ಚಿಪ್ಸ್ ತಿಂದು ಕೂಲ್ ಡ್ರಿಂಕ್ಸ್ ಕುಡಿಯೋ ಅಭ್ಯಾಸ ನಿಮಗಿದ್ಯಾ? ಇದು ನಿಮ್ಮ ದೇಹಕ್ಕೆ ನೀವೇ ಇಡುತ್ತಿರುವ ಸ್ಲೋ ಪಾಯ್ಸನ್!

ಕೆಲಸದ ನಡುವೆ ಹಸಿವಾದಾಗ ಒಂದು ಪ್ಯಾಕೆಟ್ ಚಿಪ್ಸ್ ಕೈಗೆ ಸಿಗುತ್ತದೆ. ಜೊತೆಗೆ ತಣ್ಣಗಿನ ಕೂಲ್ ಡ್ರಿಂಕ್ಸ್ ಕುಡಿದರೆ ಖುಷಿ ಡಬಲ್ ಆಗುತ್ತದೆ. ಆದರೆ ಈ ಕಾಂಬಿನೇಷನ್ ನಿಮ್ಮ ದೇಹಕ್ಕೆ ಎಷ್ಟು ಅಪಾಯ ಮಾಡುತ್ತದೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
Chips with Cold Drinks - Food Combination
ಚಿಪ್ಸ್ ತಿಂದು ಕೂಲ್ ಡ್ರಿಂಕ್ಸ್ ಕುಡಿಯೋ ಅಭ್ಯಾಸ ನಿಮಗಿದ್ಯಾ?Online Desk
Updated on

Health Tips: ಸಂಜೆ ಆದ್ರೆ ಸಾಕು ಚಿಪ್ಸ್ ತಿನ್ನುತ್ತಾ, ಕೂಲ್ ಡ್ರಿಂಕ್ಸ್ ಕುಡಿಯುವುದೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳು ಹಾಗು ಯುವಕರಿಗೆ ಈ ಕಾಂಬಿನೇಷನ್ ಅತ್ಯಂತ ನೆಚ್ಚಿನದ್ದಾಗಿದೆ. ಆದರೆ, ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ತಕ್ಷಣಕ್ಕೆ ಮಜಾ ಎನಿಸಿದರೂ, ದೀರ್ಘಾವಧಿಯಲ್ಲಿ ಇದು ದೇಹದ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ನಿಮಗೆ ಗೊತ್ತಾ? ಆ ಕುರಿತ ವರದಿ ಇಲ್ಲಿದೆ:

ಮೊದಲು ಟೇಸ್ಟ್ ಆಮೇಲೆ ಆರೋಗ್ಯದ ಮೇಲೆ ಹೊಡೆತ:

ಚಿಪ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಟ್ರಾನ್ಸ್ ಫ್ಯಾಟ್ ಮತ್ತು ಕೃತಕ ಸುವಾಸನೆ ಇರುತ್ತದೆ. ಒಂದು ಸಣ್ಣ ಪ್ಯಾಕೆಟ್ ನಲ್ಲೇ ದಿನಕ್ಕೆ ಬೇಕಾದ ಉಪ್ಪಿನ ಅರ್ಧಕ್ಕಿಂತ ಹೆಚ್ಚು ಹೋಗುತ್ತದೆ. ಇದಕ್ಕೆ ಕೂಲ್ ಡ್ರಿಂಕ್ಸ್ ಸೇರಿದರೆ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಒಂದು 500 ಎಂಎಲ್ ಕೋಲ್ಡ್ ಡ್ರಿಂಕ್ ನಲ್ಲಿ 10 ಚಮಚ ಸಕ್ಕರೆ ಇರುತ್ತದೆ. ಉಪ್ಪು ಮತ್ತು ಸಕ್ಕರೆ ಒಟ್ಟಿಗೆ ಹೊಟ್ಟೆಗೆ ಹೋದಾಗ ದೇಹದಲ್ಲಿ ಉರಿಯೂತ ಜಾಸ್ತಿಯಾಗುತ್ತದೆ.

ಈ 3 ಸಮಸ್ಯೆಗಳು ಬೇಗ ಬರುತ್ತವೆ...

  • ಮೊದಲನೆಯದು ತೂಕ ಜಾಸ್ತಿ. ಚಿಪ್ಸ್ ನಲ್ಲಿರುವ ಕ್ಯಾಲೋರಿ ಮತ್ತು ಕೂಲ್ ಡ್ರಿಂಕ್ಸ್ ನಲ್ಲಿರುವ ಖಾಲಿ ಕ್ಯಾಲೋರಿ ಒಟ್ಟು ಸೇರಿ ಬೊಜ್ಜು ಬರಲು ಕಾರಣವಾಗುತ್ತದೆ.

