ಹೆಣ್ಣು ಸೊಳ್ಳೆಯಿಂದ ಹರಡುವ ಮಲೇರಿಯಾ ಬಗ್ಗೆ ಎಷ್ಟು ಗೊತ್ತು?

ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ದೇಶದಲ್ಲಿ ಸಾಕಷ್ಟು ಸುಧಾರಣೆಗಳ ಹೊರತಾಗಿಯೂ ಮಲೇರಿಯಾ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಮಲೇರಿಯಾ ಕೇವಲ ನಮ್ಮ ಭಾರತ ದೇಶದ ಸಮಸ್ಯೆಯಷ್ಟೇ ಅಲ್ಲ. ಇದು ಇಡೀ ವಿಶ್ವದಾದ್ಯಂತ ಅತ್ಯಂತ ಮಾರಕ ಕಾಯಿಲೆ ಎಂಬ ಕುಖ್ಯಾತಿ ಪಡೆದಿದೆ. ವಿಶೇಷವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಇದು ಜನರಲ್ಲಿ ನಡುಕ ಹುಟ್ಟಿಸಿದೆ. ಆಶ್ಚರ್ಯ ಎಂದರೆ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್ ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹತ್ತಿಸುತ್ತದೆ...

ಒಂದು ಸಲ ಈ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುವುದು ಮತ್ತು ಕೆಂಪು ರಕ್ತದ ಕಣಗಳನ್ನು ನಾಶ ಪಡಿಸುವುದು. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.

ಮಲೇರಿಯಾ ಜ್ವರ ಹೆಚ್ಚಾದಂತೆ ವ್ಯಕ್ತಿಗೆ ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮಲೇರಿಯಾ ಲಕ್ಷಣಗಳೇನು?

ಜ್ವರ ಹಾಗೂ ಚಳಿ, ಬೆವರುವುದು, ತಲೆನೋವು, ವಾಕರಿಕೆ ಹಾಗೂ ವಾಂತಿ, ಮೈಕೈ ನೋವು, ನಿಶಕ್ತಿ, ಸಣ್ಣ ಪ್ರಮಾಣದ ಜಾಂಡಿಸ್‌, ಉಸಿರಾಟದ ಏರುಪೇರು.

ಗಂಭೀರ ಸ್ವರೂಪದ ಮಲೇರಿಯಾದಲ್ಲಿ ಅತಿಯಾದ ರಕ್ತಹೀನತೆ, ಮೂತ್ರ ವಿಸರ್ಜನೆಯ ವೇಳೆ ರಕ್ತ ಹೋಗುವುದು, ರಕ್ತ ಹೆಪ್ಪುಗಟ್ಟುವಿಕೆಯ ಬದಲಾವಣೆಗಳು, ಪ್ರಜ್ಞೆ ಇಲ್ಲದಂತಿರುವುದು, ಅತಿಯಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು, ಕೋಮಾ. ಇದು ಮಲೇರಿಯಾದ ಗಂಭೀರ ಸಮಸ್ಯೆಗಳಾಗಿದ್ದು, ಇದರಿಂದ ಇನ್ನಷ್ಟು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಹಾಗಾಗಿ ಜ್ವರ, ಮೈಕೈ ನೋವು ಕಾಣಿಸಿದ ತಕ್ಷಣ ವೈದ್ಯರ ಬಳಿ ತೋರಿಸುವುದು ಉತ್ತಮ.

ಮಲೇರಿಯಾದ ಅಪಾಯಗಳು

ಮಲೇರಿಯಾದಿಂದ ದೇಹದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅಂತಹ ಕೆಲವು ಸಮಸ್ಯೆಗಳು ಹೀಗಿವೆ.

  • ಯಕೃತ್ತಿನ ವೈಫಲ್ಯ

  • ಮೂತ್ರಪಿಂಡ ವೈಫಲ್ಯ

  • ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಕಡಿಮೆಯಾಗುವುದು

  • ತೀವ್ರವಾದ ಉಸಿರಾಟ ಸಮಸ್ಯೆ

  • ನಿರ್ಜಲೀಕರಣ

ಸಂಗ್ರಹ ಚಿತ್ರ
ಕಾಲರಾ: ಈ ಕಾಯಿಲೆ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಏನು? (ಕುಶಲವೇ ಕ್ಷೇಮವೇ)

ಚಿಕಿತ್ಸೆ ಹೀಗಿದೆ...

ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹಲವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ.

