ಒತ್ತಡದ ಜೀವನ ನಿಮ್ಮ ಹಲ್ಲುಗಳ ಮೇಲೆ ಪರಿಣಾಮ ಬೀರಬಹುದು; ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಮನುಷ್ಯನ ಬಾಯಿಯ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ದೇಹ ಆರೋಗ್ಯದಿಂದ ಇರಬೇಕಾದರೆ ನಮ್ಮ ಬಾಯಿಯ ಸ್ವಾಸ್ಥ್ಯ ಚೆನ್ನಾಗಿರಬೇಕು. ಆದರೆ, ಬಹಳಷ್ಟು ಜನರು ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮನುಷ್ಯನ ಬಾಯಿಯ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ದೇಹ ಆರೋಗ್ಯದಿಂದ ಇರಬೇಕಾದರೆ ನಮ್ಮ ಬಾಯಿಯ ಸ್ವಾಸ್ಥ್ಯ ಚೆನ್ನಾಗಿರಬೇಕು. ಆದರೆ, ಬಹಳಷ್ಟು ಜನರು ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ನಿನ್ನೆಯಷ್ಟೇ (ಮಾರ್ಚ್ 20) ವಿಶ್ವ ಬಾಯಿ ಆರೋಗ್ಯ ದಿನವನ್ನು ಆಚರಿಸಲಾಯಿತು. ಈ ವರ್ಷದ ಘೋಷವಾಕ್ಯವು 'A happy mouth is a happy body' ಆಗಿತ್ತು. ಬಾಯಿ ಆರೋಗ್ಯವಾಗಿದ್ದರೆ, ದೇಹವೂ ಆರೋಗ್ಯವಾಗಿರುತ್ತದೆ ಎಂಬುದು ಇದರ ಅರ್ಥ.

ಬಾಯಿ ಪರೀಕ್ಷೆ ಮಾಡಿದಾಗ ವ್ಯವಸ್ಥಿತವಾಗಿ ದೇಹದಲ್ಲಿ ಅಡಗಿರುವ ಅದೆಷ್ಟೋ ಗುಟ್ಟುಗಳನ್ನು ತಿಳಿದುಕೊಳ್ಳಬಹುದು. ಅಂದರೆ ದೇಹದ ಇನ್ನಿತರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಿದೆ. ಕಣ್ಣುಗಳು ಮನಸ್ಸಿನ ಭಾವನೆ ತಿಳಿಸುವ ಕನ್ನಡಿಯಾದರೆ, ಬಾಯಿ ದೇಹದ ಆರೋಗ್ಯ ತಿಳಿಸುವ ಕಿಂಡಿ. ಏಕೆಂದರೆ ದೇಹವೆಂಬ ಕೋಟೆಯ ಮುಖ್ಯದ್ವಾರವಾಗಿದೆ.

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಗಳಿಂದಾಗಿ ಜನರು ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಒತ್ತಡವು ನಮ್ಮ ದೇಹದ ಪ್ರತಿಯೊಂದು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನಮ್ಮ ಹಲ್ಲುಗಳ ಮೇಲೂ ಕೂಡ ಪರಿಣಾಮ ಬಿರುತ್ತದೆ. ಒತ್ತಡದಿಂದ ಹಲ್ಲುಗಳ ಮೇಲಾಗುವ ಪರಿಣಾಮಗಳು ಈ ಕೆಳಕಂಡಂತಿದೆ...

ಸಂಗ್ರಹ ಚಿತ್ರ
Grapes Cleaning: ಅತಿಹೆಚ್ಚು ಕೀಟನಾಶಕ ಸಿಂಪಡಿಸುವ ದ್ರಾಕ್ಷಿ ಹಣ್ಣಿನ ಸ್ವಚ್ಛತೆಗೆ ಮನೆಯಲ್ಲೇ ಇದೆ ಉಪಾಯ!

ಹಲ್ಲು ಮಸೆಯುವುದು: ಇದು ಸಾಮಾನ್ಯವಾಗಿ ನಿದ್ರಾಹೀನತೆ ಹೊಂದಿರುವ ಜನರಲ್ಲಿ ಕಂಡುಬರುತ್ತದೆ, ಹಲ್ಲುಗಳನ್ನು ಮಸೆಯುವುದರಿಂದ ಹಲ್ಲುಗಳ ಸಂವೇದನೆ ಮತ್ತು ಸವೆತದಂತಹ ಸಮಸ್ಯೆಗಳು ಎದುರಾಗುತ್ತದೆ. ದೀರ್ಘಾವಧಿಯಲ್ಲಿ ದವಡೆಗಳಲ್ಲಿಯೂ ಸಮಸ್ಯೆಗಳನ್ನು ಉಂಟುಮಾಡಬಹುದು.

ಹುಣ್ಣು: ಒತ್ತಡಗಳಿಂದ ಬಾಯಿಯಲ್ಲಿ ಹುಣ್ಣುಗಳು ಕಂಡು ಬರುತ್ತವೆ. ಬಾಯಿಯ ಹುಣ್ಣುಗಳು ಒಸಡುಗಳ ಕೆಳಭಾಗದಲ್ಲಿ ಮತ್ತು ಬಾಯಿಯ ಇತರ ಸ್ಥಳಗಳಲ್ಲಿ ಕಂಡುಬರುವ ಸಣ್ಣ ಸಣ್ಣ ಗಾಯಗಳಾಗಿವೆ. ಬಾಯಿ ಹುಣ್ಣು ಸಾಮಾನ್ಯವಾಗಿ ಕೆಂಪು ಅಂಚಿನೊಂದಿಗೆ ಬಿಳಿಯ ಬಣ್ಣದ್ದಾಗಿರುತ್ತದೆ. ಈ ಗಾಯಗಳು ತುಂಬಾ ನೋವಿನಿಂದ ಕೂಡಿದ್ದು, ಸಾಮಾನ್ಯವಾಗಿ 10-14 ದಿನಗಳವರೆಗೆ ಸಮಸ್ಯೆ ಇರುತ್ತದೆ.

