ಬೆಂಗಳೂರು ಸ್ಲಂಗಳಲ್ಲಿರುವ 37 ಸಾವಿರ ಕುಟುಂಬಗಳಿಗೆ ಶೌಚಾಲಯ ಇಲ್ಲ! (ಸಂಗ್ರಹ ಚಿತ್ರ)
ಬೆಂಗಳೂರು ಸ್ಲಂಗಳಲ್ಲಿರುವ 37 ಸಾವಿರ ಕುಟುಂಬಗಳಿಗೆ ಶೌಚಾಲಯ ಇಲ್ಲ! (ಸಂಗ್ರಹ ಚಿತ್ರ)

ಬೆಂಗಳೂರು ಸ್ಲಂಗಳಲ್ಲಿರುವ 37 ಸಾವಿರ ಕುಟುಂಬಗಳಿಗೆ ಶೌಚಾಲಯ ಇಲ್ಲ!

ಬೆಂಗಳೂರು ಸ್ಲಂಗಳಲ್ಲಿ ವಾಸವಿರುವ 37,183 ಕುಟುಂಬಗಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ ಎಂಬ ಮಾಹಿತಿ ಬಿಬಿಎಂಪಿ ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆ ಮೂಲಕ ಬಹಿರಂಗವಾಗಿದೆ.

ಬೆಂಗಳೂರು: ಬೆಂಗಳೂರು ಸ್ಲಂಗಳಲ್ಲಿ ವಾಸವಿರುವ 37,183 ಕುಟುಂಬಗಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ ಎಂಬ ಮಾಹಿತಿ ಬಿಬಿಎಂಪಿ ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆ ಮೂಲಕ ಬಹಿರಂಗವಾಗಿದೆ.
ಸಮೀಕ್ಷಾ ವರದಿ ಪ್ರಕಾರ ನೋಟಿಫೈಗೊಂಡಿರುವ ಸ್ಲಂಗಳಲ್ಲಿ 17 ,435 ಕುಟುಂಬಗಳು ಶೌಚಾಲಯ ಇಲ್ಲದೇ ಬದುಕುತ್ತಿದ್ದರೆ, ನೋಟಿಫೈ ಆಗದೇ ಇರುವ ಸ್ಲಂ ಗಳಲ್ಲಿ 19 ,748 ಕುಟುಂಬಗಳು ಶೌಚಾಲಯ ಹೊಂದಿಲ್ಲ. ಶೌಚಾಲಯ ಇಲ್ಲದೇ ವಾಸಿಸುತ್ತಿರುವ ಅತಿ ಹೆಚ್ಚು ಕುಟುಂಬಗಳಿರುವ (14,498 ಕುಟುಂಬಗಳು) ಸ್ಲಂ ಗಳ ಪಟ್ಟಿಯಲ್ಲಿ ಯಲಹಂಕ ಮೊದಲ ಸ್ಥಾನದಲ್ಲಿದ್ದರೆ, 229 ಕುಟುಂಬಗಳಿರುವ ಬೊಮ್ಮನಹಳ್ಳಿ ಕೊನೆಯ ಸ್ಥಾನದಲ್ಲಿದೆ.   
ಸ್ಲಂ ಗಳಲ್ಲಿ ಪ್ರತಿ ಕುಟುಂಬ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿರುವ ಬಗ್ಗೆ 2015 ರ ಅಕ್ಟೋಬರ್- 2016 ರ ಫೆಬ್ರವರಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಸುಬೋಧ್ ಯಾದವ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸ್ವಚ್ಛ್ ಭಾರತಕ್ಕಾಗಿ ನೀಡಲಾಗುವ ಅನುದಾನ ಬಳಸಿ ಸ್ಲಂ ಗಳಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬೆಂಗಳೂರು 38 ನೇ ಸ್ಥಾನಕ್ಕೆ ಕುಸಿದಿತ್ತು.

Related Stories

No stories found.

Advertisement

X
Kannada Prabha
www.kannadaprabha.com