ಮಹಿಳೆಯರೇ ಎಚ್ಚರ! ಒತ್ತಡ ನಿಮ್ಮ ಮೈಗ್ರೇನ್'ನ್ನು ಮತ್ತಷ್ಟು ಹದಗೆಡಿಸುತ್ತದೆ!

ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ.

ಮೈಗ್ರೇನ್ ತಲೆ ನೋವಿಗೆ ಅನೇಕ ಕಾರಣಗಳಿರುತ್ತದೆ. ಒತ್ತಡ, ವಾತಾವರಣದಲ್ಲಿನ ಬದಲಾವಣೆ, ಆತಂಕ, ಆಘಾತ, ಉದ್ವೇಗ, ನಿದ್ರೆಯ ಕೊರತೆಯಿಂದ ಮೈಗ್ರೇನ್ ಕಾಡುತ್ತದೆ. ಇದಷ್ಟೇ ಅಲ್ಲದೆ, ಹಾರ್ಮೋನುಗಳ ಬದಲಾವಣೆ ಕೂಡ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಹೀಗಾಗಿಯೇ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಸಮಸ್ಯೆ ಹೆಚ್ಚಾದ್ರೂ ಮಹಿಳೆಯರು ಮೈಗ್ರೇನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯುತ್ತಿಲ್ಲ. ಅನೇಕ ಮಹಿಳೆಯರು ಮೈಗ್ರೇನ್ ಸಮಸ್ಯೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.

ಮೈಗ್ರೇನ್ ಬಂದಾಗ ವ್ಯಕ್ತಿಯು ವಾಕರಿಕೆ, ವಾಂತಿ, ತಲೆ ತಿರುಗುವಿಕೆ, ಬೆಳಕು ಕಣ್ಣಿಗೆ ಬಿದ್ದಾಗ ಮತ್ತು ದೊಡ್ಡ ಶಬ್ದ ಕೇಳಿದಾಗ ತಡೆದುಕೊಳ್ಳಲು ಸಾಧ್ಯವಾಗದ ಅಂದರೆ ಅಸಮರ್ಥತೆಯ ಸಮಸ್ಯೆ ಅನುಭವಿಸುತ್ತಾನೆ.

ಮೈಗ್ರೇನ್ ಸಮಸ್ಯೆ ಹೊಂದಿರುವ ಜನರು, ತಿಂಗಳಲ್ಲಿ ಹಲವು ಬಾರಿ ಮೈಗ್ರೇನ್ ನೋವು ಅನುಭವಿಸುತ್ತಾರೆ. ಮೈಗ್ರೇನ್‌ ಕೆಲವರಿಗೆ ದೀರ್ಘ ಕಾಲದವರೆಗೆ ಬಾಧಿಸಿದ ಪ್ರಕರಣಗಳೂ ಕೂಡ ಇವೆ. ಇದರಲ್ಲಿ ವ್ಯಕ್ತಿಯು ತಿಂಗಳ 15 ದಿನಗಳಿಗಿಂತ ಹೆಚ್ಚು ಕಾಲ ತಲೆನೋವು ಅನುಭವಿಸುತ್ತಾನೆ.

ಇದನ್ನೂ ಓದಿ: ಮಹಿಳೆಯರಲ್ಲಿ ಪೌಷ್ಟಿಕತೆ: ಕುಟುಂಬಕ್ಕೆ ಆಧಾರಸ್ತಂಭವಾದ ಮಹಿಳೆಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಗೊತ್ತಾ?
 
ಒತ್ತಡ ಮತ್ತು ಮೈಗ್ರೇನ್

ಮೈಗ್ರೇನ್'ಗೆ ಒತ್ತಡ ಕೂಡ ಪ್ರಮುಖ ಕಾರಣವಾಗಿದೆ. ಮಾನಸಿಕ ಒತ್ತಡ, ಋತುಚಕ್ರಗಳು, ಉಪವಾಸ, ನಿದ್ರೆಯ ಕೊರತೆ, ಆತಂಕ, ಭಯ, ಕೋಪ, ಖಿನ್ನತೆ, ಆಲ್ಕೊಹಾಲ್ಯುಕ್ತ ಪಾನೀಯಗಳ ಸೇವನೆ, ಚಾಕೊಲೇಟ್, ಚೀಸ್ ನಂತಹ ಆಹಾರಗಳು ಮಹಿಳೆಯರಲ್ಲಿ ಮೈಗ್ರೇನ್ ಅನ್ನು ಉಲ್ಬಣಗೊಳಿಸುತ್ತವೆ.

