ಪ್ರತಿದಿನ Dark Chocolate ತಿಂದರೆ ಏನಾಗುತ್ತೆ? ಇಲ್ಲಿದೆ ಡೈಲಿ 1-2 ಪೀಸ್ ಡಾರ್ಕ್ ಚಾಕೊಲೇಟ್ ತಿಂದ್ರೆ ಸಿಗೋ ಆರೋಗ್ಯ ಲಾಭಗಳು!

ಪ್ರತಿಯೊಬ್ಬರು ತುಂಬಾ ಇಷ್ಟ ಪಟ್ಟು ತಿನ್ನುವ ಚಾಕೊಲೇಟ್‍‌ಗಳಲ್ಲಿ ಡಾರ್ಕ್ ಚಾಕೊಲೇಟ್‍ ತುಂಬಾ ಫೇಮಸ್. ಹಾಗಾದ್ರೆ, ಈ ಡಾರ್ಕ್ ಚಾಕೊಲೇಟ್‍ ಅನ್ನು ಪ್ರತಿ ದಿನ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
Dark Chocolate
ಡಾರ್ಕ್ ಚಾಕೊಲೇಟ್‍‌Online Desk
Updated on

Dark Chocolate Benfits: ಚಾಕೊಲೇಟ್‍ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರವರೆಗೆ ಎಲ್ಲರಿಗೂ ಫೇವರಿಟ್; ಹೀಗೆ, ಪ್ರತಿಯೊಬ್ಬರು ತುಂಬಾ ಇಷ್ಟ ಪಟ್ಟು ತಿನ್ನುವ ಚಾಕೊಲೇಟ್‍‌ಗಳಲ್ಲಿ ಡಾರ್ಕ್ ಚಾಕೊಲೇಟ್‍ ತುಂಬಾ ಫೇಮಸ್. ಹಾಗಾದ್ರೆ, ಈ ಡಾರ್ಕ್ ಚಾಕೊಲೇಟ್‍ ಅನ್ನು ಪ್ರತಿ ದಿನ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಪ್ರತಿದಿನ 1-2 ಪೀಸ್ ಅಂದರೆ ಸುಮಾರು 20-30 ಗ್ರಾಂ ಡಾರ್ಕ್ ಚಾಕೊಲೇಟ್‍ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಅದ್ಭುತ ಪ್ರಯೋಜನಗಳು ಸಿಗುತ್ತವೆ. ಆದರೆ, ನೀವು ತಿನ್ನುವ ಡಾರ್ಕ್ ಚಾಕೊಲೇಟ್‍‌ನಲ್ಲಿ ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ ಅಂಶ ಇರಲೇಬೇಕು! ಹಾಗಾದ್ರೆ, ಡಾರ್ಕ್ ಚಾಕೊಲೇಟ್‍ ತಿನ್ನುವುದರಿಂದ ಏನೆಲ್ಲಾ ಪ್ರಯೋಜನೆಗಳಿವೆ ನೋಡೋಣ ಬನ್ನಿ,

  • ಹೃದಯದ ಆರೋಗ್ಯ:

ಡಾರ್ಕ್ ಚಾಕೊಲೇಟ್‍‌ನಲ್ಲಿ ಫ್ಲಾವನಾಲ್‌ಗಳು ಎಂಬಆಂಟಿಓಕ್ಸಿಡಾಂಟ್ಸ್ ಹೆಚ್ಚಾಗಿರುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಈ ಮೂಲಕ ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

Dark Chocolate
ತೂಕ ಹೆಚ್ಚಳ, ಕೂದಲು ಉದುರುತ್ತಿದೆಯೇ..? ಥೈರಾಯ್ಡ್ ಸಮಸ್ಯೆ ಇರಬಹುದು; ಸಹಜವಾಗಿ ನಿಯಂತ್ರಿಸಲು ಈ ಐದು ಆರೋಗ್ಯಕರ ಮಾರ್ಗ ಅನುಸರಿಸಿ!
  • ಮಾನಸಿಕ ಒತ್ತಡ:

ಡಾರ್ಕ್ ಚಾಕೊಲೇಟ್‍‌ ತಿಂದಾಗ ಮೆದುಳಿನಲ್ಲಿ ಎಂಡಾರ್ಫಿನ್ ಮತ್ತು ಸಿರೊಟೋನಿನ್ ಎಂಬ ಸಂತೋಷದ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ, ನಿಮ್ಮ ಮನಸ್ಥಿತಿಯನ್ನು ತಕ್ಷಣವೇ ಉತ್ಸಾಹಭರಿತವಾಗಿಸುತ್ತದೆ.

  • ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ:

ಡಾರ್ಕ್ ಚಾಕೊಲೇಟ್‍‌ನಲ್ಲಿರುವ ಕೋಕೋದಲ್ಲಿರುವ ಫ್ಲಾವನಾಲ್‌ಗಳು ಮತ್ತು ಕೆಫೀನ್ ಅಂಶವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ನೆನಪಿನ ಶಕ್ತಿ, ಏಕಾಗ್ರತೆ ಸುಧಾರಿಸುತ್ತದೆ.

  • ತೂಕ ನಿಯಂತ್ರಣ:

ಊಟದ ನಂತರ ಸಿಹಿ ತಿನ್ನಬೇಕು ಎನಿಸಿದಾಗ 1 ಪೀಸ್ ಡಾರ್ಕ್ ಚಾಕೊಲೇಟ್‍ ತಿಂದರೆ, ಅದು ಅತಿಯಾದ ಹಸಿವು ಮತ್ತು ಸಿಹಿಯ ಹಂಬಲವನ್ನು ತಡೆಯುತ್ತದೆ. ಇದು ಪರೋಕ್ಷವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

  • ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ:

ಸಂಶೋಧನೆಗಳ ಪ್ರಕಾರ, ನಿಯಮಿತವಾಗಿ ಡಾರ್ಕ್ ಚಾಕೊಲೇಟ್‍ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಸಹಾಯವಾಗುತ್ತದೆ ಎನ್ನಲಾಗಿದೆ.

Dark Chocolate
Chia Seeds: ಆರೋಗ್ಯ ಕಾಪಾಡುವ ಸೂಪರ್‌ಫುಡ್; ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಅತಿಯಾಗಿ ಸೇವಿಸಿದರೆ ಏನಾಗುತ್ತದೆ..?

ಏತನ್ಮಧ್ಯೆ, ಡಾರ್ಕ್ ಚಾಕೊಲೇಟ್‍‌ನಲ್ಲಿ ಪೋಷಕಾಂಶಗಳಿದ್ದರೂ ಸಹ, ಕ್ಯಾಲೋರಿ ಮತ್ತು ಕೊಬ್ಬಿನಾಂಶ ಇರುತ್ತದೆ. ಹಾಗಾಗಿ ದಿನಕ್ಕೆ 1-2 ಸಣ್ಣ ಪೀಸ್‌ಗಳಿಗಿಂತ ಹೆಚ್ಚು ತಿನ್ನಬೇಡಿ. ಅದರಲ್ಲೂ, ಈ ಚಾಕೊಲೇಟ್‍‌ನಲ್ಲಿ ಸ್ವಲ್ಪ ಪ್ರಮಾಣದ ಕೆಫೀನ್ ಇರುವುದರಿಂದ, ರಾತ್ರಿ ಮಲಗುವ ಮುನ್ನ ತಿನ್ನುವ ಬದಲು ಬೆಳಿಗ್ಗೆ ಅಥವಾ ಮಧ್ಯಾಹ್ನ ತಿನ್ನೋದು ಬೆಸ್ಟ್.!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com