ಪತ್ನಿಯೊಂದಿಗೆ ಜಗಳ: ಚಲಿಸುತ್ತಿದ್ದ ಬಸ್'ನಿಂದ ಹಾರಿ ಪತಿ ಸಾವು

ಪತ್ನಿಯೊಂದಿಗೆ ಜಗಳವಾಡಿ ಬೇಸತ್ತ ಪತಿಯೊಬ್ಬ ಚಲಿಸುತ್ತಿದ್ದ ಬಸ್ ನಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಲಿಂಗನಸೂರು ತಾಲೂಕಿನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ರಾಯಚೂರು: ಪತ್ನಿಯೊಂದಿಗೆ ಜಗಳವಾಡಿ ಬೇಸತ್ತ ಪತಿಯೊಬ್ಬ ಚಲಿಸುತ್ತಿದ್ದ ಬಸ್ ನಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಲಿಂಗನಸೂರು ತಾಲೂಕಿನ ಅಂಕುಳಗೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕರಿಯಪ್ಪ (28) ಮೃತ ವ್ಯಕ್ತಿ. ದಂಪತಿಗಳು ದೇವಸ್ಥಾನವೊಂದಕ್ಕೆ ಹೋಗಿದ್ದರು. ಇದರಂತೆ ಹಿಂತಿರುಗಿ ಮನೆಗೆ ಬರಲು ಕೆಎಸ್ಆರ್ ಟಿಸ್ ಬಸ್ ಹತ್ತಿದ್ದರು. ಬಸ್ ನಲ್ಲಿಯೇ ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.

ಇದರಂತೆ ಪತ್ನಿಯ ಮಾತಿಗೆ ಬೇಸತ್ತ ಕರಿಯಪ್ಪ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಸ್ ನಿಂದ ಜಿಗಿದಿದ್ದಾನೆ. ಪರಿಣಾಮ ಕರಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com