ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮತ್ತೆ ಹೆಜ್ಜೇನು ದಾಳಿ: 2 ಗಂಭೀರ ಗಾಯ

ಸಸ್ಯಾಕಾಶಿ ಲಾಲ್ ಬಾಗ್ ನಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದು, ಹೆಜ್ಜೇನುಗಳ ದಾಳಿಯಿಂದಾಗಿ ಇಬ್ಬರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿರುವ ಘಟನೆ...
ಲಾಲ್ ಬಾಗ್
ಲಾಲ್ ಬಾಗ್

ಬೆಂಗಳೂರು: ಸಸ್ಯಾಕಾಶಿ ಲಾಲ್ ಬಾಗ್ ನಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದು, ಹೆಜ್ಜೇನುಗಳ ದಾಳಿಯಿಂದಾಗಿ ಇಬ್ಬರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಕಳೆದ ವರ್ಷವಷ್ಟೇ ಲಾಲ್ ಬಾಗ್ ನೋಡಲೆಂದು ಬಂದಿದ್ದ ಎರಡನೇ ತರಗತಿ ಓದುತ್ತಿದ್ದ ವೈಷ್ಣವಿ ಎಂಬ ಬಾಲಕಿಯನ್ನು ಇದೇ ಹೆಜ್ಜೇನುಗಳು ಕಚ್ಚಿ ಬಲಿ ಪಡೆದಿತ್ತು. ಮೊಮ್ಮಗಳ ಸಾವಿನ ದುಃಖವನ್ನು ತಡೆಯಲಾರದೆ ವೈಷ್ಣವಿಯ ಅಜ್ಜಿ ಹಾಗೂ ತಾತ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೀಗ ಮತ್ತೆ ಅದೇ ರೀತಿಯ ಘಟನೆ ಮರುಕಳಿಸಿದೆ. ಸಸ್ಯಕಾಶಿ ಲಾಲ್ ಬಾಗ್ ನನ್ನು ನೋಡಲೆಂದು ಬಂದಿದ್ದ ಹಾವೇರಿ ಮೂಲದ ಇಬ್ಬರು ಪ್ರವಾಸಿಗರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸ್ವಾತಂತ್ರೋತ್ಸವ ದಿನವಾದ್ದರಿಂದ ಹಾವೇರಿ ಮೂಲದ ಇಲೆಕ್ಟ್ರಿಕ್ ಕೆಲಸಗಾರರಾದ ಹನುಮಂತೇಗೌಡ (24) ಮತ್ತು ಶಿವರಾಜ್ (24) ಇಬ್ಬರು ಲಾಲ್ ಬಾಗ್ ಗೆ ಬಂದಿದ್ದರು. ಲಾಲ್ ಬಾಗ್ ನ ಪಶ್ಚಿಮ ದ್ವಾರದ ಬಳಿ ನಡೆದು ಹೋಗುತ್ತಿದ್ದ ವೇಳೆ ಹೆಜ್ಜೇನುಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿವೆ. ಕೂಡಲೇ ಅವರನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com