ್ಕಿಂತ ವಿಭಿನ್ನ ವಾತಾವರಣದಲ್ಲಿ ಎಚ್ಚರಗೊಂಡರೆ, ಗೊಂದಲಕ್ಕೊಳಗಾಗುತ್ತಾರೆ ಮತ್ತು ಭಯಭೀತರಾಗುತ್ತಾರೆ.
ಹಗಲಿನಲ್ಲಿ ನಿದ್ರೆ ಮಾಡದಿರುವುದು
ನಿಮ್ಮ ಮಗು ಹಗಲಿನಲ್ಲಿ ನಿದ್ರೆಯಿಲ್ಲದೆ, ಹೆಚ್ಚು ದಣಿದಿದ್ದರೆ, ಮುಂಗೋಪಿಯಾಗುತ್ತದೆ. ನಂತರ ರಾತ್ರಿ ಸಮಯದಲ್ಲಿ ನಿದ್ರೆ ಮಾಡದೆ ಸಮಸ್ಯೆ ಎದುರಿಸುತ್ತದೆ.
ಹೊಸ ಕೌಶಲ್ಯಗಳು
ತೆವಳುವ, ಒದೆಯುವ, ಉರುಳುವ, ಕುಳಿತುಕೊಳ್ಳುವ ಅಥವಾ ನಿಂತಿರುವ ಕಲೆಯನ್ನು ಕರಗತ ಮಾಡಿಕೊಂಡಿದ್ದರೆ ರಾತ್ರಿಯಲ್ಲೂ ಅದನ್ನು ಮಾಡಲು ಪ್ರಯತ್ನಿಸುತ್ತದೆ.
Advertisement