ಬರ ಅಧ್ಯಯನ: ಪರಿಶೀಲನೆಗೆ ರಾಜ್ಯ ಸಚಿವರ 4 ತಂಡ ರಚನೆ

ರಾಜ್ಯ ಬರ ಪೀಡಿತ ಜಿಲ್ಲೆಗಳ ಅಧ್ಯಯನ ಮತ್ತು ಬರ ನಿರ್ವಹಣೆ ಕಾರ್ಯಕ್ರಮಗಳ ಪರಿಶೀಲನೆಗೆ 16 ಸಚಿವರನ್ನೊಳಗೊಂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ರಾಜ್ಯ ಬರ ಪೀಡಿತ ಜಿಲ್ಲೆಗಳ ಅಧ್ಯಯನ ಮತ್ತು ಬರ ನಿರ್ವಹಣೆ ಕಾರ್ಯಕ್ರಮಗಳ ಪರಿಶೀಲನೆಗೆ 16 ಸಚಿವರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ತಂಡದಲ್ಲಿ 16 ಸಚಿವರನ್ನು ನಿಯೋಜಿಸಲಾಗಿದ್ದು, ತಲಾ ನಾಲ್ವರು ಸಚಿವರು ರಾಜ್ಯದ ನಾಲ್ಕು ವಿಭಾಗಗಳಲ್ಲಿ ಏಪ್ರಿಲ್ 15ರಿಂದ 30ರ ವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. 
ಬೆಳಗಾವಿಗೆ ಆಱ್ ವಿ ದೇಶಪಾಂಡೆ, ಎಸ್ ಆರ್ ಪಾಟೀಲ, ಸತೀಶ್ ಜಾರಕಿಗೊಳಿ, ಕೃಷ್ಣ ಬೈರೇಗೌಡ ಭೇಟಿ ನೀಡಲಿದ್ದು, ಮೈಸೂರಿಗೆ ಟಿಬಿ ಜಯಚಂದ್ರ, ಡಾ.ಎಸ್ ಸಿ ಮಹದೇವಪ್ಪ, ಎಚ್ ಎಸ್ ಮಹದೇವಪ್ರಸಾದ್, ದಿನೇಶ್ ಗುಂಡೂರಾವ್ ಭೇಟಿ ನೀಡಲಿದ್ದಾರೆ. 
ಶ್ರೀನಿವಾಸ ಪ್ರಸಾದ್. ಡಿಕೆ ಶಿವಕುಮಾರ್, ರಾಮ ಲಿಂಗಾ ರೆಡ್ಡಿ, ರೋಷನ್ ಬೇಗ್ ಅವರು ಬೆಂಗಳೂರು ವಿಭಾಗಕ್ಕೆ ಭೇಟಿ ನೀಡಲಿದ್ದು, ಎಚ್ ಕೆ ಪಾಟಲೀ, ಖಮರುಲ್ ಇಸ್ಲಾಂ, ಉಮಾಶ್ರೀ, ಡಾ ಶರಣ ಪ್ರಕಾಶ ಪಾಟೀಲ ಅವರು ಕಲಬುರ್ಗಿಗೆ ತೆರಳಿ ಬರ ಅಧ್ಯಯನ ಕುರಿತು ಪರಿಶೀಲನೆ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com