ಸಿಐಡಿ ಹೆಸರಲ್ಲಿ ಹಣ ಸುಲಿಗೆ ಮಾಡುತ್ತಿರುವ ದುಷ್ಕರ್ಮಿಗಳು

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಕೆಲ ದುಷ್ಕರ್ಮಿಗಳು ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಹೋಗಿ ಖಾಸಗಿ ಕಾಲೇಜುಗಳಿಂದ ಸುಲಿಗೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ...
ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ (ಸಂಗ್ರಹ ಚಿತ್ರ)
ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಕೆಲ ದುಷ್ಕರ್ಮಿಗಳು ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಹೋಗಿ  ಖಾಸಗಿ ಕಾಲೇಜುಗಳಿಂದ ಸುಲಿಗೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸ೦ಬ೦ಧ ಸಿಐಡಿ ಹಾಗೂ ಪಿಯುಸಿ ಬೋಡ್‍೯ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಖಾಸಗಿ ಕಾಲೇಜುಗಳ ಆಡಳಿತ ಮ೦ಡಳಿಗೆ  ಬ್ಲ್ಯಾಕ್‍ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿರುವ ಸ೦ಗತಿಯನ್ನು ಪೊಲೀಸರು ಹೊರಹಾಕಿದ್ದಾರೆ. ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಐಡಿ ನಿರ್ದೇಶಕ ಸೋನಿಯಾ ನಾರಂಗ್  ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿರುವ ಆರೋಪದಲ್ಲಿ ಏಪ್ರಿಲ್ 14ರ೦ದು ರಾಜ್ಯದ 11 ಕಾಲೇಜುಗಳ ಮೇಲೆ ಸಿಐಡಿ ದಾಳಿ  ನಡೆಸಿ ದಾಖಲೆ ಪತ್ರ ವಶಪಡಿಸಿಕೊ೦ಡಿತ್ತು. ಇದೀಗ ಇದನ್ನೇ ಬ೦ಡವಾಳ ಮಾಡಿಕೊ೦ಡ ಕೆಲ ದುಷ್ಕಮಿ೯ಗಳು, ಕಾಲೇಜು ಆಡಳಿತ ಮ೦ಡಳಿ ಅಧಿಕಾರಿಗಳನ್ನು ಸ೦ಪಕಿ೯ಸಿ ಸುಲಿಗೆಗೆ  ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ಕಾಲೇಜುಗಳಿಗೆ ಕರೆ ಮಾಡುವ ಈ ದುಷ್ಕರ್ಮಿಗಳು ನಮಗೆ ಸಿಐಡಿ ಹಾಗೂ ಪಿಯು ಮ೦ಡಳಿ ಅಧಿಕಾರಿಗಳು ಆತ್ಮೀಯರಾಗಿದ್ದಾರೆ. ಅವರಿಗೆ ಹೇಳಿ ಕಾಲೇಜಿನ ಮೇಲಿರುವ ಆರೋಪ  ಕೈಬಿಡುವ೦ತೆ ಮಾಡುವುದಾಗಿ ನ೦ಬಿಸಿ ಹಣ ಸುಲಿಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಐಡಿ ದಾಳಿಗೊಳಗಾದ ಕಾಲೇಜುಗಳು ಮಾತ್ರವಲ್ಲದೆ ಬೇರೆ ಖಾಸಗಿ ಕಾಲೇಜುಗಳನ್ನೂ ಕೂಡ  ಈ ದುಷ್ಕರ್ಮಿಗಳು ಸ೦ಪರ್ಕಿಸಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿಮ್ಮ ಕಾಲೇಜಿನ ಹೆಸರೂ ಇದೆ. ಈ ಬಗ್ಗೆ ಸಿಐಡಿಗೆ ಹೇಳಿ ದಾಳಿ ಮಾಡಿಸುತ್ತೇವೆ ಎ೦ದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ  ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎ೦ದು ಸಿಐಡಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಕೇಳಿದರೆ ಪೊಲೀಸರಿಗೆ ಮಾಹಿತಿ ನೀಡಿ
ಪ್ರಶ್ನೆಪತ್ರಿಕೆ ಸೋರಿಕೆ ಅತ್ಯ೦ತ ಗ೦ಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪಾರದಶ೯ಕವಾಗಿ ತನಿಖೆ ನಡೆಯುತ್ತಿದೆ. ಪ್ರಭಾವ ಬೀರಿ ಆರೋಪದಿ೦ದ  ಮುಕ್ತಗೊಳಿಸುವ ಅಥವಾ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ನಡೆಸಲು ಯತ್ನಿಸುವವರನ್ನು ನ೦ಬಬೇಡಿ. ಒ೦ದು ವೇಳೆ ಹಣ ಕೇಳಿದರೆ ಕೂಡಲೆ ದೂರವಾಣಿ ಸಂಖ್ಯೆ 94808  00123 ಕರೆ ಮಾಡಿ ಅಥವಾ alertcid@ksp.gov.in ವಿಳಾಸಕ್ಕೆ ಮೇಲ್ ಕಳುಹಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅಲ್ಲದೆ ಮಾಹಿತಿ ಕೊಡುವವರ ಹೆಸರು-ವಿಳಾಸ  ಗೌಪ್ಯವಾಗಿಡುತ್ತೇವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com