ಬಿಸಿಲ ಬೇಗೆಗೆ ತತ್ತರಿಸಿದ್ದ ನಗರಕ್ಕೆ ತಂಪೆರೆದ ಮಳೆ

ಕೆಲವು ದಿನಗಳಿಂದಲೂ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಬೇಸಿಗೆ ಮಳೆ ಅಬ್ಬರಿಸಿ ತಂಪೆರೆಯಿತು...
ಬಿಸಿಲ ಬೇಗೆಗೆ ತತ್ತರಿಸಿದ್ದ ನಗರಕ್ಕೆ ತಂಪೆರೆದ ಮಳೆ
ಬಿಸಿಲ ಬೇಗೆಗೆ ತತ್ತರಿಸಿದ್ದ ನಗರಕ್ಕೆ ತಂಪೆರೆದ ಮಳೆ

ಬೆಂಗಳೂರು: ಕೆಲವು ದಿನಗಳಿಂದಲೂ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಬೇಸಿಗೆ ಮಳೆ ಅಬ್ಬರಿಸಿ ತಂಪೆರೆಯಿತು.

ನಗರದ ಯಶವಂತರಪುರ, ಶೆಟ್ಟಿಹಳ್ಳಿ, ದಾಸರಹಳ್ಳಿ ಸೇರಿದಂತೆ ಹಲವೆಡೆ ನಿನ್ನೆ ಸಂಜೆ ಸುರಿದ ಬೇಸಿಗೆ ಮಳೆ ವಾತಾವರಣ ತಂಪಾಗುವಂತೆ ಮಾಡಿತ್ತು.

ರಾಧಾಕೃಷ್ಣ ದೇವಸ್ಥಾನ ಸುತ್ತಮುತ್ತಲೂ (15.5 ಮಿ.ಮೀ), ಯಶವಂತಪುರ (9 ಮಿ.ಮೀ), ಶೆಟ್ಟಿ ಹಳ್ಳಿ (17 ಮಿ.ಮೀ) ಮತ್ತು ದಾಸರಹಳ್ಳಿ (10.5 ಮಿಮೀ) ಮಳೆಯಾಗಿದೆ. ಇನ್ನು ಹೊರವಲಯವಾದ ದೇವನಹಳ್ಳಿ (13 ಮಿ.ಮೀ) ಹಾಗೂ ಅಲ್ಲಿನ ಸುತ್ತಮುತ್ತಲೂ ಮಳೆಯಾಗಿರುವುದಾಗಿ ತಿಳಿದುಬಂದಿದೆ.

ನಿನ್ನೆ ಸಂಜೆ 5.30ಕ್ಕೆ ಆರಂಭವಾದ ಮಳೆ ಸುಮಾರು 2ಗಂಟೆಗಳ ಕಾಲ ಮುಂದುವರೆದಿತ್ತು. ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಇಸ್ಕಾನ್ ದೇವಸ್ಥಾನ, ಗೊರಗುಂಟೆಪಾಳ್ಯ, ಮತ್ತಿಕೆರೆ, ಚಿಕ್ಕಜಾಲ ಹಾಗೂ ಬನ್ನೇರುಘಟ್ಟ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. ಇನ್ನು ಹವಾಮಾನ ಇಲಾಖೆ ಹೇಳಿರುವ ಪ್ರಕಾರ ಈ ಬಾರಿ ಕಡಿಮೆಯಾಗುವ ಸಂಭವವಿದಿದ್ದು, ಮುಂಬರುವ ದಿನಗಳಲ್ಲಿ ತಾಪಮಾನ ಕಡಿಮೆಯಾಗುವ ಸಂಭವವಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com