ಒತ್ತಡವನ್ನು ನಿರ್ವಹಿಸುವುದು ಹೇಗೆ...? ಮೈಗ್ರೇನ್ ಅನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಧೂಮಪಾನ ತ್ಯಜಿಸುವುದು, ಮದ್ಯಪಾನ ತ್ಯಜಿಸುವುದು, ಅತಿಯಾದ ಕೆಫೀನ್ ಸೇವನೆ ಕಡಿಮೆ ಮಾಡುವುದು ಮತ್ತು ಮೈಗ್ರೇನ್‌ನಿಂದ ಬಳಲುತ್ತಿರುವ ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ತಪ್ಪಿಸುವುದು ಮೈಗ್ರೇನ್ ಸಮಸ್ಯೆ ತಪ್ಪಿಸಲು ಸಹಕಾರಿಯಾಗಿದೆ. ಆಳವಾದ ಉಸಿರಾಟ ಮತ್ತು ಯೋಗ, ವಿಶ್ರಾಂತಿ ಪಡೆದುಕೊಳ್ಳುವುದರಿಂದ ಮೈಗ್ರೇನ್ ನಿಂದ ದೂರ ಉಳಿಯಬಹುದು.

ನಿದ್ರೆ
ಸರಿಯಾದ ನಿದ್ರೆ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿರಿಕಿರಿ ಹಾಗೂ ಉದ್ವೇಗಕ್ಕೊಳಗಾಗುವುದನ್ನು ಕಡಿಮೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಲು ಸಂಗೀತವನ್ನು ಕೇಳಬೇಕು. ಇದರಿಂದ ಹೃದಯ ಬಡಿತವನ್ನು ನಿಧಾನವಾಗುವಂತೆ ಮಾಡಲು ಇದು ಸಹಕಾರಿಯಾಗುತ್ತದೆ. ರಕ್ತದೊತ್ತಡ ಕೂಡ ಇದರಿಂದ ಕಡಿಮೆಯಾಗುತ್ತದೆ. ಅಲ್ಲದೆ, ಹಾರ್ಮೋನುಗಳ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ.

ವ್ಯಾಯಾಮ
ವ್ಯಾಯಾಮವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ದೇಹದ ಒತ್ತಡದ ಹಾರ್ಮೋನ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನಲ್ಲಿ ಎಂಡಾರ್ಫಿನ್‌ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ನೈಸರ್ಗಿಕ ನೋವು ನಿವಾರಕಗಳು ಮತ್ತು ಮೂಡ್ ಎಲಿವೇಟರ್‌ಗಳಾಗಿ ಕಾರ್ಯನಿರ್ವಹಿಸುತ್ತದೆ.

ಆರೋಗ್ಯಕರ ಆಹಾರ ಕ್ರಮ
ವಿಟಮಿನ್ ಕೆ ನಂತಹ ಅಗತ್ಯ ಜೀವಸತ್ವಗಳನ್ನು ಒದಗಿಸುವ ಸೊಪ್ಪು, ತರಕಾರಿಗಳನ್ನು ಸೇರಿಸುವ ಮೂಲಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು, ನಿಮ್ಮ ಅಪಧಮನಿಗಳನ್ನು ರಕ್ಷಿಸಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಸಮತೋಲಿತ ಆಹಾರವು ಆಹಾರದ ನೈಟ್ರೇಟ್‌ಗಳನ್ನು ಹೊಂದಿದ್ದು ಅದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಪಧಮನಿಯ ಬಿಗಿತವನ್ನೂ ಇದು ಕಡಿಮೆ ಮಾಡುತ್ತದೆ. ಜೀವಕೋಶಗಳ ಕಾರ್ಯವನ್ನು ಇದು ಸುಧಾರಿಸುತ್ತದೆ.

ಧ್ಯಾನ
ಇದು ಒತ್ತಡವನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ ವಿಧಾನವಾಗಿದೆ. ಉತ್ತಮ ನಿದ್ರೆಗೆ ಧ್ಯಾನ ಅತ್ಯಗತ್ಯ. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳ ಲಕ್ಷಣಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ.

ಈ ಪರಿಣಾಮಕಾರಿ ಹಂತಗಳೊಂದಿಗೆ, ಮಹಿಳೆಯರು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಮತ್ತು ಒಟ್ಟಾರೆ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ದೂರಾಗಿಸಿಕೊಂಡು ಮೈಗ್ರೇನ್ ವಿರುದ್ಧ ಹೋರಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com