ಸ್ವಾತಂತ್ರ್ಯ ದಿನ: 4 ವರ್ಷಗಳಲ್ಲಿ ಭಾರತಕ್ಕೆ 5 ಕೋಟಿ ತ್ರಿವರ್ಣ ಧ್ವಜ ನೀಡಿದ ಹುಬ್ಬಳ್ಳಿ

ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಎಲ್ಲರಿಗೂ ನೆನಪಾಗುವುದು ಸ್ವಾತಂತ್ರ್ಯದ ದಿನ. ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಇನ್ನು ಕೇವಲ ಒಂದು ದಿನ...
ಸ್ವಾತಂತ್ರ್ಯ ದಿನ: 4 ವರ್ಷಗಳಲ್ಲಿ ಭಾರತಕ್ಕೆ 5 ಕೋಟಿ ತ್ರಿವರ್ಣ ಧ್ವಜ ನೀಡಿದ ಹುಬ್ಬಳ್ಳಿ
ಸ್ವಾತಂತ್ರ್ಯ ದಿನ: 4 ವರ್ಷಗಳಲ್ಲಿ ಭಾರತಕ್ಕೆ 5 ಕೋಟಿ ತ್ರಿವರ್ಣ ಧ್ವಜ ನೀಡಿದ ಹುಬ್ಬಳ್ಳಿ

ಹುಬ್ಬಳ್ಳಿ: ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಎಲ್ಲರಿಗೂ ನೆನಪಾಗುವುದು ಸ್ವಾತಂತ್ರ್ಯದ ದಿನ. ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈಗಾಗಲೇ ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಲು ಸಿದ್ಧವಾಗಿದೆ.

ಭಾರತದೆಲ್ಲೆಡೆ 70ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಹಿಂದಿಗಿಂತಲೂ ಈ ಬಾರಿ ತ್ರಿವರ್ಣಧ್ವಜದ ಬೇಡಿಕೆ ಹೆಚ್ಚಾಗಿದೆ. ಹುಬ್ಬಳ್ಳಿಯಲ್ಲಿನ ಬೆಂಗೇರಿಯ ತ್ರಿವರ್ಣ ಧ್ವಜ ಘಟಕದಲ್ಲಿ ಈ ಹಿಂದಿಗಿಂತಲೂ ದಾಖಲೆ ಮಟ್ಟದಲ್ಲಿ ಬಾವುಟಗಳು ಮಾರಾಟವಾಗುತ್ತಿರುವುದಾಗಿ ತಿಳಿದುಬಂದಿದೆ.

ಸ್ವಾತಂತ್ರ್ಯ ದಿನದಂದೂ ಆಗಸದಲ್ಲಿ ಹಾರಾಡುವ ಧ್ವಜಕ್ಕೆ ಈ ಹಿಂದೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ತಯಾರಿಕಾ ಬಾವುಟಗಳಿಗೆ 4*6 ರಷ್ಟು ನಿರ್ದಿಷ್ಟ ಅಳತೆಯನ್ನು ನಿಗದಿಪಡಿಸಿತ್ತು. ಆದರೆ, ಈ ಬಾರಿ ಬಾವುಟಗಳ ಅಳತೆಯ ಮಟ್ಟವನ್ನು ಹೆಚ್ಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಸ್ತುತ ಈ ಘಟಕದಲ್ಲಿ 14 ಅಡಿ ಉದ್ದ ಮತ್ತು 21 ಅಗಲದಷ್ಟು ಬಾವುಟಗಳನ್ನು ತಯಾರಿಸಲಾಗುತ್ತಿದೆ. ಈ ಬಾವುಟಗಳನ್ನು ರು. 25,000ಕ್ಕೆ ಮಾರಾಟ ಮಾಡಲಾಗುತ್ತಿದೆ. ಬಾವುಟಗಳನ್ನು ಕಾಟನ್ ಬಟ್ಟೆಗಳಿಂದ ತಯಾರು ಮಾಡಲಾಗುತ್ತಿದ್ದು, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಹುಬ್ಬಳ್ಳಿಯ ಬೆಂಗೇರಿ ಧ್ವಜ ತಯಾರಿ ಘಟಕವನ್ನು ನೋಡಿಕೊಳ್ಳುತ್ತಿದ್ದು, 2004ರಲ್ಲಿ ಈ ಘಟಕವನ್ನು ಸ್ಥಾಪನೆ ಮಾಡಲಾಗಿತ್ತು. ಕಳೆದ 4 ವರ್ಷದಲ್ಲಿ ಈ ಘಟಕದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಬಾವುಟಗಳನ್ನು ಮಾರಾಟ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತೀ ಮೂರು ಅಥವಾ 4 ತಿಂಗಳಿಗೊಮ್ಮೆ ಬಾವುಟಗಳನ್ನು ಬದಲಾಯಿಸುವಂತೆ ಸರ್ಕಾರ ಎಲ್ಲಾ ಗ್ರಾಮ ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ಸೂಚನೆ ನೀಡಿದೆ. ಇದನ್ನು ಕಡ್ಡಾಯ ಮಾಡಿದೆ. ಇದರಂತೆ ಪ್ರತೀ ಜಿಲ್ಲೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳು ವರ್ಷಕ್ಕೆ ಮೂರು ಬಾರಿಯಾದರೂ ಬಾವುಟಗಳನ್ನು ಖರೀದಿ ಮಾಡಲೇಬೇಕಾಗಿದೆ ಎಂದು ಕೆಕೆಜಿಎಸ್ಎಸ್ ನ ಕಾರ್ಯದರ್ಶಿ ಬಿ.ಎಸ್. ಹಿರೇಮಠ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com