ಬಾಯಿ ಒಣಗುವುದು: ಒತ್ತಡದ ಸಮಯದಲ್ಲಿ ಲಾಲಾರಸದ ಉತ್ಪಾದನೆಯು ಕಡಿಮೆಯಾಗುವುದರಿಂದ ಬಾಯಿ ಒಣಗುತ್ತದೆ. ಮಧುಮೇಹ ಹಾಗ ಋತುಸ್ತಬ್ಧ ಮಹಿಳೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬಾಯಿಯಲ್ಲಿ ಲಾಲಾರಸ ಕಡಿಮೆಯಾದವರಲ್ಲಿ ಉಸಿರಾಟದಲ್ಲಿ ಕೆಟ್ಟ ವಾಸನೆ ಹಾಗೂ ಹಲ್ಲುಗಳು ಹಾಳಾಗುವ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ.

ದವಡೆ ನೋವು: ಒತ್ತಡವು ದವಡೆಗಳಲ್ಲಿ ಕಿರಿಕಿರಿ ಹಾಗೂ ನೋವುಗಳನ್ನುಂಟು ಮಾಡುತ್ತದೆ. ಇದರಿಂದ ಹಲ್ಲುಗಳಿಗೂ ಸಮಸ್ಯೆಯಾಗುತ್ತದೆ. ಇತ್ತೀಚಿನ ಕೆಲ ಅಧ್ಯಯನಗಳು ಭುಜ ಮತ್ತು ಕುತ್ತಿಗೆ ನೋವು ದವಡೆಯ ಸಮಸ್ಯೆಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಿದೆ.

ಊದಿಕೊಂಡ ಒಸಡು: ಒತ್ತಡವು ಸಾಮಾನ್ಯವಾಗಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಉತ್ತರ ಕೆರೊಲಿನಾ ಮತ್ತು ಮಿಚಿಗನ್ ವಿಶ್ವವಿದ್ಯಾನಿಲಯದ ವಿವಿಧ ಅಧ್ಯಯನಗಳು ಒತ್ತಡವು ಒಸಡಿನ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಿದೆ.

ಸಂಗ್ರಹ ಚಿತ್ರ
ಪ್ಯಾಶನ್ ಫ್ರೂಟ್: ಏನಿದು ಹೊಸ ಬಗೆಯ ಹಣ್ಣು? ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು?

ಬಾಯಿಯ ಆರೋಗ್ಯ ಕಾಪಾಡುವುದು ಹೇಗೆ?

  • ದಿನಕ್ಕೆರಡು ಬಾರಿ ಬ್ರಶ್ ಮಾಡಿ.

  • ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸುವುದು

  • ಸಮತೋಲನ ಆಹಾರ ಮತ್ತು ನೀರು ಸೇವನೆ

  • ಕುರುಕಲು, ಸಂಸ್ಕರಿತ, ಸೋಡಾಯುಕ್ತ ಆಹಾರ ದೂರವಿರಿ

  • ಮಾನಸಿಕ ಒತ್ತಡ ನಿವಾರಣೆಗೆ ಉತ್ತಮ ಹವ್ಯಾಸಗಳು

  • ನಿಯಮಿತವಾಗಿ ಆರು ತಿಂಗಳಿಗೊಮ್ಮೆ ದಂತವೈದ್ಯರ ಭೇಟಿ

  • ಸೂರ್ಯನ ಬೆಳಕಿನಲ್ಲಿ ಸಾಕಷ್ಟು ವ್ಯಾಯಾಮವನ್ನು ಮಾಡಿ.

  • ದಿನಕ್ಕೆ ಕನಿಷ್ಠ 6-8 ಗಂಟೆಗಳ ಕಾಲ ನಿದ್ರೆ ಮಾಡಿ.

  • ದಿನಕ್ಕೆ ಕನಿಷ್ಠ 10-12 ಗ್ಲಾಸ್ ನೀರು ಕುಡಿಯಿರಿ.

  • ಹಲ್ಲಿನ ಸಮಸ್ಯೆಗಳನ್ನು ದಂತವೈದ್ಯರೊಂದಿಗೆ ಹಂಚಿಕೊಳ್ಳಿ ಮತ್ತು ಅನಗತ್ಯ ಸ್ವಯಂ-ಔಷಧಿಗಳನ್ನು ತಪ್ಪಿಸಿ.

  • ವಿಟಮಿನ್ ಭರಿತ ಆಹಾರವನ್ನು ಸೇವಿಸಿ.

  • ಹುಣ್ಣುಗಳಾದರೆ ದಂಡ ವೈದ್ಯರ ಸಲಹೆಯಂತೆ ನಂಜುನಿರೋಧಕ ಜೆಲ್ಗಳನ್ನು ಬಳಸಿ.

  • ಅನಗತ್ಯವಾಗಿ ಹಲ್ಲುಗಳನ್ನು ಮುಟ್ಟುವುದನ್ನು ತಪ್ಪಿಸಿ,

  • ಉಗುರು ಕಚ್ಚುವುದು, ಟೂತ್‌ಪಿಕ್‌, ಸೇಫ್ಟಿ ಪಿನ್‌ ಇತ್ಯಾದಿಗಳಿಂದ ಹಲ್ಲುಗಳಿಗೆ ಚುಚ್ಚುವುದನ್ನು ತಪ್ಪಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com