

ಬೆಂಗಳೂರು: ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ನಗರದ ವಿಠಲ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೇಲ್ ಮೇಲೆ ದಾಳಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಹೋಟೆಲ್ ಗೆ ಸೇರಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮ್ಯಾರಿಯೇಟ್ ಹೊಟೇಲ್ 2012-2013ನೇ ಸಾಲಿನ ಆಸ್ತಿ ತೆರಿಗೆಯನ್ನು ಹೋಟೆಲ್ ಪಾವತಿಸಿಲ್ಲ. ಸುಮಾರು 5.59 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಹೀಗಾಗಿ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ 5 ಸೋಫಾ ಮತ್ತು 25 ಕುರ್ಚಿಗಳನ್ನು ಬಿಬಿಎಂಪಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಿಬಿಎಂಪಿ ಜಂಟಿ ಆಯುಕ್ತ ಯತೀಶ್ ಕುಮಾಕರ್ ನೇತತ್ವದಲ್ಲಿ ದಾಳಿ ನಡೆಸಲಾಯಿತು. ಸದ್ಯ ಹೋಟೆಲ್ 1.9 ಕೋಟಿ ತೆರಿಗೆ ಕಟ್ಟಲು ಮುಂದಾಗಿದೆ. ಆದರೇ 5.59 ಕೋಟಿ ರೂ ಪೂರ್ಣ ಪ್ರಮಾಣದ ತೆರಿಗೆ ಹಣವನ್ನು ಕಟ್ಟುವಂತೆ ಬಿಬಿಎಂಪಿ ಪಟ್ಟು ಹಿಡಿದಿದೆ. ಬಿಬಿಎಂಪಿ ಅಧಿಕಾರಿಗಳ ಮನವೊಲಿಸಲು ಹೋಟೆಲ್ ಸಿಬ್ಬಂದಿ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.