ಬೆಂಗಳೂರು: ಲಾಂಗು ಹಿಡಿದು ನಿವೃತ್ತ ಎಸಿಪಿಗೆ ಅವಾಜ್ ಹಾಕಿದ ಮಹಿಳೆ

ಕಟ್ಟಡ ನಿರ್ಮಾಣ ವಿಚಾರವಾಗಿ ಮಹಿಳೆಯೊಬ್ಬರು ಕೈಯಲ್ಲಿ ಲಾಂಗ್ ಹಿಡಿದು ನಿವೃತ್ತ ಎಸಿಪಿ ಲವಕುಮಾರ್ ಎಂಬುವರಿಗೆ ಅವಾಜ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ...
ಲೇಡಿ ಡಾನ್
ಲೇಡಿ ಡಾನ್
Updated on: 

ಬೆಂಗಳೂರು: ಕಟ್ಟಡ ನಿರ್ಮಾಣ ವಿಚಾರವಾಗಿ ಮಹಿಳೆಯೊಬ್ಬರು ಕೈಯಲ್ಲಿ ಲಾಂಗ್ ಹಿಡಿದು ನಿವೃತ್ತ ಎಸಿಪಿ ಲವಕುಮಾರ್ ಎಂಬುವರಿಗೆ ಅವಾಜ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೂಡಿ ಬಳಿ ಜಮೀನು ವಿಷಯವಾಗಿ ಅರ್ಚನ ಗುಪ್ತಾ ಎಂಬುವರು ಕೈಯಲ್ಲಿ ಲಾಂಗ್ ಹಿಡಿದು ತಮ್ಮ ಜಮೀನಿನಲ್ಲಿ ನಿಂತು ಲವಕುಮಾರ್ ಗೆ ಕರೆ ಮಾಡಿದ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ಮಹಿಳೆ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಹಲ್ಲೆಗೆ ಯತ್ನ ಕೇಸು ದಾಖಲಾಗಿದೆ.

ಲವಕುಮಾರ್ ಅವರು ಗುಪ್ತಾ ಎಂಬುವರ ಪತ್ನಿಯಿಂದ ಕೊಲೆ ಬೆದರಿಕೆ ಬಂದಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾಗಿದೆ.

ಮಹಿಳೆ ಧಮ್ಕಿ ಹಾಕಿದ್ದು ಹೀಗೆ
ಇವ್ರು ಜನ ಮಾತ್ರ ಇದ್ದಾರ, ನಮ್ಮ ಜನ ಇಲ್ವಾ, ನೂರು ಜನನ್ನ ಕರ್ಕೊಂಡು ಬಾ ಇಲ್ಲಿಗೆ, ಎಲ್ರೂ ಮಚ್ಚ್ ಎತ್ಕೊಂಡ್ ಬರ್ಬೇಕು ಅರ್ಥ ಆಗ್ತಾ ಇದ್ಯಾ. 10 ನಿಮಿಷದಲ್ಲಿ ಇಲ್ಲಿ ಇರ್ಬೇಕು. ನನ್ನು ಮಗಂದ್ ತಲೆ ಬೀಳ್ಬೇಕು ಇಲ್ಲಿ ಇವತ್ತು. ಇಮಿಡಿಯಟ್ ಆಗಿ 100 ಜನ ಮಚ್ಚು ಎತ್ಕೊಂಡು ಇಲ್ಲಿಗೆ ಬರ್ಬೇಕು ಎಂದು ಗುಪ್ತಾ ಪತ್ನಿ ಅರ್ಚನಾ ಗುಪ್ತಾ ಕೈಯಲ್ಲಿ ಮಚ್ಚು ಹಿಡು ಧಮ್ಕಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com