ಚಿತ್ರವನ್ನು ಪ್ರಾತಿನಿಧಿಕ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ.
Image used for representational purpose only.

ಬದಲಾದ ವಾತಾವರಣ: ಆರೋಗ್ಯ ರಕ್ಷಣೆಗೆ ಇಲ್ಲಿವೆ ಕೆಲವು ಸಲಹೆ...

ಮಳೆಗಾಲದಲ್ಲಿ ಸಾಮಾನ್ಯವಾಗಿ ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸ್ಥಳವಾಗುತ್ತದೆ. ಇದು ಚಿಕೂನ್‌ಗುನ್ಯಾ ಮತ್ತು ಲೆಪ್ಟೊಸ್ಪೈರೋಸಿಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆ.
Published on

ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಚಳಿ, ಮಳೆಯ ನಡುವೆ ಬದಲಾದ ವಾತಾವರಣವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಸಮಯಲ್ಲಿ ಕೊಂಚ ವ್ಯತ್ಯಾಸವಾದ್ರೂ ಜ್ವರ, ನೆಗಡಿಯಂತಹ ಸಮಸ್ಯೆಗಳ ಜೊತೆಗೆ ಕೆಲವು ಇತರ ಆರೋಗ್ಯ ಸಮಸ್ಯೆಗಳು ಬಾಧಿಸುವುದುಂಟು,. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.

ನಿರಂತರ ಮಳೆಯಿಂದಾಗಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಹೆಚ್ಚಾಗಲಿದ್ದು, ಇದರಿಂದ ಡೆಂಗ್ಯೂ-ಮಲೇರಿಯಾ ಹೆಚ್ಚಾಗುವ ಸಾಧ್ಯತೆಗಳಿವೆ. ಮಳೆ ವೇಳೆ ಒಳಚರಂಡಿಗಳು ಉಕ್ಕಿ ಹರಿದು, ಜಲಮೂಲಗಳು ಕಲುಷಿತಗೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ಟೈಫಾಯಿಡ್, ಹೆಪಟೈಟಿಸ್ ಎ, ಉಸಿರಾಟದ ಸೋಂಕುಗಳು ಅಥವಾ ಜ್ವರ ತರಹದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸ್ಥಳವಾಗುತ್ತದೆ. ಇದು ಚಿಕೂನ್‌ಗುನ್ಯಾ ಮತ್ತು ಲೆಪ್ಟೊಸ್ಪೈರೋಸಿಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆ, ಇದರ ಜೊತೆಗೆ, ಬದಲಾದ ವಾತಾವರಣದ ವೇಳೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು, ಶ್ವಾಸಕೋಶ ಸೋಂಕುಗಳೂ ಹೆಚ್ಚಾಗುತ್ತವೆ.

ಸಾಮಾನ್ಯ ಶೀತ, ಕೆಮ್ಮು ಮತ್ತು ಗಂಟಲು ನೋವು ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ಆರಂಭದಲ್ಲಿ ಸಾಮಾನ್ಯ ಜ್ವರವೆಂದೇ ಭಾಸವಾದರೂ ನಂತರ ಟೈಫಾಯಿಡ್‌ ಹಾಗೂ ಇತರೆ ಗಂಭೀರ ಸ್ವರೂಪ ಸ್ಥಿತಿಗೆ ತಿರುಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಯಾವುದೇ ರೀತಿಯ ಜ್ವರವಾದರೂ ಮೇಲ್ವಿಚಾರಣೆ ಮಾಡುವುದು ಮುಖ್ಯವಾಗುತ್ತದೆ.

ಚಿತ್ರವನ್ನು ಪ್ರಾತಿನಿಧಿಕ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ.
Covid-19 ಮೊದಲ ಅಲೆಯ ಸೋಂಕಿತರಲ್ಲಿ Heart Attack ಅಪಾಯ ಹೆಚ್ಚು: ಅಧ್ಯಯನ!

ತಡೆಗಟ್ಟುವುದು ಹಾಗೂ ಆರೈಕೆ ಹೇಗೆ?

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳವುದೇ ದೊಡ್ಡ ತಲೆನೋವು. ಈ ಸಮಯದಲ್ಲಿ ನೈರ್ಮಲ್ಯ ಕಾಪಾಡುವುದು ಅತ್ಯಂತ ಮುಖ್ಯವಾಗುತ್ತದೆ. ಇದರಿಂದ ಅನೇಕ ಜಠರಗರುಳಿನ ಕಾಯಿಲೆಗಳ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತೊಂದು ಪ್ರಮುಖ ಕ್ರಮವೆಂದರೆ ಮನೆಗಳ ಸುತ್ತಲೂ ನೀರು ನಿಲ್ಲುವುದನ್ನು ತಪ್ಪಿಸುವುದು, ಇದು ಸೊಳ್ಳೆಗಳ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಸೊಳ್ಳೆ ನಿವಾರಕಗಳನ್ನು ಬಳಸುವುದರ ಜೊತೆಗೆ ರಕ್ಷಣಾತ್ಮಕ ಉಡುಪುಗಳು ಮತ್ತು ಸರಿಯಾದ ಪಾದರಕ್ಷೆಗಳನ್ನು ಧರಿಸಬೇಕು,

ಜ್ವರ ಅಥವಾ ಇತರೆ ಲಕ್ಷಣಗಳು ಕಾಣಿಸಿಕೊಂಡ ಬಳಿಕ 2 ದಿನವಾದರೂ ಕಾಯಿಲೆ ಸುಧಾರಿಸದಿದ್ದರೆ ವೈದ್ಯಕೀಯ ಸಲಹೆಗಳನ್ನು ಪಡೆಯಿರಿ. ಆರೋಗ್ಯಕರ ಆಹಾರ ಸೇವನೆ ಹಾಗೂ ನೀರು ಶುಚಿತ್ವ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದಾಗಿ ಟೈಫಾಯಿಡ್, ಹೆಪಟೈಟಿಸ್, ಅತಿಸಾರ ಇತ್ಯಾದಿಗಳಂತಹ ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇರಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com