  • ಎರಡನೆಯದು ಸಕ್ಕರೆ ಕಾಯಿಲೆ ಮತ್ತು ಹೃದಯದ ಸಮಸ್ಯೆ. ಪ್ರತಿದಿನ ಸಕ್ಕರೆ ಪಾನೀಯ ಕುಡಿಯುವುದರಿಂದ ಇನ್ಸುಲಿನ್ ಮೇಲೆ ಒತ್ತಡ ಬೀಳುತ್ತದೆ. ಜೊತೆಗೆ ಹೆಚ್ಚಿನ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

  • ಮೂರನೆಯದು ಜೀರ್ಣಕ್ರಿಯೆ ಮತ್ತು ಹಲ್ಲಿನ ಸಮಸ್ಯೆ. ಕೂಲ್ ಡ್ರಿಂಕ್ಸ್ ನಲ್ಲಿರುವ ಆಸಿಡ್ ಹಲ್ಲಿನ ಎನಾಮೆಲ್ ಸವೆಸುತ್ತದೆ. ಚಿಪ್ಸ್ ನಲ್ಲಿರುವ ಮೈದಾ ಮತ್ತು ಎಣ್ಣೆ ಗ್ಯಾಸ್ ಮತ್ತು ಅಜೀರ್ಣ ತರುತ್ತದೆ.

Chips with Cold Drinks - Food Combination
ಪ್ರತಿದಿನ Dark Chocolate ತಿಂದರೆ ಏನಾಗುತ್ತೆ? ಇಲ್ಲಿದೆ ಡೈಲಿ 1-2 ಪೀಸ್ ಡಾರ್ಕ್ ಚಾಕೊಲೇಟ್ ತಿಂದ್ರೆ ಸಿಗೋ ಆರೋಗ್ಯ ಲಾಭಗಳು!

ಮುಂದುವರೆದು, ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಕಾಂಬೋವನ್ನು ಹೆಚ್ಚಾಗಿ ತಿನ್ನುತ್ತಾರೆ. ಇದರಿಂದ ಏಕಾಗ್ರತೆ ಕಡಿಮೆ ಆಗುವುದು ಆಯಾಸ ಬೇಗ ಬರುವುದು ಮತ್ತು ಮೂಡ್ ಸ್ವಿಂಗ್ ಆಗುವುದು ಕಂಡುಬರುತ್ತದೆ. ವೈದ್ಯರು ಕೂಡ ಜಂಕ್ ಫುಡ್ ಜೊತೆ ಸಕ್ಕರೆ ಪಾನೀಯ ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ.

ಬದಲಾಗಿ ಏನು ಮಾಡಬಹುದು?

ಹಸಿವಾದಾಗ ಹುರಿದ ಕಡಲೆ ಮೊಳಕೆ ಸುಟ್ಟ ಚನ್ನ ಅಥವಾ ಹಣ್ಣು ತಿನ್ನಬಹುದು. ದಾಹವಾದಾಗ ತೆಂಗಿನ ನೀರು ನಿಂಬೆ ನೀರು ಮಜ್ಜಿಗೆ ಅಥವಾ ಸಾಮಾನ್ಯ ನೀರು ಕುಡಿಯುವುದು ಒಳ್ಳೆಯದು. ವಾರಕ್ಕೆ ಒಮ್ಮೆ ಚಿಪ್ಸ್ ತಿನ್ನುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನು ದಿನದ ಅಭ್ಯಾಸ ಮಾಡಿಕೊಳ್ಳಬೇಡಿ.

ಒಟ್ಟಾರೆಯಾಗಿ, ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಟೇಸ್ಟ್ ಗೆ ಚೆನ್ನಾಗಿರಬಹುದು. ಆದರೆ ದೇಹಕ್ಕೆ ಅವು ಸಾಲು ಸಾಲು ಸಮಸ್ಯೆ ತರುತ್ತವೆ. ಆರೋಗ್ಯವಾಗಿ ಇರಬೇಕಾದರೆ ಈ ಎರಡನ್ನು ಒಟ್ಟಿಗೆ ಸೇವಿಸುವ ಅಭ್ಯಾಸವನ್ನು ಇಂದೇ ನಿಲ್ಲಿಸಿ.

Chips with Cold Drinks - Food Combination
ಬಾದಾಮಿ, ವಾಲ್ನಟ್, ಗೋಡಂಬಿ: ಯಾವ ಸೂಪರ್‌ಫುಡ್ ಯಾವಾಗ ತಿನ್ನಬೇಕು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com