ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸ್ಕರ್ಟ್ ಧರಿಸಿದ್ದ ವಿದ್ಯಾರ್ಥಿನಿಗೆ ಅವಮಾನಿಸಿದ ಪ್ರಾಧ್ಯಾಪಕ

ನ್ಯಾಷನಲ್ ಲಾ ಸ್ಕೂಲ್‌ನ ಪ್ರಾಧ್ಯಾಪಕರೊಬ್ಬರು ಮೂರನೇ ವರ್ಷದ ವಿದ್ಯಾರ್ಥಿನಿಗೆ ಅವಮಾನಿಸಿರುವ ಘಟನೆ ಬೆಂಗಳೂರಿನ ಕಾಲೇಜಿನಲ್ಲಿ ನಡೆದಿದೆ

ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್‌ನ ಪ್ರಾಧ್ಯಾಪಕರೊಬ್ಬರು ಮೂರನೇ ವರ್ಷದ ವಿದ್ಯಾರ್ಥಿನಿಗೆ ಅವಮಾನಿಸಿರುವ  ಘಟನೆ ಬೆಂಗಳೂರಿನ  ಕಾಲೇಜಿನಲ್ಲಿ ನಡೆದಿದೆ.

ಏಪ್ರಿಲ್ 4ರಂದು ಈ ಘಟನೆ ನಡೆದಿದ್ದು, ಆ ವಿದ್ಯಾರ್ಥಿನಿಗೆ ಬೆಂಬಲವಾಗಿ ನಿಂತ ವಿದ್ಯಾರ್ಥಿನಿಯರೆಲ್ಲಾ ಮರುದಿನ ಪ್ರಾಧ್ಯಾಪಕರ ತರಗತಿಗೆ ಶಾರ್ಟ್ಸ್ ಧರಿಸಿ ಹಾಜರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬುಧವಾರ ನೀಡಿದ ಹೇಳಿಕೆಯಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿನಿ ತರಗತಿಯಲ್ಲಿ ಧರಿಸಿದ್ದ ಉಡುಪನ್ನು ಪ್ರಶ್ನಿಸಿ ಕೆಟ್ಟದಾಗಿ ಮಾತನಾಡಿದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಕಾಲೇಜಿನ ತರಗತಿಗೆ ತುಂಡುಡುಗೆ ಧರಿಸಿಕೊಂಡು ಬಂದಿದ್ದಾಗ ಪ್ರಾಧ್ಯಾಪಕರು ಅವಳ ನಡತೆಯನ್ನು ಕುರಿತು ಆಕ್ಷೇಪಿಸಿ ಇಡೀ ತರಗತಿಯ ಎದುರು ಸರಿಯಾಗಿ ಡ್ರೆಸ್ ಮಾಡಿಕೊಂಡು ಬರಬೇಕೆಂದು ಸೂಚಿಸಿದ್ದರು. ಈ ಪ್ರತಿಕ್ರಿಯೆಯಿಂದ ವಿದ್ಯಾರ್ಥಿನಿ ತೀವ್ರ ಬೇಸರಗೊಂಡಿದ್ದಳು.

ಪ್ರಾಧ್ಯಾಪಕರ ಹೇಳಿಕೆ ಕುರಿತು ವಿದ್ಯಾರ್ಥಿನಿ ಆಕ್ಷೇಪ ವ್ಯಕ್ತಪಡಿಸಿದಾಗ ಅವಳಿಗೆ ಮತ್ತೊಮ್ಮೆ ನಿಂದಿಸಿದರೆಂದು ವಿದ್ಯಾರ್ಥಿನಿ ದೂರಿದ್ದಾಳೆ.  ಗುರುವಾರ ಸಂಜೆ ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ತಮ್ಮ ಕ್ರಮವು ತಾವು ಧರಿಸಿದ ಉಡುಪಿನ ರೀತಿಯ ಕುರಿತು  ಪ್ರಾಧ್ಯಾಪಕರು ನೀಡಿದ ಕಿರುಕುಳದ ಬಗ್ಗೆ ಗಮನಸೆಳೆಯುವುದಾಗಿತ್ತು. ಉಪಕುಲಪತಿ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಈ ಘಟನೆಯ ಬಗ್ಗೆ ಸ್ವತಂತ್ರ ಸಮಿತಿಯಿಂದ ತನಿಖೆ ಮಾಡುವಂತೆ ವಿದ್ಯಾರ್ಥಿಗಳು  ಒತ್ತಾಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com