ರಕ್ತಪ್ರವಾಹದಿಂದ ಪರಾವಲಂಬಿಯನ್ನು ತೊಡೆದುಹಾಕಲು ಔಷಧಿ, ಆರೈಕೆ, ತೀವ್ರ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಸ್ಪತ್ರೆಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಬೇಕಾಗಬಹುದು.

ಯಾರ ಮೇಲೆ ಹೆಚ್ಚು ಪರಿಣಾಮ?

ಮಲೇರಿಯಾ ರೋಗಕ್ಕೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ಹಾಗೂ ಸ್ಥಳಾಂತರಗೊಳ್ಳುವ, ವಿಶೇಷವಾಗಿ ಪರ್ವತ, ಅರಣ್ಯ ಅಥವಾ ಬುಡಕಟ್ಟು ಜನರು ಒಳಗಾಗುವುದು ಹೆಚ್ಚು.

ಇದರಲ್ಲದೆ ನದಿ, ಕೆರೆ ಹಾಗೂ ಹೆಚ್ಚು ನೀರಿರುವ ಪ್ರದೇಶದಲ್ಲಿ ವಾಸವಿರುವ, ಗ್ರಾಮೀಣ ಪ್ರದೇಶಗಳಲ್ಲಿ, ಕೊಚ್ಚೆ ಗುಂಡಿಗಳು, ಕೊಳಗಳು ಅಥವಾ ಕಳಪೆ-ನಿರ್ವಹಣೆಯ ಒಳಚರಂಡಿ ವ್ಯವಸ್ಥೆಗಳ ಬಳಿಯಿರುವ ಜನರು ಕೂಡ ಈ ಜ್ವರದಿಂದ ಬಳಲುವುದು ಹೆಚ್ಚು.

ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರು: ಎಚ್ಐವಿ/ಏಡ್ಸ್, ದೀರ್ಘಕಾಲದ ಕಾಯಿಲೆಗಳು, ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಮಕ್ಕಳು ತೀವ್ರವಾದ ಮಲೇರಿಯಾಕ್ಕೆ ಗುರಿಯಾಗುತ್ತಾರೆ.

ಸಂಗ್ರಹ ಚಿತ್ರ
ಮಲೇರಿಯಾ ಜ್ವರ ಎಂದು ಗೊತ್ತಾಗದಿದ್ದರೆ ಆಗುವ ಅಪಾಯಗಳೇನು? ವೈದ್ಯರು ಹೇಳುವುದೇನು?

ತಡೆಗಟ್ಟುವುದು ಹೇಗೆ?

ಕೀಟ ನಿವಾರಕಗಳ ಬಳಸಿ: ಚರ್ಮ ಹಾಗೂ ಬಟ್ಟೆಗಳಿಗೆ ಕೀಟ ನಿವಾರಕಗಳ ಹಾಕುವಾಕ ಪ್ಯಾಕೇಜ್ ಮೇಲೆ ಇರುವ ನಿರ್ದೇಶನಗಳನ್ನು ಎಚ್ಚರಿಕೆಯಿಂದ ಪಾಲಿಸಿ. ಸಂಜೆ ಹಾಗೂ ಹೊರಾಂಗಣ ಚಟುವಟಿಕೆಗಳಲ್ಲಿ ಸೊಳ್ಳೆಗಳ ಕಡಿತ ಹೆಚ್ಚಾಗಲಿದ್ದು, ಈ ವೇಳೆ ಎಚ್ಚರಿಕೆಯಿಂದಿರಿ.

ಸೊಳ್ಳೆಗಳ ಸಂತಾನೋತ್ಪತ್ತ ತಡೆ ಅಗತ್ಯಗತ್ಯ: ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಿ, ಒಳಚರಂಡಿ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಮನೆಗಳ ಸಮೀಪವಿರುವ ಅನಗತ್ಯ ಸಸ್ಯಗಳನ್ನು ತೆಗೆಯಿರಿ. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಬಹುದು.

ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆ ಮುಖ್ಯ: ನೀವು ಮೇಲಿನ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ತುರ್ತು ವೈದ್ಯಕೀಯ ಸಹಾಯವನ್ನು ಪಡೆಯಿರಿ. ಮಲೇರಿಯಾದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಆಂಟಿಮಲೇರಿಯಾ ಮಾತ್ರೆಗಳನ್ನು ತೆಗೆದುಕೊಳ್ಳಿ. ಸರಿಯಾದ ಹಾಗೂ ಸರ್ಮಪಕ ಕ್ರಮದಲ್ಲಿ ಔಷಧಿಗಳನ್ನು ಸೇವಿಸಿ. ಮಲೇರಿಯಾ ಹೆಚ್ಚಿರುವ ಪ್ರದೇಶಗಳ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com